newsfirstkannada.com

‘ನಾನು ಜೈಲಿನಲ್ಲಿ ಇರಲು ಸಿದ್ಧ; ಮುನಿರತ್ನಗೆ ತೊಂದರೆ ಕೊಟ್ಟರೆ ಏನಾಗುತ್ತೆ ಅಂದರೆ..’ ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸಚಿವ

Share :

16-08-2023

    ನನ್ನ ರಾಜಕೀಯ ಗುರು ಬಿ.ಕೆ.ಹರಿಪ್ರಸಾದ್-ಮುನಿರತ್ನ ಕೌಂಟರ್

    ರಾಜರಾಜೇಶ್ವರಿನಗರ, ಮಲ್ಲೇಶ್ವರ ಎರಡು ಕ್ಷೇತ್ರ ಟಾರ್ಗೆಟ್

    ‘ಕಾಂಗ್ರೆಸ್​ಗೆ ಹೋಗಲ್ಲ, ಬೇಕಿದ್ರೆ ರಾಜಕೀಯ ನಿವೃತ್ತಿ’

ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕಿದೆ ಎಂಬ ವಿಚಾರಕ್ಕೆ ಮಾಜಿ ಸಚಿವ ಮುನಿರತ್ನ ಪ್ರತಿಕ್ರಿಯಿಸಿ.. ನಾನಂತೂ ಬಿಜೆಪಿ ಬಿಟ್ಟು ಹೋಗಲ್ಲ. ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆಯೇ ಹೊರತು, ಕಾಂಗ್ರೆಸ್‌ಗೆ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ದ್ವೇಷ ಇಲ್ಲ..!

ನನಗೆ ಕಾಂಗ್ರೆಸ್‌ಗೆ ಹೋಗುವ ಅಗತ್ಯ ಇಲ್ಲ. ನಮ್ಮ ಜೊತೆ ಬಂದವರು ಯಾರೂ ಹೋಗುತ್ತಾರೋ ಇಲ್ಲವೋ ಅನ್ನೋದು ನನಗೆ ಗೊತ್ತಿಲ್ಲ. ನಾನಂತೂ ಕಾಂಗ್ರೆಸ್‌ಗೆ ಹೋಗಲ್ಲ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಉತ್ತರ ಕೊಡುತ್ತಾರಾ? ಬೆಂಗಳೂರು ನಗರದ ಉಸ್ತುವಾರಿಯಾಗಿ ಉತ್ತರ ಕೊಡುತ್ತಾರಾ? ಅದನ್ನು ಮೊದಲು ಅವರು ಹೇಳಲಿ. ನನಗೆ ಯಾರ ಜೊತೆಗೂ ರಾಜಕೀಯ ದ್ವೇಷ ಇಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಪರಮೇಶ್ವರ್ ಯಾರ ಮೇಲೂ ನನಗೆ ವೈಯುಕ್ತಿಕ ದ್ವೇಷವಿಲ್ಲ. ಬಿಜೆಪಿಯಲ್ಲಿ ನನಗೆ ಗೌರವ ಇದೆ. ಪಕ್ಷ ಗೌರವದಿಂದ ನಡೆಸಿಕೊಳ್ಳುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಬಹಳ ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ. ಎಸ್‌.ಟಿ.ಸೋಮಶೇಖರ್​​ಗೆ ಡಿ.ಕೆ.ಶಿವಕುಮಾರ್ ರಾಜಕೀಯ ಗುರು ಇರಬಹುದು, ಅದು ಅವರ ಅಭಿಪ್ರಾಯ.

