ಮುಂಬೈ- ಜೈಪುರ್ ಎಕ್ಸ್ಪ್ರೆಸ್ ರೈಲಿನ ಮೇಲೆ ಗುಂಡಿನ ದಾಳಿ
ಪಿಎಫ್ ಕಾನ್ಸ್ಸ್ಟೇಬಲ್ನಿಂದ ಗುಂಡಿನ ದಾಳಿ, 4 ಸಾವು
ದಾಳಿ ನಡೆಸಿದ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು
ಇಂದು ಬೆಳ್ಳಂ ಬೆಳ್ಳಗ್ಗೆ ಚಲಿಸುತ್ತಿದ್ದ ಮುಂಬೈ- ಜೈಪುರ್ ಎಕ್ಸ್ಪ್ರೆಸ್ ರೈಲಿನ ಮೇಲೆ ಗುಂಡಿನ ದಾಳಿ ನಡೆದಿದೆ. ಆರ್ಪಿಎಫ್ ಕಾನ್ಸ್ಸ್ಟೇಬಲ್ ಚೇತನ್ ಸಿಂಗ್ (30) ಎಂಬಾತ ಈ ಗುಂಡಿನ ದಾಳಿ ನಡೆಸಿರೋದಾಗಿ ತಿಳಿದುಬಂದಿದೆ.
ವಾಪಿ ಮತ್ತು ಸೂರತ್ ನಿಲ್ದಾಣದ ನಡುವೆ ಗುಂಡಿನ ದಾಳಿ ನಡೆದಿದೆ. ಆರ್ಪಿಎಫ್ ಕಾನ್ಸ್ಸ್ಟೇಬಲ್ ಚೇತನ್ ಸಿಂಗ್ ನಡೆಸಿದ ಗುಂಡಿನ ದಾಳಿಯ ಪರಿಣಾಮ ನಾಲ್ವರೂ ಹತರಾಗಿದ್ದಾರೆ. ಮೃತರಲ್ಲಿ ಓರ್ವ ಎಎಸ್ಐ ಅಧಿಕಾರಿ ಮತ್ತಿಬ್ಬರು ಪ್ರಯಾಣಿಕರಾಗಿದ್ದಾರೆ. ಏಸಿ ಕೋಚ್ನ ಬಿ5ನಲ್ಲಿ ದಾಳಿ ನಡೆದಿದ್ದು, ದಾಳಿ ನಡೆಸಿದ್ದ ಆಯುಧ ಸಮೇತ ಆರೋಪಿಯನ್ನ ಈಗಾಗಲೇ ವಶಕ್ಕೆ ಪಡೆದುಕೊಂಡಿದ್ದಾರೆ.
ಮೃತರನ್ನು ಕಾಂದಿವಲಿಯ ಶತಾಬ್ಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಚೇತನ್ ಸಿಂಗ್ ಈ ಗುಂಡಿನ ದಾಳಿ ನಡೆಸಲು ಕಾರಣವೇನು ಎಂಬ ಮಾಹಿತಿ ತನಿಖೆಯ ಬಳಿಕವೇ ತಿಳಿದುಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