ಭವಿಷ್ಯದ ಸೂಪರ್ ಸ್ಟಾರ್ ಬೆನ್ನುಬಿದ್ದ ದುರಾದೃಷ್ಟ
ಡೆಡ್ಲಿ ಆಕ್ಸಿಡೆಂಟ್ನಲ್ಲಿ ಸಿಲುಕಿದ ಮುಶೀರ್ ಖಾನ್
ಡ್ರೈವರ್ ಯಡವಟ್ಟು.. ಡಿವೈಡರ್ಗೆ ಕಾರು ಡಿಕ್ಕಿ
ಕೆಲ ದಿನಗಳ ಹಿಂದಷ್ಟೇ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಮಿಂಚು ಹರಿಸಿದ್ದ ಮುಷೀರ್ ಖಾನ್ ಎಲ್ಲರಿಂದ ಶಹಬ್ಬಾಸ್ಗಿರಿ ಗಿಟ್ಟಿಸಿಕೊಂಡಿದ್ರು. ಅದ್ಭುತ ಆಟವನ್ನ ನೋಡಿ ಎಲ್ಲರೂ ಭವಿಷ್ಯದ ಸೂಪರ್ ಸ್ಟಾರ್ ಎಂದಿದ್ರು. ಅದಾಗಿ ಕೆಲವೇ ದಿನಕ್ಕೆ ದುರಾದೃಷ್ಟ ಬೆನ್ನುಬಿದ್ದಿದೆ. ಇರಾನಿ ಟ್ರೋಫಿಯಲ್ಲಿ ಮಿಂಚೋ ಕನಸು ಕಂಡಿದ್ದ ಮುಷೀರ್, ಆಸ್ಪತ್ರೆ ಸೇರಿದ್ದಾರೆ. ಡೆಡ್ಲಿ ಆ್ಯಕ್ಸಿಡೆಂಟ್ಗೆ ಸಿಲುಕಿದ ಮುಶೀರ್ ಈಗ ಹೇಗಿದ್ದಾರೆ.
ಡಿಸೆಂಬರ್ 30.. 2022. ಭಾರತೀಯ ಕ್ರಿಕೆಟ್ ಲೋಕ ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದಿತ್ತು. ಧಗಧಗನೇ ಹೊತ್ತಿ ಉರಿತಿದ್ದ ಕಾರು. ಸದಾ ನಗುವೇ ತುಂಬಿರ್ತಾ ಇದ್ದ ಮುಖದ ತುಂಬೆಲ್ಲಾ ಇದ್ದ ರಕ್ತ. ನುಜ್ಜು ಗುಜ್ಜಾದ ಡಿವೈಡರ್. ಈ ಭೀಕರ ಆ್ಯಕ್ಸಿಡೆಂಟ್ನ ದೃಶ್ಯಗಳು ಎಲ್ಲೆಡೆ ವೈರಲ್ ಆಗಿದ್ವು. ಅಂದ್ಹಾಗೆ ಅಂದು ಡೆಡ್ಲಿ ಆ್ಯಕ್ಸಿಡೆಂಟ್ನಲ್ಲಿ ಸಿಲುಕಿದ್ದು ಡೆಲ್ಲಿ ಡ್ಯಾಶರ್ ರಿಷಭ್ ಪಂತ್.
ಇದನ್ನೂ ಓದಿ:ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್ ಕಾರು ಅಪಘಾತ.. ತಲೆಗೆ ಬಲವಾದ ಪೆಟ್ಟು
ಆ್ಯಕ್ಸಿಡೆಂಟ್ನ ನೋಡಿದ ಪ್ರತಿಯೊಬ್ಬರೂ ಹೇಳಿದ್ದು ಒಂದೇ ಮಾತು. ಪಂತ್ ಬದುಕಿಳಿದಿದ್ದೇ ಪವಾಡ ಎಂದು. ಅಪಘಾತದಲ್ಲಿ ಬದುಕಿದ ಪವಾಡ ಪುರುಷ ಪಂತ್, ಇದೀ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದಾಗಿದೆ. ಹಳೆ ಖದರ್ನಲ್ಲೇ ಆರ್ಭಟವನ್ನೂ ಶುರುವಿಟ್ಟುಕೊಂಡಿದ್ದಾಗಿದೆ. ಇದೀಗ ಮತ್ತೊಬ್ಬ ಯುವ ಕ್ರಿಕೆಟಿಗ ಅಂತದ್ದೇ ಡೆಡ್ಲಿ ಆಕ್ಸಿಡೆಂಟ್ನಲ್ಲಿ ಸಿಲುಕಿಕೊಂಡಿದ್ದಾನೆ.

