newsfirstkannada.com

×

ಆಕ್ಷನ್​​ಗೆ ಮುನ್ನವೇ ಸಚಿನ್​ ಪುತ್ರನಿಗೆ ಬಿಗ್​ ಶಾಕ್​​; ಮುಂಬೈ ಇಂಡಿಯನ್ಸ್​ ತಂಡದಿಂದ ಕೊಕ್​​!

Share :

Published September 17, 2024 at 6:24pm

    2025ರ ಇಂಡಿಯನ್ ಪ್ರೀಮಿಯರ್ ಲೀಗ್‌ ಮೆಗಾ ಹರಾಜು!

    3 ವರ್ಷಗಳ ನಂತರ ನಡೆಯುತ್ತಿರೋ ಐಪಿಎಲ್ ಮೆಗಾ ಆಕ್ಷನ್​​​

    ಮುಂಬೈ ಇಂಡಿಯನ್ಸ್​ ತಂಡದಿಂದ ಸಚಿನ್​ ಪುತ್ರನಿಗೆ ಕೊಕ್​​​

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್‌ ಮೆಗಾ ಹರಾಜು ಪ್ರಕ್ರಿಯೆಗೆ ಬಿಸಿಸಿಐ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. 3 ವರ್ಷಗಳ ನಂತರ ಐಪಿಎಲ್ ಮೆಗಾ ಹರಾಜು ನಡೆಯುತ್ತಿದ್ದು, ಇದು ಕ್ರಿಕೆಟ್‌ ಅಭಿಮಾನಿಗಳಿಗೆ ಭಾರೀ ಕುತೂಹಲ ಮೂಡಿಸಿದೆ.

ಮೆಗಾ ಆಕ್ಷನ್​​ನಲ್ಲಿ ಸ್ಟಾರ್​ ಆಟಗಾರರನ್ನು ಖರೀದಿ ಮಾಡಿ ಬಲಿಷ್ಠ ತಂಡಗಳನ್ನು ಕಟ್ಟಲು ಎಲ್ಲಾ ಫ್ರಾಂಚೈಸಿಗಳು ಮುಂದಾಗಿವೆ. ಹರಾಜಿಗೂ ಮುನ್ನವೇ ಟೀಮ್ ಇಂಡಿಯಾದ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್​ಗೆ ಶಾಕಿಂಗ್​ ನ್ಯೂಸ್​ ಒಂದಿದೆ.

2023ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಡೆಬ್ಯೂ ಮಾಡಿದ ಅರ್ಜುನ್​ಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ಆದರೆ, ಈ ಬಾರಿ ಪ್ರತಿ ತಂಡ 4 ಆಟಗಾರರನ್ನು ಉಳಿಸಿಕೊಳ್ಳಬೇಕಾದ ಕಾರಣ ಮುಂಬೈ ಇಂಡಿಯನ್ಸ್​ ತಂಡವು ಅರ್ಜುನ್​ ಅವರನ್ನು ಕೈ ಬಿಡಬಹುದು. ಒಂದು ವೇಳೆ ಅರ್ಜುನ್​​ ಹರಾಜಿಗೆ ಬಂದರೆ ಆರ್​​ಸಿಬಿ ಖರೀದಿ ಮಾಡುವುದಂತೂ ಪಕ್ಕಾ ಆಗಿದೆ.

ಬೆಂಕಿ ಬೌಲಿಂಗ್

ಸದ್ಯ ನಡೆಯುತ್ತಿರೋ ಡಾ. ಕೆ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿಯಲ್ಲಿ ಗೋವಾ ಪರ ಆಡುತ್ತಿರೋ ಅರ್ಜುನ್​​ ಬೆಂಕಿ ಬೌಲಿಂಗ್​ ಮಾಡಿದ್ದಾರೆ. ಪಂದ್ಯವೊಂದರಲ್ಲಿ ಕರ್ನಾಟಕ ಮತ್ತು ಗೋವಾ ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಕರ್ನಾಟಕದ ಗೆಲುವಿನ ಓಟಕ್ಕೆ ಅರ್ಜುನ್ ಕಡಿವಾಣ ಹಾಕಿದರು. ಕರ್ನಾಟಕದ ವಿರುದ್ಧ ಬರೋಬ್ಬರಿ 9 ವಿಕೆಟ್‌ ತೆಗೆದರು. ಅರ್ಜುನ್ ಪ್ರದರ್ಶನದ ನೆರವಿನಿಂದ ಗೋವಾ 189 ರನ್‌ಗಳ ಭರ್ಜರಿ ಜಯ ದಾಖಲಿಸಿತು.

ಇದನ್ನೂ ಓದಿ: ಮೆಗಾ ಆಕ್ಷನ್​​ಗೆ ಮುನ್ನವೇ ಬಿಗ್​ ಡೀಲ್​​; ಆರ್​​​ಸಿಬಿ ತಂಡಕ್ಕೆ ಸಚಿನ್​​ ಪುತ್ರನ ಎಂಟ್ರಿ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆಕ್ಷನ್​​ಗೆ ಮುನ್ನವೇ ಸಚಿನ್​ ಪುತ್ರನಿಗೆ ಬಿಗ್​ ಶಾಕ್​​; ಮುಂಬೈ ಇಂಡಿಯನ್ಸ್​ ತಂಡದಿಂದ ಕೊಕ್​​!

https://newsfirstlive.com/wp-content/uploads/2023/06/arjun_tendulkar.jpg

Load More