newsfirstkannada.com

9 ತಿಂಗಳಲ್ಲಿ 600ಕ್ಕೂ ಹೆಚ್ಚು ಆ್ಯಕ್ಸಿಡೆಂಟ್: ಮೈಸೂರು ಎಕ್ಸ್​​​ಪ್ರೆಸ್​​ವೇನಲ್ಲಿ ಅಪಘಾತ ನಿಯಂತ್ರಣಕ್ಕೆ ಮೆಗಾ ಪ್ಲಾನ್ -ಅಂಥದ್ದೇನು ಮಾಡ್ತಿದ್ದಾರೆ ಗೊತ್ತಾ?

Share :

06-07-2023

  170ಕ್ಕೂ ಹೆಚ್ಚು ಮಂದಿ ಸಾವು, 500ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

  ಕೊನೆಗೂ ಸಾವು-ನೋವುಗಳಿಂದ ಎಚ್ಚೆತ್ತುಕೊಂಡ ಸರ್ಕಾರ

  ಬೆಂಗಳೂರು-ಮೈಸೂರು ಟ್ರಿಪ್ ಹೊಡೆಯೋರು ಓದಲೇಬೇಕಾದ ಸ್ಟೋರಿ

ಬೆಂಗಳೂರಿನಿಂದ ಮೈಸೂರಿಗೆ ಹೋಗಲು ನೀವು ಎಕ್ಸ್​ಪ್ರೆಸ್​ವೇ ಬಳಸುತ್ತೀರಾ. ಹಾಗಾದ್ರೆ ಈ ಸುದ್ದಿಯನ್ನು ನೀವು ನೋಡಲೇಬೇಕು. ದಶಪಥ ಹೆದ್ದಾರಿ ಸೂಪರ್​ ಆಗಿದೆ ಎಂದು ಹೈಸ್ಪೀಡ್​ನಲ್ಲಿ ಹೋದ್ರೆ ಕೇಸ್​ ಬೀಳುತ್ತೆ ಹುಷಾರ್​. ಹೌದು.. ದಶಪಥದಲ್ಲಿ ಅಪಘಾತಗಳನ್ನು ತಡೆಯಲು ವಾಹನಗಳ ಸ್ಪೀಡ್​ಗೆ ಪೊಲೀಸ್​ ಇಲಾಖೆ ಬ್ರೇಕ್​ ಹಾಕಿದೆ.

