newsfirstkannada.com

Rahul Gandhi: ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆ ಮಾಡಲಾಗಿದೆ -ಸಂಸತ್​​ನಲ್ಲಿ ರಾಹುಲ್ ಗಾಂಧಿ ಭಾಷಣ

Share :

09-08-2023

    ರಾವಣ ಇಬ್ಬರ ಮಾತು ಕೇಳುತ್ತಿದ್ದ, ಮೋದಿ ಕೂಡ..!

    ರಾಮ, ರಾವಣನ ಹತ್ಯೆ ಮಾಡಲಿಲ್ಲ, ಆದರೆ -ರಾಹುಲ್

    ಬಿಜೆಪಿ ನಾಯಕರನ್ನು ದೇಶದ್ರೋಹಿಗಳು ಎಂದ ರಾಹುಲ್

ಅನರ್ಹತೆಗೆ ಒಳಗಾಗಿ ಮತ್ತೆ ಸಂಸತ್ ಸ್ಥಾನಕ್ಕೆ ಅರ್ಹರಾಗಿರುವ ಕೇರಳದ ವೈಯನಾಡು ಸಂಸದ ರಾಹುಲ್ ಗಾಂಧಿ, ಮುಂಗಾರು ಸಂಸತ್ ಅಧಿವೇಶನದಲ್ಲಿ ಭಾಷಣ ಮಾಡಿದರು.

ರಾಹುಲ್ ಗಾಂಧಿ ಭಾಷಣದ ಹೈಲೈಟ್ಸ್​..!

ಕಳೆದ ವರ್ಷ 130 ದಿನಗಳ ಕಾಲ ನಾನು ‘ಭಾರತ್ ಜೋಡೋ ಯಾತ್ರೆ’ ಮಾಡಿದೆ. ಸಮುದ್ರದ ತೀರದಿಂದ ಕಾಶ್ಮೀರದ ಹಿಮದವರೆಗೂ ಹೋಗಿ ಬಂದೆ. ನನ್ನ ಈ ಯಾತ್ರೆ ಇನ್ನೂ ಮುಕ್ತಾಯವಾಗಿಲ್ಲ. ಯಾತ್ರೆ ಖಂಡಿತವಾಗಿಯೂ ಲಡಾಖ್​ಗೆ ಬರಲಿದೆ. ನಾನು ಯಾತ್ರೆ ಕೈಗೊಂಡಂತಹ ಸಮಯದಲ್ಲಿ, ರಾಹುಲ್ ನೀವು ಏಕೆ ಹೋಗುತ್ತಿದ್ದೀರಿ ಎಂದು ಬಹಳ ಮಂದಿ ಕೇಳಿದ್ದರು. ನಿಮ್ಮ ಗುರಿ ಏನೆೆಂದು ಕೇಳಿದ್ದರು. ಆರಂಭದಲ್ಲೂ ನನಗೂ ಯಾತ್ರೆ ಏಕೆ ಆರಂಭಿಸಿದೆ ಎಂದು ಗೊತ್ತಿರಲಿಲ್ಲ. ನಾನು ಯೋಚಿಸಿದೆ, ಹಿಂದೂಸ್ತಾನ್ ಅರ್ಥ ಮಾಡಿಕೊಳ್ಳಲು ಹೋಗುತ್ತಿದ್ದೇವೆ ಅಂದುಕೊಂಡೆ.

ದೇಶದ ಜನರ ಧ್ವನಿ ಕೇಳಲು ಅಹಂಕಾರವನ್ನು ಬಿಟ್ಟುಬಿಡಬೇಕು. ಕೆಲವು ದಿನದ ಹಿಂದೆ ನಾನು ಮಣಿಪುರಕ್ಕೆ ಹೋಗಿದ್ದೆ. ಆದರೆ ನಮ್ಮ ಪ್ರಧಾನಿ ಮಣಿಪುರಕ್ಕೆ ಹೋಗಿಲ್ಲ. ಪ್ರಧಾನಿಗೆ ಮಣಿಪುರ ಹಿಂದೂಸ್ತಾನ್ (ಭಾರತ) ಅಲ್ಲ. ಮಣಿಪುರವನ್ನು ಇಬ್ಭಾಗ ಮಾಡಿದ್ದೀರಿ. ಮಣಿಪುರದ ನಿರಾಶ್ರಿತರ ಶಿಬಿರಗಳಿಗೆ ಹೋಗಿದ್ದೆ. ಮಣಿಪುರದ ಕ್ಯಾಂಪ್​ಗಳಲ್ಲಿ ಮಹಿಳೆಯರು, ಮಕ್ಕಳ ಜೊತೆಗೆ ಮಾತನಾಡಿದೆ. ಈ ಕೆಲಸವನ್ನು ನಮ್ಮ ಪ್ರಧಾನಿ ಇದುವರೆಗೂ ಮಾಡಿಲ್ಲ ಎಂದು ಬೇಸರ ಹೊರಹಾಕಿದರು.

