newsfirstkannada.com

‘ಲೋಕ’ ಮಹಾ ಕದನಕ್ಕೆ ಕಾಂಗ್ರೆಸ್​​ ತಾಲೀಮು; ಮುಸ್ಲಿಂ ನಾಯಕರ ಮಹತ್ವದ ಮೀಟಿಂಗ್​​

Share :

07-08-2023

    ಅಲ್ಪಸಂಖ್ಯಾತ ಮತ ಕ್ರೋಢೀಕರಣಕ್ಕೆ ‘ಕೈ’ ಪ್ಲಾನ್​!

    ಹೈಕಮಾಂಡ್​​​ ನೀಡಿದ ಟಾರ್ಗೆಟ್​​ ರೀಚ್​​ಗೆ ಕಸರತ್ತು

    ಸಮುದಾಯಕ್ಕೆ ಹೆಚ್ಚಿನ ಅವಕಾಶ ನೀಡುವ ಮನವಿ

ವಿಧಾನಸಭೆ ದಿಗ್ವಿಜಯದ ಬಳಿಕ ಕಾಂಗ್ರೆಸ್​​, ಲೋಕಕದನಕ್ಕೆ ರಣಕಣ ಸಿದ್ಧಗೊಳಿಸುತ್ತಿದೆ. ದೆಹಲಿಯಿಂದ ರಾಜ್ಯಕ್ಕೆ ಮರಳುತ್ತಲೇ ಕೈಪಡೆ ಅಲರ್ಟ್​ ಆಗಿದ್ದು, ಅಲ್ಪಸಂಖ್ಯಾತ ಮತ ಬುಟ್ಟಿಗೆ ಕೈಹಾಕಿದೆ. ಇವತ್ತು ಡಿಕೆಶಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಕೆಲ ಬೇಡಿಕೆಗಳನ್ನ ನಾಯಕರು ಮುಂದಿಟ್ಟಿದ್ದಾರೆ. ಅಚ್ಚರಿ ಅಂದ್ರೆ ಸಭೆಯಿಂದ ಜಮೀರ್​ ಅಂತರ ಕಾಯ್ದುಕೊಂಡಿದ್ದಾರೆ. ವಿಧಾನಸಭೆ ಚುನಾವಣೆ ಗೆಲುವಿನ ಹುಮ್ಮಸ್ಸಿನಲ್ಲಿರುವ ಕೈಪಡೆ, ಲೋಕಸಭೆ ಮಹಾ ಕದನಕ್ಕೆ ಕಾಂಗ್ರೆಸ್​​ ತಾಲೀಮು ಆರಂಭಿಸಿದೆ. ಈ ಬಾರಿ ಹೈಕಮಾಂಡ್​ನಿಂದ ಟಾರ್ಗೆಟ್​​ 20 ಟಾಸ್ಕ್​ ಪಡೆದಿರುವ ರಾಜ್ಯ ಕಾಂಗ್ರೆಸ್​ ಆ ನಿಟ್ಟಿನಲ್ಲಿ ತನ್ನ ಕಾರ್ಯ ಚಟುವಟಿಕೆಗೆ ಚಾಲನೆ ನೀಡಿದೆ. ಕಳೆದ ಚುನಾವಣೆಯಲ್ಲಿ ಫಲಕೊಟ್ಟಿದ್ದ ಜಾತಿ ಸಮೀಕರಣವನ್ನೇ ನೆಚ್ಚಿಕೊಂಡ ಕೈಪಡೆ, ಸಮುದಾಯವಾರು ಸಭೆಯ ಮೊರೆ ಹೋಗಿದೆ. ನಿನ್ನೆ ಮುಸ್ಲಿಂ ನಾಯಕರ ಮಹತ್ವದ ಮೀಟಿಂಗ್​​ ನಡೆದಿದೆ.

‘ಲೋಕ’ ಕದನಕ್ಕೆ ಸನ್ನದ್ಧಗೊಳ್ತಿದೆ ರಾಜ್ಯ ಕಾಂಗ್ರೆಸ್​​ ಪಡೆ!

