newsfirstkannada.com

ದರ್ಶನ್​ ಬಗ್ಗೆ ಸೆಲೆಬ್ರಿಟಿಗಳ ಮಾತು.. ರೇಣುಕಾಸ್ವಾಮಿ ಹತ್ಯೆ ಬಗ್ಗೆ ಇವರೆಲ್ಲಾ ಏನಂದ್ರು ಗೊತ್ತಾ?

Share :

Published July 1, 2024 at 7:01am

  ದರ್ಶನ್ ದುಸ್ಥಿತಿ ನೆನೆದು ಬೇಸರ ವ್ಯಕ್ತಪಡಿಸಿದ ನಾದ ಬ್ರಹ್ಮ

  ರೇಣುಕಾಸ್ವಾಮಿ ಫೇಕ್​ ಅಕೌಂಟ್​ನ ಸತ್ಯವನ್ನ ಬಿಚ್ಚಿಟ್ಟ ನಟಿ

  ದರ್ಶನ್​ರನ್ನ ಭಿನ್ನವಾಗಿ ಬಣ್ಣಿಸಿ ಬೇಸರ ಹೊರಹಾಕಿದ ಸಂಗೀತ ನಿರ್ದೇಶಕ

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಜೈಲುಪಾಲಾಗಿರೋ ದರ್ಶನ್ ಬಗ್ಗೆ ಒಬ್ಬೊಬ್ಬರು ಒಂದೊಂದು ತರಹದ ಹೇಳಿಕೆಗಳನ್ನ ನೀಡ್ತಿದ್ದಾರೆ. ಸದ್ಯ ಚಂದನವನದ ಖ್ಯಾತ ಸಂಗೀತ ನಿರ್ದೇಶಕರೊಬ್ರು ದರ್ಶನ್​ರನ್ನ ತನ್ನ ಮಗು ಅಂತ ಮರುಕಪಟ್ಟಿದ್ದಾರೆ. ಅತ್ತ ನಟಿಯೊಬ್ರು ರೇಣುಕಾಸ್ವಾಮಿ ಫೇಕ್​ ಅಕೌಂಟ್​ನ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ದರ್ಶನ್​ ದುಸ್ಥಿತಿ ಕಂಡು ಚಿತ್ರರಂಗದ ಕಲಾವಿದರು ಒಬ್ಬೋಬ್ಬರೇ ಬೇಸರ ಹೊರಹಾಕ್ತಿದ್ದಾರೆ. ಮೆಜೆಸ್ಟಿಕ್​​​ನಲ್ಲಿ ಹೀರೋ ಆಗಿ ಮೆರೆದಿದ್ದ ದರ್ಶನ್​ ಸದ್ಯ ಪಟ್ಟಣಗೆರೆ ಶೆಡ್​ನಲ್ಲಿ ವಿಲನ್​ ಆಗಿ ಜೈಲುಪಾಲಾಗಿರೋದು ಅಭಿಮಾನಿಗಳ ಬೇಸರ ತಂದಿದೆ. ಚಂದನವನದ ಖ್ಯಾತ ಸಂಗೀತ ನಿರ್ದೇಶಕರೊಬ್ರು ದರ್ಶನ್​ರನ್ನ ಬೇರೆ ರೀತಿಯೇ ಬಣ್ಣಿಸಿ ಬೇಸರ ಹೊರಹಾಕಿದ್ದಾರೆ.

 ‘ದರ್ಶನ್​ ನನ್ನ ಮಗು ಇದ್ದಹಾಗೆ, ನಾನು ತಂದೆ ಇದ್ದಹಾಗೆ’!

ದರ್ಶನ್​ ಜೈಲುಪಾಲಾಗಿರೋ ಬಗ್ಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಬೇಸರ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಾದ ಬ್ರಹ್ಮ ದರ್ಶನ್​ ನನ್ನ ಮಗು ಇದ್ದಹಾಗೆ, ನಾನು ತಂದೆ ಇದ್ದಹಾಗೆ. ಈ ವಿಚಾರದಲ್ಲಿ ದರ್ಶನ್​ಗೆ ಎಷ್ಟು ನೋವಾಗಿದ್ಯೋ ನನಗೂ ಅಷ್ಟೆ ನೋವಾಗಿದೆ ಅಂತ ಮರುಕಪಟ್ಟಿದ್ದಾರೆ.

ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋದ ಐವರು.. ವರುಣಾರ್ಭಟಕ್ಕೆ ದೇಶದಲ್ಲಿ ಲೆಕ್ಕವಿಲ್ಲದಷ್ಟು ಸಾವು ನೋವು

ರೇಣುಕಾಸ್ವಾಮಿ ಕಾಮೆಂಟ್​ಗಳನ್ನ ನ್ಯೂಸ್​ಫಸ್ಟ್​ ಮುಂದೆ ಬಿಟ್ಟಿಟ್ಟ ನಟಿ

ಮೃತ ರೇಣುಕಾಸ್ವಾಮಿ ಫೇಕ್ ಅಕೌಂಟ್​​ಗಳ ಮೂಲಕ ಹಲವು ನಟಿಯರಿಗೆ ಅಶ್ಲೀಲ ಮೆಸೇಜ್​ಗಳನ್ನ ಮಾಡ್ತಿದ್ದ ಅನ್ನೋ ಆರೋಪದ ಬಗ್ಗೆ ನಟಿ ಚಿತ್ರಾಲ್ ನ್ಯೂಸ್​ ಫಸ್ಟ್​​​ಗೆ ಪ್ರತಿಕ್ರಿಯೆ ನೀಡಿದ್ದಾರೆ. ರೇಣುಕಾಸ್ವಾಮಿ ಮಾಡಿದ್ದ ಎನ್ನಲಾದ ಕೆಲ ಕಾಮೆಂಟ್​ಗಳನ್ನ ಸಹ ನಟಿ ಚಿತ್ರಾಲ್​ ನ್ಯೂಸ್​ ಫಸ್ಟ್​ ಕ್ಯಾಮೆರಾ ಮುಂದೆಯೇ ತೋರಿಸಿದ್ದಾರೆ. ಅಲ್ಲದೇ ತಾನು ಬ್ಲಾಕ್ ಲೀಸ್ಟ್​ಗೆ ಹಾಕಿದ್ದ ರೇಣುಕಾಸ್ವಾಮಿಯದ್ದೂ ಎನ್ನಲಾದ ಅಕೌಂಟ್​ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Kalki 2898 AD: ಅಬ್ಬಬ್ಬಾ! ಪ್ರಭಾಸ್​ ಕಲ್ಕಿ ಸಿನಿಮಾದ 3ನೇ ದಿನದ ಕಲೆಕ್ಷನ್​ ಎಷ್ಟು ಕೋಟಿ ಗೊತ್ತಾ?

ಬೆಲೆ ಏರಿಕೆ ಬಗ್ಗೆ ಚರ್ಚೆ ಆಗ್ಬಾರ್ದು ಅಂತ ದರ್ಶನ್​ ಕಸ್ಟಡಿ ಹೆಚ್ಚಳ

ರಾಜ್ಯ ಸರ್ಕಾರ ಬೆಲೆ ಏರಿಕೆ ಬಗ್ಗೆ ಜನರು ಚರ್ಚೆ ಮಾಡ್ಬಾರ್ದು ಅಂತ ನಟ ದರ್ಶನ್​ ಕಸ್ಟಡಿಯನ್ನ 2 ದಿನ ಹೆಚ್ಚಳ ಮಾಡಿದೆ ಅಂತ ಸಿ.ಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ.

ಇದನ್ನೂ ಓದಿ: ಜೈಲಲ್ಲಿ ಓದೋಕೆ ಶುರು ಮಾಡಿದ ನಟ ದರ್ಶನ್​​.. ಡಿ ಬಾಸ್​ ಪಡೆದ 5 ಪುಸ್ತಕಗಳು ಯಾವುವು?

ಒಟ್ನಲ್ಲಿ ಅತ್ತ ಪರಪ್ಪನ ಅಗ್ರಹಾರದಲ್ಲಿ ದರ್ಶನ್​ ದಿನ ಎಣಿಸುತ್ತಿದ್ರೆ ಇತ್ತ ಚಿತ್ರ ರಂಗದ ಸಹಕಲಾವಿದರು ಪ್ರಕರಣದ ಬಗ್ಗೆ ಒಬ್ಬೊಬ್ಬರೇ ತುಟಿ ಬಿಚ್ಚುತ್ತಿದ್ದಾರೆ. ಇನ್ನೂ ನಾಲ್ಕುದಿನ ದರ್ಶನ್​ ಜೈಲುವಾಸ ಬಾಕಿ ಇದ್ದು, ಮತ್ತಿನ್ಯಾರು ಏನೇನ್ ಹೇಳ್ತಾರೋ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಬಗ್ಗೆ ಸೆಲೆಬ್ರಿಟಿಗಳ ಮಾತು.. ರೇಣುಕಾಸ್ವಾಮಿ ಹತ್ಯೆ ಬಗ್ಗೆ ಇವರೆಲ್ಲಾ ಏನಂದ್ರು ಗೊತ್ತಾ?

https://newsfirstlive.com/wp-content/uploads/2024/07/Hamsalekha.jpg

Load More