newsfirstkannada.com

ಸೈಲೆಂಟ್ ಹೆಜ್ಜೆಯಿಟ್ಟ ರೋಹಿತ್ ಶರ್ಮಾ; ಮುಂಬೈ ಇಂಡಿಯನ್ಸ್​ನಿಂದ ಬಿಗ್​​ ಅಪ್​​ಡೇಟ್ಸ್..!

Share :

Published August 30, 2024 at 11:06am

    ಹರಾಜಿಗೂ ಮುನ್ನ ಮುಂಬೈ ತಂಡದಿಂದ ಬಿಗ್​ ಅಪ್​ಡೇಟ್​

    ರೋಹಿತ್​ ಮೇಲೆ ಉಳಿದ ಫ್ರಾಂಚೈಸಿಗಳ ಹದ್ದಿನ ಕಣ್ಣು..!

    ಅಂಬಾನಿ ಬ್ರಿಗೆಡ್​ನ ರೋಹಿತ್​ ರಿಟೈನ್​​ ಲೆಕ್ಕಾಚಾರ ಏನು..?

ಐಪಿಎಲ್​ ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್​​ ತಂಡದಿಂದ ಹೊಸ ಸುದ್ದಿ ಹೊರಬಿದ್ದಿದೆ. ಕಳೆದ ಸೀಸನ್​ನಲ್ಲಿ ಅತೀ ಬುದ್ದಿವಂತಿಕೆ ತೋರಿಸಲು ಹೋಗಿ ಹಳ್ಳಕ್ಕೆ ಬಿದ್ದ ಅಂಬಾನಿ ಬ್ರಿಗೆಡ್​​, ಈಗ​ ಹಳೆ ನಾಯಕನ ಪಾದವೇ ಗತಿ ಅಂತಿದೆ. ರೊಚ್ಚಿಗೆದ್ದಿರೋ ರೋಹಿತ್​ ಶರ್ಮಾನ ಉಳಿಸಿಕೊಳ್ಳಲು ಸರ್ಕಸ್​ ಆರಂಭಿಸಿದೆ. ಹಿಟ್​ಮ್ಯಾನ್​​ ಸೈಲೆಂಟ್​ ಹೆಜ್ಜೆಯಿಡ್ತಿದ್ದು ಕುತೂಹಲ ಹೆಚ್ಚಾಗಿದೆ.

18ನೇ ಸೀಸನ್​ ಐಪಿಎಲ್​ ಟೂರ್ನಿ ಈ ಹಿಂದೆ ಯಾವ ಟೂರ್ನಿಯೂ ಮಾಡದಷ್ಟು ಸದ್ದು ಮಾಡ್ತಿದೆ. ಡಿಸೆಂಬರ್​ನಲ್ಲಿ ನಡೆಯೋ ಮೆಗಾ ಆಕ್ಷನ್​​ಗೆ ಫ್ರಾಂಚೈಸಿಗಳ ವಲಯದಲ್ಲಿ ಸಿದ್ಧತೆ ಜೋರಾಗಿದೆ. ಆಟಗಾರರ ರಿಟೈನ್​ -ರಿಲೀಸ್​ ಲೆಕ್ಕಾಚಾರದ ಜೊತೆಗೆ ಸಪೋರ್ಟ್​​​ ಸ್ಟಾಫ್​ಗಳ ಬದಲಾವಣೆ ನಡೀತಿದೆ. ಐಪಿಎಲ್​ನ ಬೆಳವಣಿಗೆಗಳು ವಿಶ್ವ ಕ್ರಿಕೆಟ್​ ಲೋಕದ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ:ಸ್ಟಾರ್​​ಗಳಿಗೊಂದು ನ್ಯಾಯ, ಉಳಿದವರಿಗೊಂದು ನ್ಯಾಯ; ಬಿಸಿಸಿಐ ವಿರುದ್ಧ ಭುಗಿಲೆದ್ದ ಆಕ್ರೋಶ

ಹರಾಜಿಗೂ ಮುನ್ನ ಐಪಿಎಲ್​ನ ಮೋಸ್ಟ್​ ಸಕ್ಸಸ್​​ಫುಲ್​ ಫ್ರಾಂಚೈಸಿ ಮುಂಬೈ ಇಂಡಿಯನ್ಸ್​ ತಂಡದಿಂದ ಬಿಗ್​ ಅಪ್​ಡೇಟ್​ ಹೊರಬಿದ್ದಿದೆ. ಕಳೆದ ಐಪಿಎಲ್​ಗೂ ಮುನ್ನ ಶಾಕಿಂಗ್​ ನಿರ್ಧಾರ ಕೈಗೊಂಡು ಚಾಂಪಿಯನ್​ ಕ್ಯಾಪ್ಟನ್ ರೋಹಿತ್​ ಶರ್ಮಾಗೆ ಮುಂಬೈ ಕೊಕ್​ ಕೊಟ್ಟಿತ್ತು. ಗುಜರಾತ್​​ನಿಂದ ಹಾರ್ದಿಕ್​ನ ಕರೆ ತಂದು, ನಾಯಕನ ಪಟ್ಟ ಕಟ್ಟಿತ್ತು. ಈ ಒಂದು ನಿರ್ಧಾರ ತಂಡಕ್ಕೇ BACK FIRE ಆಗಿತ್ತು. ಇದೀಗ ಆ ತಪ್ಪನ್ನ ತಿದ್ದಿಕೊಳ್ಳಲು ಫ್ರಾಂಚೈಸಿ ಮುಂದಾಗಿದೆ.

