newsfirstkannada.com

VIDEO: ‘ಖುಷ್ಬೂಗಿಂತ ನನ್ನ ಹೆಂಡ್ತಿನೇ ಸುರ ಸುಂದರಿ’- DMK ನಾಯಕನ ಈ ಕಮೆಂಟ್‌ಗೆ ತಮಿಳುನಾಡಿನಲ್ಲಿ ಅಲ್ಲೋಲ, ಕಲ್ಲೋಲ

Share :

18-06-2023

    ಅಂಜದ ಗಂಡು, ಯುಗಪುರುಷ ನಟಿ ಖುಷ್ಬೂ ಸುಂದರ್ ಸುಂದರವಾಗಿಲ್ವಾ?

    ಬಿಜೆಪಿ ನಾಯಕಿ ಖುಷ್ಬೂ ಅವರ ಸೌಂದರ್ಯದ ಬಗ್ಗೆ ಕೆಟ್ಟದಾಗಿ ಕಮೆಂಟ್

    ಡಿಎಂಕೆ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಭಾಷಣಕ್ಕೆ ಬಿಜೆಪಿ ಕೆಂಡಾಮಂಡಲ

ಚೆನ್ನೈ: ಕನ್ನಡದ ಸೂಪರ್ ಹಿಟ್ ಸಿನಿಮಾ ಅಂಜದ ಗಂಡು, ಯುಗಪುರುಷದ ಮೋಹಕ ತಾರೆ ಖುಷ್ಬೂ ಸುಂದರ್ ಸುಂದರವಾಗಿಲ್ವಾ. ತಮಿಳುನಾಡಿನ ರಾಜ್ಯ ರಾಜಕೀಯದಲ್ಲಿ ಇದೇ ವಿಷಯ ಬೆಂಕಿ, ಬಿರುಗಾಳಿಯನ್ನೇ ಎಬ್ಬಿಸಿದೆ. ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿ ಅವರ ಅವಹೇಳನಕಾರಿ ಮಾತುಗಳಿಗೆ ಖುಷ್ಬೂ ಸುಂದರ್ ಸೇರಿದಂತೆ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ.

ಇತ್ತೀಚಿಗೆ ಡಿಎಂಕೆ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅವರು ಬಿಜೆಪಿ ನಾಯಕಿ ಖುಷ್ಬೂ ಅವರ ಸೌಂದರ್ಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರು. ಶಿವಾಜಿ ಕೃಷ್ಣಮೂರ್ತಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಡಿಎಂಕೆ ನಾಯಕನ ವಿಡಿಯೋ ಟ್ಯಾಗ್ ಮಾಡಿರೋ ಖುಷ್ಬೂ ಸುಂದರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಡಿಎಂಕೆ ಪಕ್ಷದ ಸಂಸ್ಕೃತಿಯನ್ನೇ ಇದು ಬಿಂಬಿಸಿದೆ ಎಂದಿದ್ದಾರೆ.

ಖುಷ್ಬೂ ಬಗ್ಗೆ ಶಿವಾಜಿ ಹೇಳಿದ್ದೇನು? 
ಡಿಎಂಕೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶಿವಾಜಿ ಕೃಷ್ಣಮೂರ್ತಿ, ನನ್ನ ಹೆಂಡ್ತಿ ಸುಂದರವಾಗಿದ್ದಾಳೆ. ನನ್ನ ಹೆಂಡ್ತಿ ಸೌಂದರ್ಯವತಿ ಎಂದು ನನ್ನ ಸ್ನೇಹಿತರೆಲ್ಲಾ ಹೇಳುತ್ತಾರೆ. ಖುಷ್ಬೂ ರೂಪವಂತೆ ಅಂತಾ ಹಲವರು ಹೇಳ್ತಾರೆ. ಆದ್ರೆ ನನ್ನ ಹೆಂಡ್ತಿ ಬಿಜೆಪಿ ನಾಯಕಿ ಖುಷ್ಬೂ ಅವರ ರೀತಿ ಕೆಟ್ಟದಾಗಿ ನಡೆಯೋದಿಲ್ಲ. ಖುಷ್ಬೂಗಿಂತ ನನ್ನ ಹೆಂಡ್ತಿನೇ ಸುಂದರಿ ಎಂದು ಹೇಳಿದ್ರು.

ಖುಷ್ಬೂ ರೂಪ, ಸೌಂದರ್ಯ, ನಡಿಗೆ ಬಗ್ಗೆ ಕೆಟ್ಟದಾಗಿ ಶಿವಾಜಿ ಕೃಷ್ಣಮೂರ್ತಿ ಮಾತನಾಡಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಖುಷ್ಬೂ ಸುಂದರ್ ಕಣ್ಣೀರು ಹಾಕುತ್ತಾ ಡಿಎಂಕೆ ನಾಯಕನ ವರ್ತನೆಯನ್ನು ಖಂಡಿಸಿದ್ದಾರೆ. ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರು ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಅಷ್ಟೇ ಅಲ್ಲದೆ ಮಹಿಳೆಯ ಬಗ್ಗೆ ಅತ್ಯಂತ ಚೀಪ್ ಆದ ಕಮೆಂಟ್ ಮಾಡೋದು ಸರಿಯಲ್ಲ. ಇದು ಡಿಎಂಕೆ ಪಕ್ಷದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ನಿಮ್ಮ ತಂದೆ, ಡಿಎಂಕೆ ಪಕ್ಷದ ಅಧಿನಾಯಕ ಕರುಣಾನಿಧಿ ಅವರು ಕಲಿಸಿದ ಪಾಠ ಇದೇನಾ? ಮಹಿಳೆಯರಿಗೆ ಕೊಡೋ ಗೌರವ ಇದೇನಾ ಎಂದು ಖುಷ್ಬೂ ಸುಂದರ್ ಪ್ರಶ್ನಿಸಿದ್ದಾರೆ.

ಖುಷ್ಬೂ ಸುಂದರ್ ಅವರ ಕಣ್ಣೀರು, ಬಿಜೆಪಿ ನಾಯಕರ ಸರಣಿ ಟ್ವೀಟ್‌ಗಳಿಂದ ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿ ಅವರ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿದೆ. ಈ ಬಗ್ಗೆ ಬಿಜೆಪಿ ದೂರು ದಾಖಲಿಸಿದ್ದು, ಗೌರವಾನ್ವಿತ ರಾಜ್ಯಪಾಲರು ಈ ಪ್ರಕರಣದ ಬಗ್ಗೆ ಗಮನಹರಿಸುವಂತೆ ಮನವಿ ಮಾಡಲಾಗಿತ್ತು. ಸದ್ಯ ಡಿಎಂಕೆ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ. ಖುಷ್ಬೂ ಅವರ ಸೌಂದರ್ಯದ ಭಾಷಣ ಸಾಕಷ್ಟು ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ‘ಖುಷ್ಬೂಗಿಂತ ನನ್ನ ಹೆಂಡ್ತಿನೇ ಸುರ ಸುಂದರಿ’- DMK ನಾಯಕನ ಈ ಕಮೆಂಟ್‌ಗೆ ತಮಿಳುನಾಡಿನಲ್ಲಿ ಅಲ್ಲೋಲ, ಕಲ್ಲೋಲ

https://newsfirstlive.com/wp-content/uploads/2023/06/Khusbu-Sundar.jpg

Load More