ವರ್ಷದ ಕೊನೆಗೆ ನಡೆಯಲಿರೋ 2025ರ ಐಪಿಎಲ್ ಮೆಗಾ ಆಕ್ಷನ್
ಐಪಿಎಲ್ ಮೆಗಾ ಆಕ್ಷನ್ಗೆ ಮುಂಬೈ ಇಂಡಿಯನ್ಸ್ಗೆ ದೊಡ್ಡ ಆಘಾತ
ಮುಂಬೈ ಇಂಡಿಯನ್ಸ್ ತಂಡದ ಮೊದಲ ವಿಕೆಟ್ ಪತನ; ಯಾರದು?
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ 6 ತಿಂಗಳು ಬಾಕಿ ಇದೆ. ವರ್ಷದ ಕೊನೆಗೆ 2025ರ ಮೆಗಾ ಆಕ್ಷನ್ ನಡೆಯಲಿದೆ. ಈ ಮುನ್ನವೇ ಎಲ್ಲಾ ಐಪಿಎಲ್ ತಂಡಗಳಲ್ಲೂ ಭಾರೀ ಬದಲಾವಣೆ ಆಗುತ್ತಿದೆ. ಮುಂಬೈ ಇಂಡಿಯನ್ಸ್ ತಂಡದ ಮೊದಲ ವಿಕೆಟ್ ಪತನವಾಗಿದೆ.
ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಸಿಬ್ಬಂದಿ ವರ್ಗದಲ್ಲಿ ಜಾಹೀರ್ ಖಾನ್ ಕಾಣಿಸಿಕೊಂಡಿದ್ದರು. ಈಗ ಹೊಸ ಹುದ್ದೆಯೊಂದಿಗೆ ಐಪಿಎಲ್ಗೆ ಜಹೀರ್ ಖಾನ್ ಕಮ್ಬ್ಯಾಕ್ ಮಾಡಿದ್ದಾರೆ. ಇವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ.
ಮುಂಬೈಗೆ ಕೈ ಕೊಟ್ಟ ಜಹೀರ್ ಖಾನ್
2018-2022 ರವರೆಗೆ ಜಹೀರ್ ಖಾನ್ ಮುಂಬೈ ಇಂಡಿಯನ್ಸ್ ತಂಡದ ನಿರ್ದೇಶಕರಾಗಿದ್ದರು. ಬಳಿಕ ಜಾಗತಿಕ ಅಭಿವೃದ್ಧಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಇದಾದ ನಂತರ ಇಷ್ಟು ದಿನಗಳ ಕಾಲ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಂಡಿದ್ರು. ಈಗ ಮುಂಬೈ ಇಂಡಿಯನ್ಸ್ಗೆ ಜಹೀರ್ ಖಾನ್ ಕೈ ಕೊಟ್ಟಿದ್ದು, ಎಲ್‌ಎಸ್‌ಜಿ ಮೆಂಟರ್ ಆಗಿ ನೇಮಕಗೊಂಡಿದ್ದಾರೆ.
ಐಪಿಎಲ್ 2023 ಟೂರ್ನಿ ಬಳಿಕ ಗೌತಮ್ ಗಂಭೀರ್ ಎಲ್‌ಎಸ್‌ಜಿ ಮೆಂಟರ್ ಸ್ಥಾನ ತೊರೆದು ಕೆಕೆಆರ್ ತಂಡ ಸೇರಿದ್ದರು. ಅಂದಿನಿಂದ ಲಕ್ನೋ ತಂಡದ ಮೆಂಟರ್ ಸ್ಥಾನ ಖಾಲಿ ಇತ್ತು. ಮೆಂಟರ್ ಸ್ಥಾನಕ್ಕೆ ಈಗ ಎಲ್‌ಎಸ್‌ಜಿ ಫ್ರಾಂಚೈಸಿ ಜಹೀರ್ ಖಾನ್ ಅವರನ್ನು ಕರೆ ತಂದಿದೆ.
ಇನ್ನು, ಈಗಾಗಲೇ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಜಹೀರ್ ಖಾನ್‌ಗೆ ಎಲ್‌ಎಸ್‌ಜಿ ಮೆಂಟರ್ ಜರ್ಸಿ ಕೊಟ್ಟು ಸ್ವಾಗತಿಸಿದ್ದಾರೆ. ಈ ಬಗ್ಗೆ ಫ್ರಾಂಚೈಸಿ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದೆ.
ಜಹೀರ್ ಖಾನ್ ಮೇಲೆ ಹೆಚ್ಚು ನಿರೀಕ್ಷೆ!
ಗೌತಮ್ ಗಂಭೀರ್ ಮೆಂಟರ್ ಆಗಿದ್ದಾಗ ಲಕ್ನೋ ತಂಡ 2 ವರ್ಷ ಪ್ಲೇ ಆಫ್ ತಲುಪಿತ್ತು. ಬಳಿಕ ಗಂಭೀರ್ ಕೆಕೆಆರ್ ತಂಡ ಸೇರಿಕೊಂಡರು. ಎಲ್‌ಎಸ್‌ಜಿ ತಂಡ ಕಳೆದ ಐಪಿಎಲ್ ಟೂರ್ನಿಯಲ್ಲಿ ಪ್ಲೇ-ಆಫ್ಸ್ ತಲುಪಲು ವಿಫಲವಾಯಿತು. ಹಾಗಾಗಿ ಹಳಿ ತಪ್ಪಿರುವ ಲಕ್ನೋ ತಂಡವನ್ನು ಜಹೀರ್ ಖಾನ್ ಸರಿಪಡಿಸಲಿದ್ದಾರೆ ಎನ್ನುವ ನಿರೀಕ್ಷೆ ಭಾರೀ ಇದೆ.
ಇದನ್ನೂ ಓದಿ: ಕನ್ನಡಿಗನಿಗೆ ಮತ್ತೊಂದು ಶಾಕ್; KL ರಾಹುಲ್ ಬಗ್ಗೆ ಮಹತ್ವದ ಅಪ್ಡೇಟ್ ಕೊಟ್ಟ ಲಕ್ನೋ ತಂಡದ ಮಾಲೀಕ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