newsfirstkannada.com

×

IPL 2025: ಆರ್​​​ಸಿಬಿಗೆ ಮುಂಬೈನ​ ಸ್ಟಾರ್​ ಆಲ್​​ರೌಂಡರ್​ ಎಂಟ್ರಿ; ಬೆಂಗಳೂರಿಗೆ ಬಂತು ಮೆಗಾ ಪವರ್​​

Share :

Published September 22, 2024 at 10:29pm

Update September 22, 2024 at 10:30pm

    2025ರ ಇಂಡಿಯನ್ ಪ್ರೀಮಿಯರ್ ಲೀಗ್‌ ಮೆಗಾ ಹರಾಜು

    3 ವರ್ಷಗಳ ನಂತರ ನಡೆಯುತ್ತಿರೋ ಐಪಿಎಲ್ ಮೆಗಾ ಆಕ್ಷನ್​​​

    ಆರ್​​​ಸಿಬಿಗೆ ಮುಂಬೈ ಇಂಡಿಯನ್ಸ್​ ಯುವ ಪ್ಲೇಯರ್​ ಎಂಟ್ರಿ!

2025ರ ಇಂಡಿಯನ್ ಪ್ರೀಮಿಯರ್ ಲೀಗ್‌ ಮೆಗಾ ಹರಾಜು ಪ್ರಕ್ರಿಯೆಗೆ ಬಿಸಿಸಿಐ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. 3 ವರ್ಷಗಳ ನಂತರ ಐಪಿಎಲ್ ಮೆಗಾ ಹರಾಜು ನಡೆಯುತ್ತಿದ್ದು, ಇದು ಕ್ರಿಕೆಟ್‌ ಅಭಿಮಾನಿಗಳಿಗೆ ಭಾರೀ ಕುತೂಹಲ ಮೂಡಿಸಿದೆ. ಮೆಗಾ ಆಕ್ಷನ್​​ನಲ್ಲಿ ಸ್ಟಾರ್​ ಆಟಗಾರರನ್ನು ಖರೀದಿ ಮಾಡಿ ಬಲಿಷ್ಠ ತಂಡಗಳನ್ನು ಕಟ್ಟಲು ಎಲ್ಲಾ ಫ್ರಾಂಚೈಸಿಗಳು ಮುಂದಾಗಿವೆ.

ಹರಾಜಿಗೂ ಮುನ್ನವೇ ಟೀಮ್ ಇಂಡಿಯಾದ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ನಡೆದ ಡಾ. ಕೆ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿಯಲ್ಲಿ ಗೋವಾ ಪರ ಆಡಿದ್ದ ಅರ್ಜುನ್​​ ಬೆಂಕಿ ಬೌಲಿಂಗ್​ ಮಾಡಿದ್ದಾರೆ.

ಅರ್ಜುನ್​ ಅದ್ಭುತ ಬೌಲಿಂಗ್​​!

ಕ್ಯಾಪ್ಟನ್ ಕೆ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿ ಪಂದ್ಯವೊಂದರಲ್ಲಿ ಕರ್ನಾಟಕ ಮತ್ತು ಗೋವಾ ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಕರ್ನಾಟಕದ ಗೆಲುವಿನ ಓಟಕ್ಕೆ ಅರ್ಜುನ್ ಕಡಿವಾಣ ಹಾಕಿದರು. ಕರ್ನಾಟಕದ ವಿರುದ್ಧ ಬರೋಬ್ಬರಿ 9 ವಿಕೆಟ್‌ ತೆಗೆದರು. ಅರ್ಜುನ್ ಪ್ರದರ್ಶನದ ನೆರವಿನಿಂದ ಗೋವಾ 189 ರನ್‌ಗಳ ಭರ್ಜರಿ ಜಯ ದಾಖಲಿಸಿತು.

ಐಪಿಎಲ್ 2025ರ ಮೇಲೆ ಕಣ್ಣು

2023ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಡೆಬ್ಯೂ ಮಾಡಿದ ಅರ್ಜುನ್​ಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ಆದರೆ, ಈ ಬಾರಿ ಪ್ರತಿ ತಂಡ 4 ಆಟಗಾರರನ್ನು ಉಳಿಸಿಕೊಳ್ಳಬೇಕಾದ ಕಾರಣ ಮುಂಬೈ ಇಂಡಿಯನ್ಸ್​ ತಂಡವು ಅರ್ಜುನ್​ ಅವರನ್ನು ಕೈ ಬಿಡಬಹುದು. ಒಂದು ವೇಳೆ ಅರ್ಜುನ್​​ ಹರಾಜಿಗೆ ಬಂದರೆ ಆರ್​​ಸಿಬಿ ಖರೀದಿ ಮಾಡುವುದಂತೂ ಪಕ್ಕಾ. ಇದಕ್ಕೆ ಕಾರಣ ಆರ್​​ಸಿಬಿ ಯುವ ಆಲ್​ರೌಂಡರ್​ಗಾಗಿ ಎದುರು ನೋಡುತ್ತಿದೆ.

ಇದನ್ನೂ ಓದಿ: ‘ಬಾಂಗ್ಲಾ ವಿರುದ್ಧ ಗೆಲ್ಲಲು ಭಾರತದ ಈ ಆಟಗಾರನೇ ಕಾರಣ’- ಸ್ಫೋಟಕ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IPL 2025: ಆರ್​​​ಸಿಬಿಗೆ ಮುಂಬೈನ​ ಸ್ಟಾರ್​ ಆಲ್​​ರೌಂಡರ್​ ಎಂಟ್ರಿ; ಬೆಂಗಳೂರಿಗೆ ಬಂತು ಮೆಗಾ ಪವರ್​​

https://newsfirstlive.com/wp-content/uploads/2024/08/RCB_TEAM-3.jpg

Load More