newsfirstkannada.com

ಮೈಸೂರಲ್ಲಿ ದರ್ಶನ್ ಅರೆಸ್ಟ್ ಆಗಿದ್ದೆ ರೋಚಕ.. ಪೊಲೀಸರ ಕಾರ್ಯಕ್ಕೆ ನಟಿ ರಮ್ಯಾ ಮೆಚ್ಚುಗೆ

Share :

Published June 14, 2024 at 6:41pm

  ಕಾನೂನನ್ನು ಮೀರಿ ಯಾರೂ ಇಲ್ಲ, ಅಪರಾಧಿಗೆ ಶಿಕ್ಷೆಯಾಗಲಿ

  ರೇಣುಕಾಸ್ವಾಮಿ ಕೊಲೆ ಪ್ರರಕಣದಲ್ಲಿ ದಿನಕ್ಕೊಂದು ಟ್ವಿಸ್ಟ್

  ಪ್ರಕರಣದಲ್ಲಿ ಪವಿತ್ರಾಗೌಡ ಎ1, ನಟ ದರ್ಶನ್ ಎ2 ಆರೋಪಿ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಮತ್ತವರ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಧೈರ್ಯದಿಂದ ಮುನ್ನುಗ್ಗಿ ನಟ ದರ್ಶನ್​​ರನ್ನ ಅರೆಸ್ಟ್ ಮಾಡಿದ ಪೊಲೀಸ್​ ಅಧಿಕಾರಿಗಳ ಕಾರ್ಯಕ್ಕೆ ಸ್ಯಾಂಡಲ್​ವುಡ್​ ನಟಿ ರಮ್ಯಾ ಅವರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಕ್ರೂರತ್ವ, ಮೃಗಿಯ ಗುಣಗಳು ದರ್ಶನ್​ನಲ್ಲಿವೆ’.. ಶಿಕ್ಷೆ ಹೇಗಿರಬೇಕಂತ ಮಾಜಿ ಸಚಿವ ಹೇಳಿದ್ರು?

ಈ ಕುರಿತು ತಮ್ಮ ಎಕ್ಸ್​ ಅಕೌಂಟ್​​ನಲ್ಲಿ ಪೋಸ್ಟ್ ಶೇರ್ ಮಾಡಿರುವ ನಟಿ ರಮ್ಯಾ ಅವರು, ವಿಜಯನಗರದ ಅಸಿಸ್ಟೆಂಟ್​ ಪೊಲೀಸ್ ಕಮಿಷನರ್ ಗಿರೀಶ್ ನಾಯ್ಕ್ ಹಾಗೂ ಎಸಿಪಿ ಚಂದನ್ ಕುಮಾರ್ ಅವರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದರ್ಶನ್​ ಇರುವ ಸ್ಥಳಕ್ಕೆ ಹೋಗಿ ಅವರು ಕೊಟ್ಟ ಉತ್ತರಕ್ಕೆ ಪ್ರತ್ಯುತ್ತರ ಕೊಟ್ಟು ಅರೆಸ್ಟ್ ಮಾಡಿ, ಬಳಿಕ ಪೊಲೀಸ್​ ಕಾರಿನಲ್ಲೇ ದರ್ಶನ್​​ ಕೂರಿಸಿಕೊಂಡು ಅಧಿಕಾರಿಗಳು ಠಾಣೆಗೆ ಬಂದಿದ್ದಾರೆ. ಕಾನೂನನ್ನು ಮೀರಿ ಯಾರೂ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು ಎಂದು ರಮ್ಯಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೊಹ್ಲಿಯ ಬ್ಯಾಟಿಂಗ್ ಸ್ಲಾಟ್ ಚೇಂಜ್ ಮಾಡಿ ತಮಾಷೆ ನೋಡ್ತಿದ್ದಾರಾ.. ವಿರಾಟ್​ ವೈಫಲ್ಯಕ್ಕೆ ಕಾರಣವೇನು?

ದರ್ಶನ್​ಗೆ ಖಡಕ್ ಆಗಿ ಹೇಳಿದ ಎಸಿಪಿ ಚಂದನ್ ಕುಮಾರ್

ಬಂಧಿಸಲು ಮೈಸೂರಿಗೆ ಪೊಲೀಸರು ಹೋಗಿದ್ದಾಗ ಹೆಚ್ಚು ಹೊತ್ತು ಪೊಲೀಸರನ್ನು ದರ್ಶನ್ ಕಾಯಿಸಿದ್ದಾರೆ. ಇದರಿಂದ ಬೇಸತ್ತಿದ್ದ ಎಸಿಪಿ ಚಂದನ್​ ಕುಮಾರ್ ಅರೆಸ್ಟ್ ಮಾಡಲು ಹೋಗಿದ್ದಾರೆ. ಈ ವೇಳೆ I Know everything got messed up. you carry on, i will come in my car ಎಂದು ದರ್ಶನ್, ಪೊಲೀಸರಿಗೆ ಹೇಳುತ್ತಾರೆ.

ಇದಕ್ಕೆ ಪ್ರತ್ಯುತ್ತರ ಕೊಟ್ಟ ಚಂದನ್ ಕುಮಾರ್ ಅವರು, will you come with us now or should you be..? ಎಂದು ಹೇಳಿ ದರ್ಶನ್​​ರನ್ನ ಪೊಲೀಸ್​ ಕಾರಿನಲ್ಲೇ ಕೂರಿಸಿಕೊಂಡು ಬಂದಿದ್ದಾರೆ.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಗ್ಗು ಮತ್ತು ಅನು ಎನ್ನುವ ಆರೋಪಿಗಳು ಇಂದು ಚಿತ್ರದುರ್ಗದ ಡಿವೈಎಸ್​ಪಿ ಕಚೇರಿಗೆ ಬಂದು ಶರಣಾಗಿದ್ದಾರೆ. ಜಗ್ಗು ಎ6 ಆರೋಪಿಯಾದರೆ, ಅನು ಅನ್ನುವನು ಎ7 ಆರೋಪಿಯಾಗಿದ್ದಾನೆ. ಈ ಇಬ್ಬರು ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದವರಾಗಿದ್ದಾರೆ. ಅದರಂತೆ ಪವಿತ್ರಾಗೌಡ ಎ1, ನಟ ದರ್ಶನ್ ಎ2 ಆರೋಪಿಯಾಗಿದ್ದು ಕೇಸ್​ನ ತನಿಖೆ ಇನ್ನು ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈಸೂರಲ್ಲಿ ದರ್ಶನ್ ಅರೆಸ್ಟ್ ಆಗಿದ್ದೆ ರೋಚಕ.. ಪೊಲೀಸರ ಕಾರ್ಯಕ್ಕೆ ನಟಿ ರಮ್ಯಾ ಮೆಚ್ಚುಗೆ

https://newsfirstlive.com/wp-content/uploads/2023/11/ramya.jpg

Load More