ಮೈಸೂರು ಎಕ್ಸ್​​​ಪ್ರೆಸ್​​ವೇನಲ್ಲಿ ವಾಹನಗಳ ವೇಗಕ್ಕೆ ಬ್ರೇಕ್

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಸಾವಿನ ಹೆದ್ದಾರಿಯಂದೇ ಅಪಖ್ಯಾತಿಗೆ ಒಳಗಾಗಿದೆ. ಸುಲಭ ಪ್ರಯಾಣಕ್ಕಾಗಿ ನಿರ್ಮಾಣವಾದ ಎಕ್ಸ್​ಪ್ರೆಸ್​ನಲ್ಲಿ ಉದ್ಘಾಟನೆಯಾದ ದಿನದಿಂದಲೂ ಎಣಿಕೆಗೆ ಸಿಗದಷ್ಟು ಅಪಘಾತಗಳು ಸಂಭವಿಸಿದ್ದು, ನೂರಾರು ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಕಾಂಗ್ರೆಸ್​ ಆರೋಪ ಮಾಡಿತ್ತು. ಇದನ್ನು ನಿರಾಕರಿಸಿದ್ದ ಸಂಸದ ಪ್ರತಾಪ್​ ಸಿಂಹ ಸವಾರರ ಅಜಾಗರುಕತೆ ಚಾಲನೆಯೇ ಕಾರಣ ಎಂದು ವಾದ ಮಾಡಿದ್ರು. ಇವರ ರಾಜಕೀಯ ಪ್ರತಿಷ್ಟೆಯಲ್ಲಿ ಸಾವು-ನೋವು ಅನುಭವಿಸಿದ್ದು ಮಾತ್ರ ಸಾರ್ವಜನಿಕರು.. ಹೀಗಾಗಿ ಸಾವಿನ ಹೆದ್ದಾರಿ ಆಗಿರುವ ದಶಪಥದಲ್ಲಿ ಇದೀಗ ಅಪಘಾತಗಳಿಗೆ ಇತಿಶ್ರೀ ಹಾಡಲು, ಪೊಲೀಸ್​ ಇಲಾಖೆ ಮುಂದಾಗಿದೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ ಪ್ರಕರಣ ಹೆಚ್ಚಳ ಹಿನ್ನಲೆ ರಾಜ್ಯ ಸಂಚಾರ ವಿಭಾಗದ ಆಯುಕ್ತ ಅಲೋಕ್ ಕುಮಾರ್ ಟ್ವಿಟ್​ ಮಾಡಿದ್ದು, ವಾಹನಗಳ ವೇಗಕ್ಕೆ ಬ್ರೇಕ್​ ಹಾಕಿದ್ದಾರೆ. ಕೆಲದಿನಗಳ ಹಿಂದೆ ದಶಪಥ ಹೆದ್ದಾರಿಗೆ ಭೇಟಿ, ಹೆಚ್ಚು ಅಪಘಾತ ಸಂಭವಿಸುತ್ತಿರುವ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ರು. ಈ ವೇಳೆ ಕೆಲ ಅವೈಜ್ಞಾನಿಕ ಕಾಮಗಾರಿಗಳನ್ನು ಗುರುತಿಸಿ, ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಯ ಗಮನಕ್ಕೆ ತಂದು ಸರಿಪಡಿಸುವಂತೆ ಸೂಚನೆ ನೀಡಿದ್ರು. ದಶಪಥದಲ್ಲಿನ ಅಪಘಾತಗಳಿಗೆ ಕೇವಲ ಹೆದ್ದಾರಿ ಪ್ರಾಧಿಕಾರವಷ್ಟೇಲ್ಲ. ರೋಡ್​ ಸೂಪರ್​ ಆಗಿದೆ ಅಂತ ಹೈಸ್ಪೀಡ್​ನಲ್ಲಿ ಹೋಗ್ತಿದ್ದ ಕೆಲ ಸವಾರರು ಕೂಡ ಕಾರಣ. ಈ ಕುರಿತು ಎಡಿಜಿಪಿ ಅಲೋಕ್​ ಕುಮಾರ್​ ಟ್ವೀಟ್ ಮಾಡಿದ್ದು, ವಾಹನಗಳ ಸ್ಪೀಡ್​ಗೆ ಬ್ರೇಕ್​ ಹಾಕಿದ್ದಾರೆ.

ಏನಿದು ಸರ್ಕಾರದ ಪ್ಲಾನ್​..?

 • 100 ಕಿ.ಮೀ ವೇಗ ಮಿತಿ ಇದ್ದರೂ ಹೆಚ್ಚಿನ ವೇಗದಲ್ಲಿ ಸಂಚಾರ
 • ಕಳೆದ 9 ತಿಂಗಳಲ್ಲಿ ದಶಪಥದಲ್ಲಿ 600ಕ್ಕೂ ಹೆಚ್ಚು ಅಪಘಾತಗಳು
 • ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ 256 ಅಪಘಾತಗಳು ನಡೆದಿವೆ
 • 170ಕ್ಕೂ ಹೆಚ್ಚು ಮಂದಿ ಸಾವು, 500ಕ್ಕೂ ಹೆಚ್ಚು ಮಂದಿ ಗಾಯ
 • ಅಪಘಾತ ತಡೆಯಲು ಗಂಟೆಗೆ 100 ಕಿ.ಮೀ ವೇಗ ಮಿತಿ ನಿಗದಿ
 • ಕೆಲವೆಡೆ 80 ಕಿ.ಮೀ ವೇಗದ ಮಿತಿ ವಿಧಿಸಿ ಫಲಕ ಅಳವಡಿಕೆ
 • ಶಿಸ್ತಿನಿಂದ ನಿಯಮ ಪಾಲಿಸಲು ಹೆದ್ದಾರಿಯಲ್ಲಿ ಸ್ಪೀಡ್ ರೇಡಾರ್ ಗನ್
 • ವಾಹನದ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳ ಅಳವಡಿಕೆ
 • 100 ಕಿ.ಮೀ.ಗಿಂತಲೂ ಅಧಿಕ ವೇಗದಲ್ಲಿ ಸಂಚಾರ ಮಾಡಿದ್ರೆ ಕೇಸ್​

ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ರಾಮನಗರ, ಮಂಡ್ಯ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಕಾರಿ, ಲೋಕೋಪಯೋಗಿ ಇಲಾಖೆ, ಸರ್ವೇ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಕಾರದ ಅಕಾಧಿಕಾರಿಗಳು ಸರ್ವೇ ಕಾರ್ಯ ನಡೆಸಿದ್ದಾರೆ. ಈಗಾಗಲೇ ಪೊಲೀಸ್ ಇಲಾಖೆ 54 ಅಂಶಗಳ ವರದಿ ಸಿದ್ದಪಡಿಸಿ, 18 ಅಪಘಾತ ವಲಯಗಳನ್ನು ಲೀಸ್ಟ್ ಮಾಡಿತ್ತು. ರಾಮನಗರ ಜಿಲ್ಲಾಧಿಕಾರಿ ಹೆದ್ದಾರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಎಕ್ಸ್ಪ್ರೆಸ್ವೇಯಲ್ಲಿ ತುರ್ತು ಎಂಟ್ರಿ, ಎಕ್ಸಿಟ್ ವ್ಯವಸ್ಥೆ, ಟ್ರಾಮಾ ಕೇರ್ ಸೆಂಟರ್, ಕೆಲವೆಡೆ ಮಳೆಗಾಲದಲ್ಲಿ ನೀರು ತುಂಬದಂತೆ ಕ್ರಮ ಕೈಗೊಳ್ಳುವುದು. ಹಾಗೂ ರಸ್ತೆ ಗುಣಮಟ್ಟದ ಬಗ್ಗೆಯು ಮುತುವರ್ಜಿ ವಹಿಸುವ ಭರವಸೆಯನ್ನು ರಾಮನಗರ ಜಿಲ್ಲಾಧಿಕಾರಿ ನೀಡಿದ್ದಾರೆ.

ಒಟ್ಟಾರೆ.. ಸಾವಿನ ಹೆದ್ದಾರಿ ಎಂಬ ಅಪಖ್ಯಾತಿ ಪಡೆದಿರುವ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇ ವೇಗ ಮಿತಿಯಿಂದಲಾದ್ರೂ ಅಪಘಾತಗಳ ಸಂಖ್ಯೆ ಕಡಿಮೆ ಆಗ್ತಾವಾ ಅನ್ನೋದನ್ನು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

9 ತಿಂಗಳಲ್ಲಿ 600ಕ್ಕೂ ಹೆಚ್ಚು ಆ್ಯಕ್ಸಿಡೆಂಟ್: ಮೈಸೂರು ಎಕ್ಸ್​​​ಪ್ರೆಸ್​​ವೇನಲ್ಲಿ ಅಪಘಾತ ನಿಯಂತ್ರಣಕ್ಕೆ ಮೆಗಾ ಪ್ಲಾನ್ -ಅಂಥದ್ದೇನು ಮಾಡ್ತಿದ್ದಾರೆ ಗೊತ್ತಾ?

https://newsfirstlive.com/wp-content/uploads/2023/07/MYS_BNG-EXPRESS.jpg

Load More