newsfirstkannada.com

‘ಸಹೋದರಿ ಮೃತಪಟ್ಟಿದ್ದಳು.. ಮನೆಗೆ ಹೋಗಲು ರಜೆ ಕೊಡಲಿಲ್ಲ’ -ಇಲಾಖೆಯ ಅವ್ಯವಸ್ಥೆಗೆ ಪೇದೆ ಕಣ್ಣೀರು -ವಿಡಿಯೋ

Share :

28-08-2023

    ‘ನಾವೂ ಮನುಷ್ಯರೇ, ನಮಗೂ ಕುಟುಂಬ ಇದೆ’

    ‘ನಿನ್ನೆಯಷ್ಟೇ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’

    ‘ಕೈಜೋಡಿಸಿ ನಮಿಸುತ್ತೇನೆ, ಸಮಸ್ಯೆ ಬಗೆಹರಿಸಿ’

ರಾಜ್ಯದಲ್ಲಿ ಅಪರಾಧಗಳನ್ನು ಸಂಪೂರ್ಣ ಧಮನ ಮಾಡಲು ಪಣ ತೊಟ್ಟಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಡಿನಿಂದ ವೈರಲ್ ಆಗಿರೋ ವಿಡಿಯೋ ಒಂದು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಅಪರಾಧಗಳ ತಡೆಗೆ ಶ್ರಮಿಸುತ್ತಿರುವ ಭದ್ರತಾ ಸಿಬ್ಬಂದಿಗೆ ನೆಮ್ಮದಿ ಇಲ್ಲವಾ? ಅವರು ಕುಟುಂಬದಿಂದ ದೂರ ಆಗುವಂತಹ ಕೆಲಸಗಳು ಅಲ್ಲಿನ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿದೆಯಾ ಎಂಬ ಚರ್ಚೆ ಶುರುವಾಗಿದೆ.

ಇಷ್ಟಕ್ಕೆಲ್ಲ ಕಾರಣ ಪೊಲೀಸ್ ಪೇದೆಯೊಬ್ಬ ವಿಡಿಯೋ ಮಾಡಿರೋ ವಿಡಿಯೋ. ತಾವು ಎದುರಿಸಿದ ಅಗ್ನಿ ಪರೀಕ್ಷೆಗಳ ಬಗ್ಗೆ ವಿಡಿಯೋದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಅಧಿಕಾರಿ ಹೇಳಿದ್ದೇನು..?

ನಾನು ವಿಡಿಯೋ ಮಾಡುತ್ತಿರುವ ಉದ್ದೇಶ, ರಾಜ್ಯದ ಪೊಲೀಸರು ಎದುರಿಸುತ್ತಿರುವ ಕೆಲವು ಸಮಸ್ಯೆಗಳ ಕುರಿತು. ಬೇರೆ ಯಾವುದೇ ಉದ್ದೇಶ ಇಲ್ಲಿ ಇಲ್ಲ. ನಾವು ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಅನ್ನೋದನ್ನು ತಿಳಿಸುವ ಪ್ರಯತ್ನ ಅಷ್ಟೇ. ಕಳೆದ ಎರಡು ವರ್ಷದಲ್ಲಿ ರಾಜ್ಯದಲ್ಲಿ 10 ರಿಂದ 12 ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಅಧಿಕಾರಿಗಳು ಯಾರೂ ಕೂಡ ಸ್ಪಂದಿಸಿಲ್ಲ. ನಿನ್ನೆಯಷ್ಟೇ ಇಬ್ಬರು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಯೋಧ್ಯೆ ಮತ್ತು ಮೀರತ್​​ನಲ್ಲಿ ಇಬ್ಬರು ಉಸಿರು ಚೆಲ್ಲಿಸಿದ್ದಾರೆ. ಈ ಎಲ್ಲಾ ಘಟನೆಗಳು ಯಾಕೆ ನಡೆಯುತ್ತಿದೆ ಎಂದು ಯಾರಾದರೂ ಯೋಚಿಸಿದ್ದೀರಾ?

ನನಗೆ ತುಂಬಾ ಬೇಸರ ಆಗಿದೆ. ನನ್ನ ಸಹೋದರಿ ಜುಲೈ 20 ರಂದು ಸಾವನ್ನಪ್ಪಿದ್ದಳು. ಅಲ್ಲಿಗೆ ನಾನು ಹೋಗಬೇಕಿತ್ತು, ಆದರೆ ನನಗೆ ರಜೆಯೇ ಸಿಗಲಿಲ್ಲ. ನಮ್ಮನ್ನು ದೂರದ ಸ್ಥಳಗಳಿಗೆ ಪೋಸ್ಟ್ ಮಾಡಲು ಮಾತ್ರ ಅನುಮೋದನೆ ಸಿಗುತ್ತದೆ. ಈ ಬಾರ್ಡರ್ ಸ್ಕೀಮ್​ ಅನ್ನು ತೆಗೆದುಹಾಕಬೇಕು ಎಂದು ನಾನು ಬೇಡಿಕೊಳ್ಳುತ್ತೇನೆ. ನೆಟೀವ್​ಗೆ ಹತ್ತಿರ ಇರುವಂತಹ ಸ್ಥಳಗಳಿಗೆ ಪೋಸ್ಟಿಂಗ್ ಆಗಬೇಕು. ನಮಗೆ ಫ್ಯಾಮಿಲಿ ಇದೆ, ನಾವೂ ಕೂಡ ಮನುಷ್ಯರೇ. ನಾನೊಬ್ಬ ಮನುಷ್ಯ. ದಯವಿಟ್ಟು ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳು ಅನ್ಯತಾ ಭಾವಿಸಬಾರದು. ನಾನು ನಮ್ಮ ಮನಸಿನ ತಳಮಳವನ್ನು ಹಂಚಿಕೊಂಡಿದ್ದೇನೆ. ಪೊಲೀಸ್ ಅಧಿಕಾರಿಗಳು ನೆಮ್ಮದಿ ಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ವಿಡಿಯೋ ಮಾಡಿರುವ ಪೊಲೀಸ್ ಅಧಿಕಾರಿಯ ಹೆಸರು ಓಮ್​ವೀರ್​ ಸಿಂಗ್ ಎಂದು. ಇವರು ಭಾಗ್​ಪತ್​​ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸಹೋದರಿ ಮೃತಪಟ್ಟಿದ್ದಳು.. ಮನೆಗೆ ಹೋಗಲು ರಜೆ ಕೊಡಲಿಲ್ಲ’ -ಇಲಾಖೆಯ ಅವ್ಯವಸ್ಥೆಗೆ ಪೇದೆ ಕಣ್ಣೀರು -ವಿಡಿಯೋ

https://newsfirstlive.com/wp-content/uploads/2023/08/POLICE-1.jpg

Load More