ಮಣಿಪುರದಲ್ಲಿ ಹಿಂದೂಸ್ತಾನದ ಹತ್ಯೆ

ಮಣಿಪುರದಲ್ಲಿ ಮಹಿಳೆಯೊಬ್ಬರು ‘ತನ್ನ ಏಕ ಮಾತ್ರ ಮಗನಿಗೆ ಗುಂಡು ಹೊಡೆದರು’ ಎಂದು ಹೇಳಿದರು. ಅಂದು ರಾತ್ರಿ ನಾನು ಶವದ ಜೊತೆ ಕಾಯುತ್ತಿದ್ದೆ. ಧರಿಸಿರುವ ಬಟ್ಟೆ ಮಾತ್ರ ನನ್ನ ಬಳಿ ಇವೆ. ಮಗನ ಫೋಟೋ ಮಾತ್ರ ನನ್ನ ಬಳಿ ಇದೆ ಎಂದು ಆ ಮಹಿಳೆ ಹೇಳಿದರು. ಹಾಗೆಯೇ ಮತ್ತೊಂದು ಕ್ಯಾಂಪ್‌ನ ಮಹಿಳೆಯರ ಜೊತೆಗೂ ಮಾತನಾಡಿದೆ. ಇವರು (ಬಿಜೆಪಿ) ಮಣಿಪುರದಲ್ಲಿ ಹಿಂದೂಸ್ತಾನ್​ದ ಹತ್ಯೆ ಮಾಡಿದ್ದಾರೆ. ಹಿಂದೂಸ್ತಾನ್​​ದ ಮರ್ಡರ್ ಮಾಡಿದ್ದಾರೆ ಎಂದು ಆಕ್ರೋಶ ಭರಿತವಾಗಿ ಮಾತನಾಡಿದರು.

‘ಹಿಂದೂಸ್ತಾನ್‌ ಮರ್ಡರ್ ಮಾಡಿದ್ದಾರೆ’ ಎಂಬ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆ ಕೇಳುವಂತೆ ಕಿರಣ್ ರಿಜಿಜು ಆಗ್ರಹಿಸಿದರು. ಮಾತ್ರವಲ್ಲ, ರಾಹುಲ್ ಗಾಂಧಿ ಭಾಷಣಕ್ಕೆ ಬಿಜೆಪಿ ಸದಸ್ಯರಿಂದ ಅಡ್ಡಿಪಡಿಸಿದರು. ತೀವ್ರ ವಿರೋಧದ ನಡುವೆಯೂ ರಾಹುಲ್ ಗಾಂಧಿ ತಮ್ಮ ಭಾಷಣ ಮುಂದುವರಿಸಿ, ಭಾರತ ಒಂದು ಧ್ವನಿ. ಭಾರತ ಜನರ ಧ್ವನಿ. ಈ ಧ್ವನಿಯ ಹತ್ಯೆಯನ್ನು ಮಣಿಪುರದಲ್ಲಿ ಮಾಡಿದ್ದೀರಿ. ಭಾರತ ಮಾತೆಯ ಹತ್ಯೆಯನ್ನು ಮಣಿಪುರದಲ್ಲಿ ಮಾಡಿದ್ದೀರಿ. ಮಣಿಪುರ ಜನರ ಹತ್ಯೆ ಮಾಡಿ, ಭಾರತ ಮಾತೆಯ ಹತ್ಯೆ ಮಾಡಿದ್ದೀರಿ. ಬಿಜೆಪಿ ನಾಯಕರು ದೇಶದ್ರೋಹಿಗಳು ಎಂದು ವಾಗ್ದಾಳಿ ನಡೆಸಿದರು.

ರಾವಣ ಇಬ್ಬರ ಮಾತು ಕೇಳುತ್ತಿದ್ದ..

ರಾವಣ ಕೂಡ ಇಬ್ಬರ ಮಾತು ಮಾತ್ರ ಕೇಳುತ್ತಿದ್ದ. ಅದೇ ರೀತಿ ಮೋದಿ , ಅಮಿತ್ ಶಾ ಹಾಗೂ ಅದಾನಿ ಮಾತು ಮಾತ್ರ ಕೇಳುತ್ತಾರೆ. ಲಂಕಾಗೆ ಹನುಮಾನ್ ಬೆಂಕಿ ಹಚ್ಚಲಿಲ್ಲ. ರಾವಣನ ಅಹಂಕಾರದಿಂದ ಬೆಂಕಿ ಬಿತ್ತು. ರಾಮ, ರಾವಣನ ಹತ್ಯೆ ಮಾಡಲಿಲ್ಲ. ರಾವಣನ ಅಹಂಕಾರ ಅವರ ಹತ್ಯೆ ಮಾಡಿತು. ನೀವು ಇಡೀ ದೇಶಕ್ಕೆ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚುತ್ತಿದ್ದೀರಿ. ಹರಿಯಾಣಕ್ಕೆ ಬೆಂಕಿ ಹಚ್ಚಿದ್ದೀರಿ ಎಂದು ಕಿಡಿಕಾರಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rahul Gandhi: ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆ ಮಾಡಲಾಗಿದೆ -ಸಂಸತ್​​ನಲ್ಲಿ ರಾಹುಲ್ ಗಾಂಧಿ ಭಾಷಣ

https://newsfirstlive.com/wp-content/uploads/2023/08/RAHUL_GANDHI-11.jpg

Load More