newsfirstkannada.com

ಮುರುಘಾ ಶರಣರ ವಿರುದ್ಧದ 2ನೇ ಪೋಕ್ಸೋ ಕೇಸ್; ಶ್ರೀಗಳ ಭವಿಷ್ಯ ಇಂದು ನಿರ್ಧಾರ

Share :

20-11-2023

  ಇಂದು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ

  ಜಾಮೀನು ರಹಿತ ಬಂಧನ ವಾರಂಟ್​ಗೆ ವಕೀಲರಿಂದ ವಾದ

  ವಾದ-ಪ್ರತಿವಾದ ಆಲಿಸಿ ತೀರ್ಪು ನೀಡಲಿರುವ ನ್ಯಾಯಾಧೀಶರು

ಚಿತ್ರದುರ್ಗ: ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಎರಡನೇ ಪೋಕ್ಸೋ ಪ್ರಕರಣದ ವಿಚಾರಣೆ ಇಂದು ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಲಿದೆ.

ಕಳದೆರಡು ದಿನಗಳ ಹಿಂದೆ ನವೆಂಬರ್ 18ರಂದು ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಮುರುಘಾ ಶರಣರ ಎರಡನೇ ಪೊಕ್ಸೋ ಕೇಸ್ ವಿಚಾರಣೆ ನಡೆಸಿತ್ತು. ಮುರುಘಾ ಶರಣರು, ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ನೀಡುವಂತೆ ಸರ್ಕಾರಿ ವಕೀಲರು ವಾದ ಮಂಡಿಸಿದ್ದಾರೆ.

ಆದರೆ ಶರಣರು ಎರಡನೇ ಕೇಸಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರಾಗಿದ್ದರು ಅಂತ ಶ್ರೀಗಳ ಪರ ವಕೀಲರು ಪ್ರತಿವಾದ ಮಂಡಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಬಿ.ಕೆ.ಕೋಮಲಾ, ವಿಚಾರಣೆ ಇಂದಿಗೆ ಮುಂದೂಡಿದ್ದಾರೆ. ಎರಡನೇ ಕೇಸಲ್ಲಿ ಸ್ವಾಮಿಜಿ ಭವಿಷ್ಯ ಏನು ಅಂತಾ ಇಂದು ನಿರ್ಧಾರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುರುಘಾ ಶರಣರ ವಿರುದ್ಧದ 2ನೇ ಪೋಕ್ಸೋ ಕೇಸ್; ಶ್ರೀಗಳ ಭವಿಷ್ಯ ಇಂದು ನಿರ್ಧಾರ

https://newsfirstlive.com/wp-content/uploads/2023/11/CTR_MURUGHASREE.jpg

Load More