ಈ ಬಾರಿ ಕಾಂಗ್ರೆಸ್​ನ ಅಭೂತ ಪೂರ್ವ ಗೆಲುವಿನ ಹಿಂದೆ ಸೋಷಿಯಲ್​ ಎಂಜಿನಿಯರಿಂಗ್​​ ದೊಡ್ಡ ಕೆಲಸ ಮಾಡಿದೆ. ಅದರಲ್ಲೂ ಕೈಪಡೆ​ ಗದ್ದುಗೆ ಹಿಡಿಯಲು ಅಲ್ಪಸಂಖ್ಯಾತರ ಕೊಡುಗೆ ಅಪಾರ. ಇದೇ ಛಾಯೆಯನ್ನ ಲೋಕಸಭೆಯಲ್ಲೂ ಬಿಂಬಿಸಲು ಕಾಂಗ್ರೆಸ್​ ಹೊರಟಿದೆ. ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ನೇತೃತ್ವದಲ್ಲಿ ಇವತ್ತು ಸಭೆ ನಡೆದಿದ್ದು, ಮುಸ್ಲಿಂ ಜನಪ್ರತಿನಿಗಳು ಭಾಗಿ ಆಗಿದ್ದರು. ಸಚಿವ ರಹೀಂ ಖಾನ್, ಶಾಸಕರಾದ ತನ್ವೀರ್ ಶೇಠ್, ಹ್ಯಾರಿಸ್, ಸಲೀಂ ಅಹಮದ್ ಸೇರಿ ಹಲವರು ಭಾಗಿ ಆಗಿದ್ದರು. ಸಭೆಯಲ್ಲಿ ಪ್ರಮುಖವಾಗಿ ಮುಂಬರುವ ಚುನಾವಣೆಗಳ ಬಗ್ಗೆಯೇ ಚರ್ಚೆ ಆಗಿದೆ. ಲೋಕಸಭೆಯಲ್ಲೂ ಮುಸ್ಲಿಂ ಮತಗಳ ಕ್ರೋಢೀಕರಣ ಆಗಬೇಕು. ಕನಿಷ್ಟ 20 ಸ್ಥಾನ ಗೆಲ್ಲಬೇಕು. ಅದರಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರ ವಹಿಸಬೇಕು ಅಂತ ಮುಸ್ಲಿಂ ಮುಖಂಡರಿಗೆ ಡಿಕೆಶಿ ಸೂಚನೆ ನೀಡಿದ್ದಾರೆ. ಇನ್ನು, ಸಭೆಯಲ್ಲಿ ಮುಸ್ಲಿಂ ನಾಯಕರು ಕೆಲ ಬೇಡಿಕೆಗಳನ್ನ ಕೆಪಿಸಿಸಿ ಅಧ್ಯಕ್ಷರ ಮುಂದಿಟ್ಟಿದ್ದಾರೆ.

ಸಭೆಯಲ್ಲಿ ಮುಸ್ಲಿಮರ ಬೇಡಿಕೆ ಏನು?

  • ಈ ಬಾರಿ ಶೇ. 95ರಷ್ಟು ಮುಸ್ಲಿಂ ಮತ ಕಾಂಗ್ರೆಸ್​ಗೆ ಬಿದ್ದಿದೆ
  • ಲೋಕಸಭೆ, ಜಿಲ್ಲಾ ಪಂಚಾಯತ್, ತಾ.ಪಂ ಎಲೆಕ್ಷನ್ ಇದೆ
  • ಎಲೆಕ್ಷನ್​​​ನಲ್ಲಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು
  • ನಾಲ್ಕು ಡಿವಿಜನ್​ಗಳಲ್ಲಿ ಸಮುದಾಯವನ್ನ ಪರಿಗಣಿಸಬೇಕು
  • ಬಿಬಿಎಂಪಿ ಚುನಾವಣೆಯಲ್ಲಿ ಮುಸ್ಲಿಂರಿಗೆ ಹೆಚ್ಚು ಟಿಕೆಟ್​
  • ಲೋಕಸಭೆಯಲ್ಲಿ ಮುಸ್ಲಿಂ ಸಮುದಾಯಕ್ಕೆ 2 ಸೀಟು ಬೇಕು
  • ಒಂದು ಎಂಎಲ್​ಸಿ ಸ್ಥಾನ ಮುಸ್ಲಿಂ ಸಮುದಾಯಕ್ಕೆ ನೀಡಿ
  • ಪರಿಷತ್​​​ನಲ್ಲಿರುವ ಮುಸ್ಲಿಂ ಸದಸ್ಯರಿಗೆ ಸಚಿವ ಸ್ಥಾನ ಕೊಡಿ
  • ನಿಗಮ-ಮಂಡಳಿಯಲ್ಲಿ ಸಮುದಾಯಕ್ಕೆ ಸ್ಥಾನಮಾನ ನೀಡಿ