ತನ್ನ ಸಾಲಿಡ್ ಆಟದಿಂದಲೇ ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ ಎನಿಸಿಕೊಂಡಿರೋ ಮುಶೀರ್ ಖಾನ್ ಡೆಡ್ಲಿ ಆ್ಯಕ್ಸಿಡೆಂಟ್ಗೆ ತುತ್ತಾಗಿದ್ದಾರೆ. ಇರಾನಿ ಟ್ರೋಫಿ ಪಂದ್ಯವನ್ನಾಡಲು ಅಝಮ್ಘಡ್ನಿಂದ ಲಕ್ನೋಗೆ ಪ್ರಯಾಣಿಸ್ತಿದ್ದ ವೇಳೆ ಅಪಘಾತಕ್ಕೆ ತುತ್ತಾಗಿದ್ದಾರೆ. ಇರಾನಿ ಟ್ರೋಫಿಯಲ್ಲಿ ಮುಂಬೈ ಪರ ಮಿಂಚೋ ಕನಸು ಕಂಡಿದ್ದ ಕ್ರಿಕೆಟಿಗ ಈಗ ಆಸ್ಪತ್ರೆ ಸೇರಿದ್ದಾರೆ.
ಡ್ರೈವರ್ ಯಡವಟ್ಟು.. ಡಿವೈಡರ್ಗೆ ಕಾರು ಡಿಕ್ಕಿ
ಇರಾನಿ ಟ್ರೋಫಿಯನ್ನಾಡಲು ತಂಡದೊಂದಿಗೆ ತೆರಳದೇ ವೈಯಕ್ತಿಕ ಕಾರಿನಲ್ಲಿ ತಂದೆ ನೌಶದ್ ಖಾನ್ ಜೊತೆಗೆ ಮುಶೀರ್ ಖಾನ್ ಪ್ರಯಾಣಿಸ್ತಾ ಇದ್ರು. ಪ್ರಯಾಣದ ವೇಳೆ ಡ್ರೈವರ್ ನಿದ್ದೆಯ ಮಂಪರಿನಲ್ಲಿದ್ದಿದ್ದು ಅಪಘಾತಕ್ಕೆ ಕಾರಣ ಎನ್ನಲಾಗ್ತಿದೆ. ಪೂರ್ವಾಂಚಲ್ ಎಕ್ಸ್ಪ್ರೆಸ್ ವೇನಲ್ಲಿ ಮುಷೀರ್ ಪ್ರಯಾಣಿಸ್ತಿದ್ದ ಟೋಯೊಟಾ ಫಾರ್ಚುನರ್ ಕಾರು ಅಪಘಾತಕ್ಕೀಡಾಗಿದೆ.
ಕುತ್ತಿಗೆ ಭಾಗದಲ್ಲಿ ಮುಷೀರ್ಗೆ ಗಂಭೀರ ಗಾಯ.!
ಮುಶೀರ್ ಖಾನ್, ಔಟ್ ಅಫ್ ಡೇಂಜರ್ ಎಂದು ಮೆಂದಾಂತ ಆಸ್ಪತ್ರೆ ಅಧಿಕೃತವಾಗಿ ಹೇಳಿದೆ. ಮುಷೀರ್ ತಂದೆ ನೌಶದ್ ಖಾನ್ಗೂ ಹೆಚ್ಚೇನು ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಆದ್ರೆ, ಮುಷೀರ್ ಖಾನ್ರ ಕುತ್ತಿಗೆ ಹಾಗೂ ಕೈ ಫ್ರಾಕ್ಟರ್ ಆಗಿದ್ದು, ವೈದ್ಯರ ನಿಗಾದಲ್ಲಿ ಇಡಲಾಗಿದೆ. ಆಸ್ಪತ್ರೆಯ ಆರ್ಥೋಪಿಡಿಕ್ಸ್ ಡಿಪಾರ್ಟ್ಮೆಂಟ್ನ ಡೈರೆಕ್ಟರ್ ಡಾಕ್ಟರ್ ಧರ್ಮೆಂದ್ರ ಸಿಂಗ್ ಮುಷೀರ್ ಖಾನ್ಗೆ ಚಿಕಿತ್ಸೆ ನೀಡ್ತಿದ್ದಾರೆ. ಮೆಡಿಕಲಿ ಫಿಟ್ ಆದ ಬಳಿಕ ಮುಂಬೈಗೆ ಕರೆ ತಂಡು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಶನ್ ತಿಳಿಸಿದೆ.

