newsfirstkannada.com

ಮುರುಘಾ ಮಠದ ಶಿವಮೂರ್ತಿ ಶರಣರು ಬಿಡುಗಡೆ ಆಗ್ತಾರಾ? ಇಂದು ಜಾಮೀನು ಭವಿಷ್ಯ ನಿರ್ಧಾರ

Share :

15-11-2023

    ಮೊದಲ ಪೋಕ್ಸೋ ಪ್ರಕರಣದಲ್ಲಿ ಇಂದು ಜಾಮೀನು ಮಂಜೂರಾಗುತ್ತಾ?

    ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನಿಗೆ ನೀಡಿರೋ ಶೂರಿಟಿ ವೆರಿಫಿಕೇಷನ್

    ಸಂತ್ರಸ್ತ ಬಾಲಕಿಯರ ಪರ ವಕೀಲರಿಂದ ಆಕ್ಷೇಪಣೆ ಕೂಡ ಸಲ್ಲಿಕೆ

ಚಿತ್ರದುರ್ಗ: ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸೆರೆವಾಸ ಅನುಭವಿಸುತ್ತಿರುವ ಮುರುಘಾ ಶ್ರೀಗಳಿಗೆ ಜೈಲಾ? ಬೇಲಾ. ಇಂದು ಚಿತ್ರದುರ್ಗದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶಿವಮೂರ್ತಿ ಶರಣರ ಜಾಮೀನಿನ ಭವಿಷ್ಯ ನಿರ್ಧಾರವಾಗಲಿದೆ.

ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಮೊದಲ ಪೋಕ್ಸೋ ಪ್ರಕರಣದಲ್ಲಿ ಇಂದು ಜಾಮೀನು ಮಂಜೂರಾಗುವ ಸಾಧ್ಯತೆ ಇದೆ. ಮೊದಲ ಪೋಕ್ಸೋ ಪ್ರಕರಣದ ಜಾಮೀನು ಸಂಬಂಧ ಸ್ವಾಮಿಜಿಗೆ ಕೆ.ಸಿ ನಾಗರಾಜ್, ಮಧುಸೂಧನ್ ಎಂಬುವವರಿಂದ ಶೂರಿಟಿ ನೀಡಲಾಗಿದೆ. ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಶೂರಿಟಿ ವೆರಿಫಿಕೇಷನ್ ಮಾಡಿದ ಬಳಿಕ ಜಾಮೀನು ಮಂಜೂರು ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: BREAKING: ಚಿತ್ರದುರ್ಗ ಮುರುಘಾ ಶರಣರಿಗೆ ಜಾಮೀನು; ಹೈಕೋರ್ಟ್ ಮಹತ್ವದ ಆದೇಶ

ಜಾಮೀನು ಸಿಕ್ಕರೆ ಬಿಡುಗಡೆ ಆಗ್ತಾರಾ?

ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಮೊದಲ ಪೋಕ್ಸೋ ಪ್ರಕರಣದಲ್ಲಿ ಜಾಮೀನು ಮಂಜೂರು ಆಗಬಹುದು. ಆದರೆ ಸ್ವಾಮೀಜಿ ವಿರುದ್ಧ ಎರಡನೇ ಪೋಕ್ಸೋ ಪ್ರಕರಣ ಸಹ ಪ್ರಕರಣ ದಾಖಲಾಗಿದೆ. ಎರಡನೇ ಪೋಕ್ಸೋ ಕೇಸ್‌ನ ತನಿಖೆಗೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇದೆ. ಈ ಸ್ಟೇ ಹಿನ್ನೆಲೆಯಲ್ಲಿ ಸಂತ್ರಸ್ತ ಬಾಲಕಿಯರ ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಕೆ ಆಗಲಿದೆ. ಈ ಹಿನ್ನೆಲೆಯಲ್ಲಿ ಮುರುಘಾ ಶರಣರಿಗೆ ಮೊದಲ ಪೋಕ್ಸೋ ಕೇಸ್‌ನಲ್ಲಿ ಜಾಮೀನು ಸಿಕ್ಕರೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುರುಘಾ ಮಠದ ಶಿವಮೂರ್ತಿ ಶರಣರು ಬಿಡುಗಡೆ ಆಗ್ತಾರಾ? ಇಂದು ಜಾಮೀನು ಭವಿಷ್ಯ ನಿರ್ಧಾರ

https://newsfirstlive.com/wp-content/uploads/2023/11/Murugha-Shree-Bail.jpg

Load More