ರೋಹಿತ್​ ಉಳಿಸಿಕೊಳ್ಳಲು ಸರ್ಕಸ್
ರೋಹಿತ್​ ಶರ್ಮಾನ ನಾಯಕತ್ವ ಕೆಳಗಿಳಿಸಿ ತೀವ್ರವಾದ ಮುಜುಗರ ಅನುಭವಿಸಿದ್ದ ಮುಂಬೈ ಇಂಡಿಯನ್ಸ್​ ಇದೀಗ ಕೆಟ್ಟ ಮೇಲೆ ಬುದ್ದಿ ಕಲಿತಂತಿದೆ. ನಿರೀಕ್ಷಿತ ಪರ್ಫಾಮೆನ್ಸ್​ ನೀಡುವಲ್ಲಿ ಫೇಲ್​​ ಆದ ಹಾರ್ದಿಕ್​ ಪಾಂಡ್ಯಗೆ ತಂಡದಿಂದ ಕೊಕ್​ ಕೊಡಲು ಮುಂಬೈ ಫ್ರಾಂಚೈಸಿ ವಲಯದಲ್ಲಿ ಚರ್ಚೆ ನಡೆದಿದೆ. ಹಾರ್ದಿಕ್​ಗೆ ಕೊಕ್​ ಕೊಟ್ರೆ, ರೋಹಿತ್​ ಉಳಿಸಿಕೊಳ್ಳಬಹುದು ಅನ್ನೋದು ತಂಡದ ಲೆಕ್ಕಾಚಾರವಾಗಿದೆ.

ಮತ್ತೆ ಮುಂಬೈ ಸಾರಥಿಯಾಗ್ತಾರಾ ರೋಹಿತ್​ ಶರ್ಮಾ?
ಹಾರ್ದಿಕ್​​ ಪಾಂಡ್ಯಗೆ ಕೊಕ್​ ಕೊಟ್ಟು ರೋಹಿತ್​ ಶರ್ಮಾ ಮರು ಪಟ್ಟಾಭಿಷೇಕ ಮಾಡೋ ಲೆಕ್ಕಾಚಾರದಲ್ಲಿ ಮುಂಬೈ ತಂಡವಿದೆ. ಆದ್ರೆ, ಈ ಆಫರ್​ನ ಸ್ವಾಭಿಮಾನಿ ರೋಹಿತ್​ ಅಷ್ಟು ಸುಲಭಕ್ಕೆ ಒಪ್ಪುವವರಲ್ಲ. ಟೀಮ್​ ಇಂಡಿಯಾದ ನಾಯಕ ಕೂಡ ಆಗಿರೋದ್ರಿಂದ, ಮತ್ತೆ ಐಪಿಎಲ್​​​​ ನಾಯಕತ್ವದ ಹೊರೆಯನ್ನೂ ಹೊರೋದು ಅನುಮಾನ ಆಗಿದೆ. ಒಂದೆಡೆ ತಂಡದಲ್ಲಿ ಉಳಿಯಲು ನಿರ್ಧರಿಸಿದ್ದೇ ಆದ್ರೆ, ನಾಯಕತ್ವಕ್ಕೆ ಸೂರ್ಯಕುಮಾರ್​ ಅಥವಾ ಜಸ್​​ಪ್ರಿತ್​ ಬೂಮ್ರಾ ಹೆಸರು ಸೂಚಿಸೋ ಸಾಧ್ಯತೆಯಿದೆ.

ಇದನ್ನೂ ಓದಿ:ಗಾಯಕ್ವಾಡ್​​ಗೆ ಬಿಗ್ ಶಾಕ್; ಧೋನಿ ಶಿಷ್ಯನಿಗೆ ಗಾಳ ಹಾಕಿದ CSK, ಕ್ಯಾಪ್ಟನ್ಸಿ ಆಫರ್..!