ನನ್ನ ರಾಜಕೀಯ ಗುರು ಬಿಕೆ ಹರಿಪ್ರಸಾದ್

ನನಗೆ ರಾಜಕೀಯ ಗುರು ಬಿ.ಕೆ. ಹರಿಪ್ರಸಾದ್, ಕೇವಲ ರಾಜಕೀಯ ಗುರು ಮಾತ್ರ ಅಲ್ಲ. ನನಗೆ ಎಲ್ಲವೂ ಬಿ.ಕೆ.ಹರಿಪ್ರಸಾದ್‌ ಅವರೇ. ಕೇವಲ ರಾಜಕೀಯ ಗುರು ಅಂದರೆ ಅದು ಕಡಿಮೆ ಆಗಿಬಿಡುತ್ತದೆ. ಮುನಿರತ್ನರಿಗೆ ತೊಂದರೆ ಕೊಟ್ಟರೆ ಬಾಕಿ 27 ಕ್ಷೇತ್ರಗಳಿಗೂ ಮರು ತನಿಖೆ ಆಗಲಿದೆ. ಇಲ್ಲಿ ತನಿಖೆ ಮಾಡುವ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು‌. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಅವ್ಯವಹಾರ ಆಗಿದೆ ಎಂದು ವರದಿ ಕೊಟ್ಟರೆ, ಸರ್ವಜ್ಞನಗರದಿಂದಲ್ಲೂ ವರದಿ ಹೋಗುತ್ತದೆ. ಆ ಎಲ್ಲಾ ವರದಿಗಳು ಮೇಲಕ್ಕೆ ಹೋಗಲಿದೆ ಎಂದರು.
ರಾಜರಾಜೇಶ್ವರಿನಗರ ಹಾಗೂ ಮಲ್ಲೇಶ್ವರಂ ಎರಡು ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಉಪ-ಮುಖ್ಯಮಂತ್ರಿ ಆದ ಬಳಿಕ 14 ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿರುವುದು ಇದೇ ಮೊದಲು. ರಾಜರಾಜೇಶ್ವರಿನಗರ ಕ್ಷೇತ್ರದ ಅಭಿವೃದ್ಧಿ ಆಗುತ್ತದೆ ಎಂದರೆ ನಾನು ಜೈಲಿನಲ್ಲಿ ಇರಲು ಸಿದ್ಧ. ನನಗೆ ಆಶೀರ್ವಾದ ಮಾಡಿರುವುದು ರಾಜರಾಜೇಶ್ವರಿನಗರದ ಮತದಾರರು ಎಂದಿದ್ದಾರೆ.

ನಾನು ಜ್ಯೋತಿಷಿ ಅಲ್ಲ

ನಾನು ಜ್ಯೋತಿಷಿ ಅಲ್ಲ. ಆರು ತಿಂಗಳು, ಒಂದು ವರ್ಷ, ಎರಡು ವರ್ಷ ಆಗಬಹುದು. ಕೆಲವೊಬ್ಬರು ಹೇಳುತ್ತಾರೆ. ಅದು ಅವರವರ ಅಭಿಪ್ರಾಯ. ಬೆಂಗಳೂರಲ್ಲಿ ಕೂಲಿ ಕಾರ್ಮಿಕರು 70% ಹೊರಗೆ ಹೋಗಿದ್ದಾರೆ. ಬೆಂಗಳೂರಿನಲ್ಲಿ ಕಾಮಗಾರಿಗಳು ನಡೆಯುತ್ತಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಾದ ಕೆಲಸಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಈಗ ಯಾವೆಲ್ಲಾ ಅಧಿಕಾರಿಗಳಿದ್ದಾರೋ, ಆಗಲೂ ಅವರೇ ಇದ್ದರು. ಈವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಗುತ್ತಿಗೆದಾರರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಇಡೀ ಬೆಂಗಳೂರಿನಲ್ಲಿ ಇಂದು ಅನುದಾನ ಕೊಡುತ್ತಿಲ್ಲ. ಕಾಮಗಾರಿಯೂ ನಡೆಯುತ್ತಿಲ್ಲ ಎಂದ ಮುನಿರತ್ನ ವಾಗ್ದಾಳಿ ನಡೆಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾನು ಜೈಲಿನಲ್ಲಿ ಇರಲು ಸಿದ್ಧ; ಮುನಿರತ್ನಗೆ ತೊಂದರೆ ಕೊಟ್ಟರೆ ಏನಾಗುತ್ತೆ ಅಂದರೆ..’ ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸಚಿವ

https://newsfirstlive.com/wp-content/uploads/2023/08/MUNIRATNA.jpg

Load More