ಎಕ್ಸ್‌ಪ್ರೆಸ್‌ವೇನಲ್ಲಿ ಅತೀ ಹೆಚ್ಚಾಗಿ ಮೃತ ಪಟ್ಟಿರುವವರು ಬೈಕ್ ಸವಾರರೇ
ಇವತ್ತಿನಿಂದ ‘ದಶಪಥ’ದಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ಸಂಚಾರಕ್ಕೆ ಬ್ರೇಕ್
ಅಪಘಾತ ಪಥ ಎಂಬ ಹಣೆಪಟ್ಟಿ ಕಟ್ಟಿಕೊಂಡ ದಶಪಥ
ಮೈಸೂರು-ಬೆಂಗಳೂರು ನಡುವಿನ ದಶಪಥ ಹೈವೇನಲ್ಲಿ ಒಂದಿಲ್ಲೊಂದು ಅವಾಂತರಗಳು ಸೃಷ್ಟಿಯಾಗ್ತಾನೇ ಇವೆ. ಅದರಲ್ಲೂ ಇತ್ತೀಚೆಗೆ ಈ ಹೆದ್ದಾರಿ ಅಪಘಾತಗಳಿಗೆ ರಹದಾರಿ ಆಗಿದೆ. ಅವ್ಯವಸ್ಥೆಗಳ ಆಗರವಾಗಿರುವ ದಶಪಥ ಹೆದ್ದಾರಿಯಲ್ಲಿ ಇವತ್ತಿನಿಂದ ಲಘು ವಾಹನಗಳ ಪ್ರವೇಶಕ್ಕೆ ಬ್ರೇಕ್ ಬಿದ್ದಿದೆ.
ಬೆಂಗಳೂರು-ಮೈಸೂರು ನಡುವೆ 4 ತಾಸುಗಳ ಪ್ರಯಾಣದ ಅವಧಿಯನ್ನು 75 ನಿಮಿಷಕ್ಕೆ ಕಡಿಮೆ ಮಾಡುವ ಉದ್ದೇಶದಿಂದ ಆರಂಭವಾಗಿದ್ದ ದಶಪಥ. ಆದ್ರೆ, ಈ ದಶಪಥ ಅಪಘಾತ ಪಥ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಹೀಗಾಗಿ ಅಪಘಾತಗಳಿಗೆ ಕಡಿವಾಣ ಹಾಕಲು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಇಂದಿನಿಂದ ಕೆಲ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಮೈಸೂರು-ಬೆಂಗಳೂರು ಹೈವೇನಲ್ಲಿ ಸಂಚರಿಸೋ ಪ್ರಯಾಣಿಕರೇ ಗಮನಿಸಿ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಗಳಲ್ಲಿ ಅತೀ ಹೆಚ್ಚಾಗಿ ಮೃತ ಪಟ್ಟಿರುವವರು ಬೈಕ್ ಸವಾರರೇ. ಅಲ್ಲದೇ ರಾತ್ರಿ ವೇಳೆಯಲ್ಲಿ ಬೈಕ್ ಸವಾರರಿಗೆ ಈ ರಸ್ತೆ ಅಷ್ಟು ಸುರಕ್ಷಿತವೂ ಅಲ್ಲ. ಹೀಗಾಗಿ ಬೈಕ್‌ಗಳಿಗೆ ಹೈವೇನಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೇ ಟ್ರ್ಯಾಕ್ಟರ್‌ಗಳು, ಆಟೋಗಳು ಸಹ ವೇಗಮಿತಿಯಲ್ಲಿಯೇ ಸಂಚರಿಸುವುದರಿಂದ ಅವುಗಳಿಗೂ ಹೈವೇನಲ್ಲಿ ನಿರ್ಬಂಧ ವಿಧಿಸಿದ್ದು, ಸರ್ವಿಸ್ ರಸ್ತೆಯಲ್ಲಿ ಸಂಚಾರ ಮಾಡಬಹುದಾಗಿದೆ.. ಅಲ್ಲದೇ ಸರ್ವಿಸ್ ರಸ್ತೆಯನ್ನೇ ಬಳಸುವುದರಿಂದ ಅಪಘಾತ ಪ್ರಮಾಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ.
