newsfirstkannada.com

‘ಮುಸ್ಲಿಂ ಲೀಗ್ ಕಂಪ್ಲೀಟ್ ಜಾತ್ಯಾತೀತ ಪಕ್ಷ’ ಎಂದ ರಾಹುಲ್ ಗಾಂಧಿ..!

Share :

02-06-2023

    ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ನಿಗಿನಿಗಿ ಕೆಂಡ..!

    ಕರ್ನಾಟಕ ಬಿಜೆಪಿ ಸೇರಿದಂತೆ ರಾಹುಲ್ ಹೇಳಿಕೆಗೆ ವ್ಯಾಪಕ ವಿರೋಧ

    ಹಿಂದಿನ ವಿದೇಶಿ ಪ್ರವಾಸದ ವೇಳೆಯಲ್ಲೂ ಮೋದಿ ಬಗ್ಗೆ ಮಾತಾಡಿದ್ದ ರಾಹುಲ್

ಅಮೆರಿಕ ಪ್ರವಾಸದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಟೀಕೆ ಮಾಡಿ, ಮತ್ತೊಮ್ಮೆ ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಮಧ್ಯೆ ವಾಷಿಂಗ್ಟನ್​ನಲ್ಲಿ ಮಾತನಾಡಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಿಜೆಪಿ ನಾಯಕರು ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡ್ತಿದ್ದಾರೆ.

ಮುಸ್ಲಿಂ ಲೀಗ್, ‘ಪರಿಪೂರ್ಣ ಜಾತ್ಯಾತೀತ ಪಕ್ಷ’ ಅನ್ನೋ ಮೂಲಕ ರಾಹುಲ್ ಗಾಂಧಿ ಹೊಸ ಟೀಕೆಗೆ ಗುರಿಯಾಗಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್​ ಪಕ್ಷವು ಮುಸ್ಲಿಂ ಲೀಗ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪತ್ರಕರ್ತ ಕೇಳ್ತಾರೆ. ಅದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ಮುಸ್ಲಿಂ ಲೀಗ್ ಕಂಪ್ಲಿಟ್ಲಿ ಜಾತ್ಯಾತೀತ ಪಾರ್ಟಿ. ಅದರಲ್ಲಿ ಜಾತ್ಯಾತೀತವಲ್ಲದ್ದು ಯಾವುದೂ ಇಲ್ಲ. ನನ್ನ ಪ್ರಕಾರ ಮುಸ್ಲಿಂ ಲೀಗ್ ಬಗ್ಗೆ ಅವರು (ರಿಪೋಟರ್) ಅಧ್ಯಯನ ಮಾಡಿಲ್ಲ ಅನ್ಸುತ್ತೆ ಎಂದಿದ್ದಾರೆ.

ರಾಹುಲ್ ಗಾಂಧಿ, ಮುಸ್ಲಿಂ ಲೀಗ್ (Indian Union Muslim League) ಸೆಕ್ಯೂಲರ್ ಪಾರ್ಟಿ ಎಂದು ಬಣ್ಣಿಸಿರುವ ವಿಚಾರ ಗೊತ್ತಾಗುತ್ತಿದ್ದಂತೆಯೇ, ಬಿಜೆಪಿಗೆ ದೊಡ್ಡ ಆಹಾರ ಸಿಕ್ಕಂತಾಗಿದೆ. ಕೇಂದ್ರದ ಬಹುತೇಕ ಬಿಜೆಪಿ ನಾಯಕರು, ರಾಹುಲ್ ಗಾಂಧಿಯ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮುಸ್ಲಿಂ ಲೀಗ್ ಕಂಪ್ಲೀಟ್ ಜಾತ್ಯಾತೀತ ಪಕ್ಷ’ ಎಂದ ರಾಹುಲ್ ಗಾಂಧಿ..!

https://newsfirstlive.com/wp-content/uploads/2023/06/RAHUL_GANDHI-2.jpg

Load More