ಮುಷೀರ್ ಅರೋಗ್ಯ ಸ್ಥಿರವಾಗಿದೆ
ಲಕ್ನೋದ ಆಸ್ಪತ್ರೆಯಲ್ಲಿ ದಾಖಲಾಗಿರುವ ಮುಶೀರ್ ಖಾನ್ ಅರೋಗ್ಯ ಸ್ಥಿರವಾಗಿದೆ. ಕುತ್ತಿಗೆಯ ಬಳಿ ಫ್ರಾಕ್ಚರ್ ಆಗಿದೆ. ಆಸ್ಪತ್ರೆಯ ವೈದ್ಯರೊಂದಿಗೆ BCCI ಹಾಗೂ MCAನ ಮೆಡಿಕಲ್ ಟೀಮ್ ಕೂಡ ನಿಗಾ ವಹಿಸುತ್ತಿವೆ. ಮುಷೀರ್ ಪ್ರಯಾಣಿಸುವಷ್ಟು ಫಿಟ್ ಆದ ಬಳಿಕ ಮುಂಬೈಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆ ನೀಡಲಾಗುವುದು.
ಅಭಯ್ ಹಡಪ್, ಸೆಕ್ರೆಟರಿ, MCA
ಇರಾನಿ ಟ್ರೋಫಿಯಿಂದ ಔಟ್.. ರಣಜಿಗೂ ಡೌಟ್.!
ಆಸ್ಪತ್ರೆ ಸೇರಿರುವ ಮುಶೀರ್ ಖಾನ್ ಇರಾನಿ ಟ್ರೋಫಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಸಂಪೂರ್ಣ ಚೇತರಿಕೆಗೆ 16 ವಾರಗಳ ಕಾಲಾವಕಾಶ ಬೇಕಿದೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಮುಂಬರುವ ರಣಜಿ ಟೂರ್ನಿಯ ಕೆಲ ಪಂದ್ಯಗಳಿಂದಲೂ ಮುಶೀರ್ ಖಾನ್ ಹೊರ ಬೀಳುವ ಸಾಧ್ಯತೆ ದಟ್ಟವಾಗಿದೆ. ಮುಶೀರ್ ಖಾನ್ ಅಂಡರ್ 19 ವಿಶ್ವಕಪ್, ರಣಜಿ ಟೂರ್ನಿ.. ಕೆಲ ದಿನಗಳ ಹಿಂದಷ್ಟೇ ದುಲೀಪ್ ಟ್ರೋಫಿಯಲ್ಲಿ ಮಿಂಚು ಹರಿಸಿದ್ರು. ಅನುಭವಿ ಆಟಗಾರರೇ ತಡಬಡಾಯಿಸಿದ ಪಿಚ್ಗಳಲ್ಲಿ 19 ವರ್ಷದ ಮುಷೀರ್ ಸಾಲಿಡ್ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ರು. ಟೀಮ್ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ಮುಶೀರ್ , ದುರಾದೃಷ್ಟವಶಾತ್ ಸದ್ಯ ಆಸ್ಪತ್ರೆಯ ಬೆಡ್ ಮೇಲಿದ್ದಾರೆ. ಆದಷ್ಟು ಬೇಗ ಯುವ ಕ್ರಿಕೆಟಿಗ ಚೇತರಿಸಿಕೊಳ್ಳಲಿ.. ಫೀಲ್ಡ್ಗೆ ಕಮ್ಬ್ಯಾಕ್ ಮಾಡಲಿ ಅನ್ನೋದು ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್