ನಿಷೇಧಿತ ವಾಹನಗಳು ಸಂಚರಿಸುವಂತಿಲ್ಲ
ಇನ್ನೂ ಟೋಲ್ ಪಾವತಿಸಿಯು ಎಕ್ಸ್‌ಪ್ರೆಸ್‌ವೇನಲ್ಲಿ ನಿಷೇಧಿತ ವಾಹನಗಳು ಸಂಚರಿಸುವಂತಿಲ್ಲ. ಒಂದ್ವೇಳೆ ದ್ವಿಚಕ್ರ, ತ್ರಿಚಕ್ರ, ಟ್ರ್ಯಾಕ್ಟರ್ ಚಾಲಕರು ಈ ನಿಯಮ ಮೀರಿ ಹೆದ್ದಾರಿಗಿಳಿದ್ರೆ 500 ರೂಪಾಯಿ ಫೈನ್ ಬೀಳೋದಂತೂ ಪಕ್ಕಾ. ಈ ರೀತಿ ಸಂಚರಿಸುವವರ ಮೇಲೆ ಹದ್ದಿನ ಕಣ್ಣಿಡಲು ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿಯೇ ಒಟ್ಟು 9 ಕಡೆಗಳಲ್ಲಿ ಪೊಲೀಸರಿಂದ ತಪಾಸಣೆ ನಡೆಯಲಿದ್ದು, ಚೆಕಿಂಗ್ ಪಾಯಿಂಟ್‌ಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಹೀಗಾಗಿ ಎಕ್ಸ್‌ಪ್ರೆಸ್ ವೇನಲ್ಲಿ ನಿಷೇಧಿತ ವಾಹನಗಳು ಕಡ್ಡಾಯವಾಗಿ ಸರ್ವಿಸ್ ರಸ್ತೆಯಲ್ಲಿಯೇ ಚಲಿಸಬೇಕು ಅಂತ ರಾಮನಗರ ಎಸ್‌ಪಿ ಮನವಿ ಮಾಡಿದ್ದಾರೆ.
ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಬಳಿಕ ಹೈವೇ ಪಕ್ಕದ ಸ್ಥಳೀಯ ಉದ್ಯಮಗಳು ನೆಲ ಕಚ್ಚಿದ್ದವು. ಬಿಡದಿಯ ತಟ್ಟೆ ಇಡ್ಲಿ, ಚನ್ನಪಟ್ಟಣದ ಗೊಂಬೆ, ಮದ್ದೂರು ವಡೆ, ಮಂಡ್ಯದ ಬೆಲ್ಲ ಹೀಗೆ ಸ್ಥಳೀಯ ವ್ಯಾಪಾರ ಮಕಾಡೆ ಮಲಗಿತ್ತು. ಇದೀಗ ಬೈಕ್, ಆಟೋ ಸೇರಿದಂತೆ ಒಂದಷ್ಟು ವಾಹನಗಳು ಸರ್ವಿಸ್ ರಸ್ತೆಯಲ್ಲಿ ಸಂಚರಿಸೋದ್ರಿಂದ ಸ್ಥಳೀಯ ಉದ್ಯಮಗಳು ಮತ್ತೆ ಚಿಗುರೊಡೆಯುವ ನಿರೀಕ್ಷೆ ಇದೆ.
ಒಟ್ಟಾರೆ ಹೈವೆಯಲ್ಲಿ ಬೈಕ್, ಆಟೋ ಸೇರಿದಂತೆ ಕೆಲವು ವಾಹನಗಳು ನಿಷೇಧ ಹೇರಿರುವುದು ವಾಹನ ಸವಾರರಿಗೆ ಬೇಸರ ಮೂಡಿಸಿದ್ರೆ, ಸ್ಥಳೀಯ ಉದ್ಯಮಿಗಳ ಜೀವನಕ್ಕೆ ಮತ್ತೆ ಆಸರೆಯಾಗಿರೋದಂತೂ ನಿಜ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