51ನೇ ವಸಂತಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್
ಜಯನಗರದ MES ಗ್ರೌಂಡ್ನಲ್ಲಿ ಸಾವಿರಾರು ಅಭಿಮಾನಿಗಳು ಭಾಗಿ
ಅಭಿಮಾನಿಗಳ ಮುಂದೆ ಕೇಕ್ ಕಟ್ ಮಾಡಿ ಬಾದ್ ಷಾ ಹೇಳಿದ್ದೇನು?
ಸ್ಯಾಂಡಲ್ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನೆಚ್ಚಿನ ನಟನಿಗೆ ವಿಶ್ ಮಾಡುವ ಸಲುವಾಗಿ ರಾಜ್ಯ ಹಲವು ಜಿಲ್ಲೆಗಳಿಂದ ಅಭಿಮಾನಗಳ ದಂಡೇ ಹರಿದು ಬಂದಿತ್ತು. ಇಂದು ಜಯನಗರದ MES ಗ್ರೌಂಡ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು.
ಇದನ್ನೂ ಓದಿ: ಅಭಿಮಾನಿಗಳಿಗೆ ಕಳಂಕ ತರೋ ಕೆಲಸ ನಾನು ಯಾವತ್ತೂ ಮಾಡಲ್ಲ-ಕಿಚ್ಚ ಸುದೀಪ್
ಅಭಿಮಾನಿಗಳ ಸಮ್ಮುಖದಲ್ಲಿ ನಟ ಕಿಚ್ಚ ಸುದೀಪ್ ಅವರು ತಮ್ಮ ಬರ್ತ್ ಡೇ ಕೇಕ್ ಕಟ್ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರು ಕೇಕ್ ಮಾಡುತ್ತಿದ್ದಾಗ ಕಿಚ್ಚ ಕಿಚ್ಚ ಎಂಬ ಜೈಕಾರ ಮೊಳಗಿತ್ತು. ಇನ್ನು ಇದಾದ ಬಳಿಕ ಕಿಚ್ಚ ಸುದೀಪ್ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ನನ್ನ ಫ್ಯಾನ್ಸ್ ಒಳ್ಳೆಯವ್ರು, ಅದಕ್ಕೆ ನಾನು ಒಳ್ಳೆಯವನಾಗಿದ್ದೇನೆ ಅಂತ ಕಿಚ್ಚ ಸುದೀಪ್ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ಅಭಿಮಾನಿಗಳು ತೋರಿಸೋ ಪ್ರೀತಿಯಿಂದ ನಾನು ಇವತ್ತು ಇಲ್ಲಿದ್ದೀನಿ. ಅಭಿಮಾನಿಗಳು ನಮ್ಮ ಪ್ರತಿಬಿಂಬ. ನಾನು ಹೋದಲೆಲ್ಲಾ ತಲೆ ಎತ್ಕೊಂಡು ಓಡಾಡ್ತೀನಿ ಅಂದ್ರೆ ಅದಕ್ಕೆ ಅಭಿಮಾನಿಗಳೇ ಕಾರಣ. ಅಭಿಮಾನಿಗಳಿಗೆ ಕಳಂಕ ತರೋ ಕೆಲಸ ಮಾಡಲ್ಲ. ಬರೀ ಸಿನಿಮಾದಿಂದ ಹೀರೋ ಆಗೋಕೆ ಆಗಲ್ಲ. ವ್ಯಕ್ತಿದಿಂದ ನಾವು ದೊಡ್ಡೋರು ಆಗೋಕೆ ಸಾಧ್ಯ.
ಇದನ್ನೂ ಓದಿ: ಸೀರಿಯಲ್ನಲ್ಲಿ ತಾಯಿ.. ರಿಯಲ್ ಲೈಫ್ನಲ್ಲಿ ಸಖತ್ ಹಾಟ್ ಗರ್ಲ್; ನಟಿ ಫೋಟೋಸ್ಗೆ ಫ್ಯಾನ್ಸ್ ಶಾಕ್
ಮಾತನ್ನು ಮುಂದುವರೆಸಿದ ಅವರು, ನಾವು ಬೆಳಗ್ಗೆ ಎದ್ದು ಮುಖಕ್ಕೆ ಮೇಕಪ್ ಹಾಕೋದೆ ನಿಮಗೋಸ್ಕರ. ಅಭಿಮಾನಿಗಳಿಂದ ಬರೋ ಕೂಗು ನನ್ನನ್ನು ತಗ್ಗಿಸಿ, ಬಗ್ಗಿಸಿ ಇರುವಂತೆ ಮಾಡುತ್ತೆ. ನನ್ನ ಫ್ಯಾನ್ಸ್ ಒಳ್ಳೆಯವ್ರು. ಅದಕ್ಕೆ ನಾನು ಒಳ್ಳೆಯವನಾಗಿದ್ದೇನೆ. ನನ್ನ ಅಭಿಮಾನಿಗಳಿಂದ ನಾನು. ಆದಷ್ಟು ಬೇಗ ಮ್ಯಾಕ್ಸ್ ರಿಲೀಸ್ ಡೇಟ್ ಹೇಳ್ತೀನಿ. ಮ್ಯಾಕ್ಸ್ ಸಿನಿಮಾ ತಡ ಆಯ್ತು. ಆದ್ರೆ ಆದಷ್ಟು ಬೇಗ ಸಿನಿಮಾ ರಿಲೀಸ್ ಆಗುತ್ತೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