ಇದೇ ವೇಳೆ, ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್​​, ರಾಜ್ಯದಲ್ಲಿ 20 ಸ್ಥಾನ ಗೆಲ್ಲುವ ಗುರಿಯನ್ನ ಕಾಂಗ್ರೆಸ್​ ಹೊಂದಿದೆ. ಹೀಗಾಗಿ ಸಮುದಾಯಕ್ಕೆ ಹೆಚ್ಚಿನ ಅವಕಾಶ ನೀಡಬೇಕು ಅಂತ ಮನವಿ ಮಾಡಿದ್ದಾರೆ. ಇನ್ನು, ಸಚಿವ ರಹೀಂಖಾನ್​​ ಮಾತನಾಡಿ, ಸರ್ಕಾರ ಬಂದಿದೆ, ಎಲ್ಲರಿಗೂ ಆಸೆಯಿದೆ. ಸಮುದಾಯಕ್ಕೆ ಹೆಚ್ಚು ಸ್ಥಾನ ಕೊಡಬೇಕು ಎಂಬ ಪ್ರಸ್ತಾವ ಇದೆ ಅಂತ ಹೇಳಿದ್ದಾರೆ.

ಡಿಕೆಶಿ ನೇತೃತ್ವದ ಸಭೆಗೆ ಗೈರಾದ ಸಚಿವ ಜಮೀರ್​​

ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ನೇತೃತ್ವದಡಿ ಸಭೆ ನಡೆದಿದೆ. ಇಂಟ್ರಸ್ಟಿಂಗ್​​ ಅಂದ್ರೆ, ಮುಸ್ಲಿಂ ಸಮುದಾಯದ ಬಹುತೇಕ ನಾಯಕರು ಸಭೆಗೆ ಹಾಜರಿದ್ರು. ಆದ್ರೆ, ಸಭೆಯಿಂದ ಸಚಿವ ಜಮೀರ್​​​ ಅಹ್ಮದ್​​​ ದೂರವೇ ಉಳಿದ್ರು. ಸಭೆಗೆ ಚಕ್ಕರ್​​ ಹಾಕುವ ಹಿಂದೆ ಜಮೀರ್​ಗೆ ಮುನಿಸಿಕೊಂಡಿದ್ದಾರಾ? ಸಭೆಯಿಂದ ಜಮೀರ್ ದೂರ ಉಳಿದಿದ್ಯಾಕೆ ಅನ್ನೋ ಚರ್ಚೆ ನಡೆದಿದೆ. ಒಟ್ಟಾರೆ, ಲೋಕಸಭಾ ಚುನಾವಣೆ, ಬಿಬಿಎಂಪಿ ಚುನಾವಣೆ ಮೇಲೆ ಕಾಂಗ್ರೆಸ್​​ ಕಣ್ಣಿಟ್ಟಿದೆ. ಈ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಈ ಬಾರಿ ಕೈಕಮಾಂಡ್​​​ ನೀಡಿರುವ ಟಾರ್ಗೆಟ್​​ ರೀಚ್​​ ಆಗಲು ಇನ್ನಿಲ್ಲದ ಕಸರತ್ತಿಗೆ ಕೈಹಾಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಲೋಕ’ ಮಹಾ ಕದನಕ್ಕೆ ಕಾಂಗ್ರೆಸ್​​ ತಾಲೀಮು; ಮುಸ್ಲಿಂ ನಾಯಕರ ಮಹತ್ವದ ಮೀಟಿಂಗ್​​

https://newsfirstlive.com/wp-content/uploads/2023/08/muslim-1.jpg

Load More