newsfirstkannada.com

ಅಬ್ಬಾ.. ಚಿನ್ನದ ಅಂಗಡಿಗೆ ಹೋಗಿ ಮುದ್ದಿನ ಶ್ವಾನಕ್ಕೆ ಸರ ಕೊಡಿಸಿದ ಮಹಿಳೆ; ಇದರ ಬೆಲೆ ಎಷ್ಟು ಗೊತ್ತಾ?

Share :

Published July 7, 2024 at 6:44pm

  ನಾಯಿಯ ಮೇಲಿನ ಪರಿಶುದ್ಧವಾದ ಪ್ರೀತಿಗೆ ನೆಟ್ಟಿಗರು ಫುಲ್ ಫಿದಾ

  ಶ್ವಾನದ ಮೇಲಿನ ಪ್ರೀತಿಯನ್ನು ವಿಶೇಷವಾಗಿ ತೋರಿಸಿಕೊಟ್ಟ ಮಹಿಳೆ

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ ಈ ವಿಡಿಯೋ

ಮುಂಬೈ: ನಿಷ್ಠೆ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಶ್ವಾನ. ಸಾಕು ಪ್ರಾಣಿಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬೆಕ್ಕು, ನಾಯಿ, ಮೊಲ, ಕುರಿ, ಹಸು ಹೀಗೆ ಹತ್ತು ಹಲವು ಪ್ರಾಣಿಗಳನ್ನು ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ತಮ್ಮ ಮನೆಯಲ್ಲಿ ಸಾಕುವುದುಂಟು. ಅದರಲ್ಲೂ ಸಾಕು ಪ್ರಾಣಿಗಳಲ್ಲಿ ಖ್ಯಾತಿ ಪಡೆದಿರೋ ಸಾಕು ನಾಯಿಗಳನ್ನು ಮನೆ ಮಾಲೀಕರು ಖರೀದಿ ಮಾಡುತ್ತಾರೆ. ಖರೀದಿ ಮಾಡಿ ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ.

ಮನೆಗೊಂದು ಮರ ಊರಿಗೊಂದು ವನ ಎಂಬ ಗಾದೆ ಮಾತಿನಂತೆ ಎಲ್ಲರ ಮನೆಯಲ್ಲೂ ನಾಯಿ. ಒಂದು ತುತ್ತು ಅನ್ನ ಹಾಕಿದರೆ ಸಾಕು ಇಡೀ ಜನ್ಮಪೂರ್ತಿ ನಮ್ಮ ಜೊತೆ ಇರೋ ಏಕೈಕ ಪ್ರಾಣಿ ಎಂದರೆ ಅದು ಶ್ವಾನ. ಆದರೆ ಇಲ್ಲೊಬ್ಬ ಮಹಿಳೆ ಶ್ವಾನದ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಹೌದು, ಮಹಿಳೆಯೊಬ್ಬರು 2.5ಲಕ್ಷ ರೂಪಾಯಿ ಖರ್ಚು ಮಾಡಿ ತನ್ನ ಮುದ್ದಿನ ಶ್ವಾನಕ್ಕೆ ಚಿನ್ನದ ಸರವನ್ನು ಹಾಕಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ  ವೈರಲ್​​ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮನಸೋತಿದ್ದಾರೆ.

ಇದನ್ನೂ ಓದಿ: ದಾಸ ಜೈಲಿನಲ್ಲಿರುವಾಗಲೇ ಶಾಸ್ತ್ರಿ ಥಿಯೇಟರ್‌ಗೆ ಲಗ್ಗೆ.. 20 ವರ್ಷಗಳ ಬಳಿಕ ರೀ ರಿಲೀಸ್​; ಯಾವಾಗ ಗೊತ್ತಾ?

ವೈರಲ್ ಆದ ವಿಡಿಯೋದಲ್ಲಿ ಏನಿದೆ?

ಸರಿತಾ ಎಂಬುವವರು ತನ್ನ ಮುದ್ದಿನ ಟೋಗರ್ ಶ್ವಾನದ ಹುಟ್ಟು ಹಬ್ಬವನ್ನು ಬಹಳ ವಿಶೇಷವಾಗಿ ಆಚರಣೆ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಟೋಗರ್​ನ ಹುಟ್ಟು ಹಬ್ಬ ನಿಮಿತ್ತ ಅನಿಲ್ ಜ್ಯುವೆಲರ್ಸ್‌ ಅಂಗಡಿಗೆ ಕಡೆದುಕೊಂಡು ಹೋಗಿದ್ದಾರೆ. ಬಳಿಕ 2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಖರೀದಿ ಮಾಡಿದ್ದಾರೆ. ನಂತರ ಮುದ್ದಿನ ಶ್ವಾನಕ್ಕೆ ಚಿನ್ನದ ಸರ ಹಾಕಿದ್ದಾರೆ. ಇದನ್ನು ನೋಡಿದ ಅಂಗಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಖುಷ್​ ಆಗಿದ್ದಾರೆ. ಜೊತೆಗೆ ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಶ್ವಾನದ ಮೇಲೆ ಇರೋ ಮಹಿಳೆಯ ಪ್ರೀತಿಗೆ ಮನಸೋತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಚಿನ್ನದ ಅಂಗಡಿಗೆ ಹೋಗಿ ಮುದ್ದಿನ ಶ್ವಾನಕ್ಕೆ ಸರ ಕೊಡಿಸಿದ ಮಹಿಳೆ; ಇದರ ಬೆಲೆ ಎಷ್ಟು ಗೊತ್ತಾ?

https://newsfirstlive.com/wp-content/uploads/2024/07/dog-lover.jpg

Load More