ಫ್ಲಾಟ್ ಡೋರ್ ಓಪನ್ ಮಾಡಿದಾಗ ಪೊಲೀಸರಿಗೆ ಸಿಕ್ಕಿದ್ದೇನು?
ತುಂಡು, ತುಂಡು ಮಾಡಿ ಕುಕ್ಕರ್‌ನಲ್ಲಿ ಬೇಯಿಸಿದ ಪಾಪಿ
ಮನೋಜ್ ಸಾನೆಗೆ ವೈದ್ಯಳ ಪರಿಚಯ ಆಗಿದ್ದು ಹೇಗೆ?
ಮುಂಬೈ: ಲೀವಿಂಗ್ ಟುಗೆದರ್‌ನಲ್ಲಿದ್ದ ಸಂಗಾತಿಯನ್ನು ತುಂಡು, ತುಂಡು ಮಾಡಿ ಕುಕ್ಕರ್‌ನಲ್ಲಿ ಬೇಯಿಸಿದ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಕುಕ್ಕರ್‌ನಲ್ಲಿ ಬೇಯಿಸಿ, ಮಿಕ್ಸರ್‌ನಲ್ಲಿ ರುಬ್ಬಿ, ನಾಯಿಗಳಿಗೆ ಬಿಸಾಕಿದ ನರರಾಕ್ಷಸ ಸ್ಫೋಟಕ ವಿಷಯಗಳನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. 32 ವರ್ಷದ ಯುವತಿಯನ್ನು 56 ವರ್ಷದ ವ್ಯಕ್ತಿ ಇಷ್ಟು ಅಮಾನುಷವಾಗಿ ಹತ್ಯೆ ಮಾಡಿದ್ದೇಕೆ ಅನ್ನೋ ಕಾರಣಗಳು ಹೊರ ಬೀಳುತ್ತಿದೆ.
ಮುಂಬೈ ಮೀರಾ ರೋಡ್‌ನ ಫ್ಲಾಟ್ ನಂಬರ್ 704ನಲ್ಲಿ ನಡೆದಿರೋ ಈ ಮರ್ಡರ್ ನಿಜಕ್ಕೂ ರಣಭೀಕರವಾಗಿದೆ. ಪೊಲೀಸರು ಈ ಫ್ಲಾಟ್ ಡೋರ್ ಓಪನ್ ಮಾಡಿದಾಗ ಕೊಲೆಯಾದ ಯುವತಿಯ ತಲೆ ಕೂದಲು, ತುಂಡು, ತುಂಡಾಗಿ ಕತ್ತರಿಸಿದ ಮೂಳೆಗಳು, ಒಂದು ಮಿಕ್ಸರ್, ಬೇಯಿಸಿದ ಕುಕ್ಕರ್ ಪತ್ತೆಯಾಗಿದೆ. ಮೂರು ಬ್ಯಾಗ್‌ಗಳಲ್ಲಿ ಮೃತದೇಹದ ಬಿಡಿ ಭಾಗಗಳನ್ನು ವಶಪಡಿಸಿಕೊಂಡಿರೋ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮನೆಯೊಳಗೆ ಸಂಗಾತಿಯನ್ನು ತುಂಡು, ತುಂಡಾಗಿ ಕತ್ತರಿಸಿದ ಆರೋಪಿ ಮನೋಜ್ ಸಾನೆ ಪೊಲೀಸರ ವಶದಲ್ಲಿದ್ದಾನೆ. ಹಿರಿಯ ಪೊಲೀಸ್ ಅಧಿಕಾರಿಗಳ ವಿಚಾರಣೆ ವೇಳೆ ಮನೋಜ್ ಬಹಳಷ್ಟು ಸ್ಫೋಟಕ ವಿಷಯಗಳನ್ನು ಬಾಯ್ಬಿಟ್ಟಿದ್ದಾನೆ. ಪ್ರಮುಖವಾಗಿ ನನಗೆ HIV ಪಾಸಿಟಿವ್ ಇದೆ. ನಾನು ಕೊಲೆಯಾದ ಸರಸ್ವತಿ ವೈದ್ಯಳನ್ನು ಮಗಳಂತೆ ನೋಡಿಕೊಳ್ಳುತ್ತಿದ್ದೆ ಎಂದಿದ್ದಾನೆ.
ಕೊಲೆ ಆರೋಪಿ ಮನೋಜ್ ಸಾನೆಗೆ ಒಳ್ಳೆ ಕೆಲಸ ಸಿಗದೇ ಒಂದು ರೇಷನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಯೇ ಮನೋಜ್‌ಗೆ ವೈದ್ಯಳ ಪರಿಚಯವಾಗಿದೆ. ಸರಸ್ವತಿ 10ನೇ ತರಗತಿ ಪರೀಕ್ಷೆ ಬರೆಯಲು ಆಸೆ ಪಟ್ಟಿದ್ದಳು. ನಾನು ಅವಳಿಗೆ ಗಣಿತ ಪಾಠ ಮಾಡುತ್ತಿದ್ದೆ ಎಂದು ಮನೋಜ್ ಸಾನೆ ಹೇಳಿಕೆ ನೀಡಿದ್ದಾನೆ. ಇನ್ನು ವೈದ್ಯ ಸ್ವಭಾವದಲ್ಲಿ ತುಂಬಾ ಪೊಸೆಸಿವ್ ಆಗಿದ್ದಳು. ಅವಳೇ ಆತ್ಮಹತ್ಯೆ ಮಾಡಿಕೊಂಡಳು ಎಂದು ಆರೋಪಿ ಮನೋಜ್ ಸಾನೆ ಹೇಳಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