newsfirstkannada.com

BREAKING: ಚಿತ್ರದುರ್ಗ ಮುರುಘಾ ಶರಣರಿಗೆ ಜಾಮೀನು; ಹೈಕೋರ್ಟ್ ಮಹತ್ವದ ಆದೇಶ

Share :

08-11-2023

    ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ

    2022 ರ ಆಗಸ್ಟ್​ 26ರಂದು ಶ್ರೀಗಳ ವಿರುದ್ಧ ದೂರು ದಾಖಲು

    2022ರ ಸೆಪ್ಟೆಂಬರ್ 1, ಮುರುಘಾ ಶರಣರನ್ನ ಬಂಧಿಸಿದ್ದ ಪೊಲೀಸರು

ಬೆಂಗಳೂರು: ಪೋಕ್ಸೋ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಜಾಮೀನು ನೀಡಿ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧದ ಪೋಕ್ಸೋ‌ ಪ್ರಕರಣ ದಾಖಲಾಗಿತ್ತು. ಒಡನಾಡಿ ಸಂಸ್ಥೆ ಇಬ್ಬರು ಅಪ್ರಾಪ್ತ ಬಾಲಕಿಯರ ಪರ ಪ್ರಕರಣ ದಾಖಲಿಸಿತ್ತು. ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಮೈಸೂರಿನಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯದ ಪ್ರಕರಣವನ್ನ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಪ್ರತ್ಯೇಕ ಎರಡು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರು. ಇದಾದ ಮತ್ತೆ ನಾಲ್ಕು ಅಪ್ರಾಪ್ತ ಬಾಲಕಿಯರು ಮುರುಘಾ ಶರಣರ ವಿರುದ್ಧ ಎರಡನೇ ಕೇಸ್ ದಾಖಲು ಮಾಡಿದ್ದರು. ಅಪ್ರಾಪ್ತ ಬಾಲಕಿಯರ ಪರ ಅವರ ಪಾಲಕರು ಪ್ರಕರಣ ದಾಖಲಿಸಿದ್ದಾರೆ.

ಈ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶರಣರು ಜಾಮೀನಿಗಾಗಿ ಮೊದಲು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಜಿಲ್ಲಾ ಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಇದೀಗ ಹೈಕೋರ್ಟ್‌ನಲ್ಲಿ ಮುರುಘಾ ಶ್ರೀ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪರ, ವಿರೋಧ ವಕೀಲರಿಂದ ವಾದ ಪ್ರತಿವಾದ ಆಲಿಸಿರುವ ಹೈಕೋರ್ಟ್ ಜಾಮೀನಿನ ಆದೇಶವನ್ನು ಕಾಯ್ದಿರಿಸಿತ್ತು.

ಪೋಕ್ಸೋ ಪ್ರಕರಣದ ಹಾದಿ

2022 ರ ಆಗಸ್ಟ್​ 28 ರಂದು ಬಾಲಕಿಯರ ಮೆಡಿಕಲ್ ಟೆಸ್ಟ್

ಸದ್ಯ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿರುವ ಮುರುಘಾಶ್ರೀ
ಕಳೆದ 14 ತಿಂಗಳಿನಿಂದ ಚಿತ್ರದುರ್ಗ ಜೈಲಿನಲ್ಲಿದ್ದ ಶ್ರೀಗಳು
2022ರ ಸೆಪ್ಟೆಂಬರ್ 1ರಿಂದ ಜೈಲಿನಲ್ಲಿರುವ ಮುರುಘಾಶ್ರೀ
2022ರ ಅಕ್ಟೋಬರ್​ 25ರಂದು ಶ್ರೀಗಳ ವಿರುದ್ಧ 2ನೇ ಕೇಸ್
ಒಟ್ಟು ನಾಲ್ವರು ವಿದ್ಯಾರ್ಥಿನಿಯರಿಂದ ಶ್ರೀಗಳ ವಿರುದ್ಧ ಕೇಸ್
ನಾಲ್ಕು ಮಂದಿ ಬಾಲಕಿಯರಿಂದ 2 ಪ್ರತ್ಯೇಕ ದೂರು ದಾಖಲು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಚಿತ್ರದುರ್ಗ ಮುರುಘಾ ಶರಣರಿಗೆ ಜಾಮೀನು; ಹೈಕೋರ್ಟ್ ಮಹತ್ವದ ಆದೇಶ

https://newsfirstlive.com/wp-content/uploads/2023/11/Murugha-Shree.jpg

Load More