ಮನವೊಲಿಕೆಗೆ ಮಣೀತಾರಾ ರೊಚ್ಚಿಗೆದ್ದಿದ್ದ ರೋಹಿತ್?
ರೋಹಿತ್​ ಶರ್ಮಾ.. ಮುಂಬೈ ಇಂಡಿಯನ್ಸ್​​ ತಂಡದ ಹಣೆ ಬರಹವನ್ನೇ ಬದಲಿಸಿದ ನಾಯಕ. ಒಂದಲ್ಲ.. ಎರಡಲ್ಲ.. ಬರೋಬ್ಬರಿ ತಂಡಕ್ಕೆ 5 ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ. ಇಂತಹ ಯಶಸ್ಸಿ ನಾಯಕನನ್ನ ಹೇಳದೆ ಕೇಳದೆ ಸಾರಥ್ಯದಿಂದ ಮುಂಬೈ ಫ್ರಾಂಚೈಸಿ ಕೆಳಗಿಳಿಸಿ ಅವಮಾನಿಸಿತ್ತು. ಇದ್ರಿಂದ ಬೇಸರಗೊಂಡಿದ್ದ ರೋಹಿತ್​​ ಟೂರ್ನಿಯ ಮಧ್ಯದಲ್ಲೇ ಇದು ನನ್ನ ಕೊನೆಯ ಸೀಸನ್​ ಎಂದು ಗೆಳೆಯ ಅಭಿಷೇಕ್​ ನಾಯರ್​ ಬಳಿ ಹೇಳಿಕೊಂಡಿದ್ರು. ಹೀಗೆ ರೊಚ್ಚಿಗೆದ್ದಿದ್ದ ರೋಹಿತ್​, ಇದೀಗ ಮನವೊಲಿಕೆಗೆ ಮಣೀತಾರಾ ಅನ್ನೋದು ಕುತೂಹಲವಾಗಿದೆ.

ರೋಹಿತ್​ ಮೇಲೆ ಉಳಿದ ಫ್ರಾಂಚೈಸಿಗಳ ಹದ್ದಿನ ಕಣ್ಣು
ಒಂದೆಡೆ ಚಾಂಪಿಯನ್​ ನಾಯಕನನ್ನ ಉಳಿಸಿಕೊಳ್ಳಲು ಮುಂಬೈ ಸರ್ಕಸ್​​ ಆರಂಭಿಸಿದ್ರೆ, ಇನ್ನೊಂದೆಡೆ ಉಳಿದ ಕೆಲ ತಂಡಗಳು ರೋಹಿತ್​ನ ಖರೀದಿಸಲು ಹೊಂಚು ಹಾಕು ಕುಳಿತಿವೆ. ಹಿಟ್​ಮ್ಯಾನ್​ ಮೇಲೆ ಕೋಟಿ ಕೋಟಿ ಹಣ ವ್ಯಯಿಸಲು ಈಗಿನಿಂದಲೇ ಲೆಕ್ಕಾಚಾರಗಳನ್ನ ಹಾಕ್ತಿವೆ. ಮುಂಬೈ ಆಫರ್​ನ ರಿಜೆಕ್ಟ್​ ಮಾಡಿ ರೋಹಿತ್​ ಹರಾಜಿನ ಕಣಕ್ಕೆ ಬಂದ್ರೆ, ಐಪಿಎಲ್​ ಇತಿಹಾಸ MOST EXPENSIVE​ ಪ್ಲೇಯರ್​ ಆಗೋದ್ರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ:ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ತೆರವಾದ BCCI ಕಾರ್ಯಾಧ್ಯಕ್ಷ ಸ್ಥಾನದ ರೇಸ್​​ನಲ್ಲಿ ಮೂವರು..!

ಒಂದೆಡೆ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ರೋಹಿತ್​ನ ರಿಟೈನ್​ ಮಾಡೋ ಸರ್ಕಸ್​ ಶುರುಮಾಡಿದೆ. ಇನ್ನೊಂದೆಡೆ ಉಳಿದ ಕೆಲ ತಂಡಗಳು ರೋಹಿತ್​ ಖರೀದಿಗೆ ಕಾದು ಕುಳಿತಿವೆ. ರೋಹಿತ್​ ಶರ್ಮಾ ಸೈಲೆಂಟ್​ ಮೂಡ್​​ ಜಾರಿದ್ದಾರೆ. ರೋಹಿತ್​ ಮೌನದ ಹಿಂದ ನಿರ್ಧಾರ ಏನು ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸೈಲೆಂಟ್ ಹೆಜ್ಜೆಯಿಟ್ಟ ರೋಹಿತ್ ಶರ್ಮಾ; ಮುಂಬೈ ಇಂಡಿಯನ್ಸ್​ನಿಂದ ಬಿಗ್​​ ಅಪ್​​ಡೇಟ್ಸ್..!

https://newsfirstlive.com/wp-content/uploads/2024/08/Rohit-sharma-1-2.jpg

Load More