newsfirstkannada.com

VIDEO: ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದ ಮಹಿಳಾ ಪಿಎಸ್​ಐ ಮಗ.. ಪೊಲೀಸ್ರು ಏನ್ ಮಾಡಿದ್ರು ಗೊತ್ತಾ..?

Share :

26-08-2023

    ಮುಖ್ಯ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ಪಿಎಸ್ಐ ಮಗನ ಪುಂಡಾಟ

    ಸಿದ್ಧಾರ್ಥನಗರ ಸಂಚಾರಿ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ

    ವ್ಹೀಲಿಂಗ್ ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡ್ತಿದ್ದ

ಮೈಸೂರು: ವ್ಹೀಲಿಂಗ್ ಮಾಡಿ ಪುಂಡಾಟ ಮೆರೆಯುತ್ತಿದ್ದ ಮಹಿಳಾ ಪಿಎಸ್​ಐ ಮಗನಿಗೆ ಸಿದ್ಧಾರ್ಥನಗರ ಸಂಚಾರ ಪೊಲೀಸರು ಬುದ್ಧಿ ಕಲಿಸಿದ್ದಾರೆ. ಪಿಎಸ್‌ಐ ಪುತ್ರನನ್ನು ವಶಕ್ಕೆ ಪಡೆದ ಪೊಲೀಸರು ಬೈಕ್ ಅನ್ನು ಸೀಜ್ ಮಾಡಿದ್ದಾರೆ.

ಸೈಯದ್ ಐಮಾನ್ ವೀಲಿಂಗ್ ಮಾಡುತ್ತಿರುವುದು

ಸೈಯದ್ ಐಮಾನ್ ವ್ಹೀಲಿಂಗ್ ಮಾಡಿ ಪೊಲೀಸರ ವಶದಲ್ಲಿರೋ ಪಿಎಸ್ಐ ಮಗ. ಈತ ನಗರದ ರಿಂಗ್ ರಸ್ತೆ ಹಾಗೂ ರಾಜೀವ್ ಗಾಂಧಿ ನಗರದಲ್ಲಿ ಬೈಕ್​ ವ್ಹೀಲಿಂಗ್ ಮಾಡುತ್ತಿದ್ದನು. ಅದನ್ನು ತನ್ನ ಸ್ನೇಹಿತರಿಂದ ವಿಡಿಯೋ ಮಾಡಿಸಿ ಬಳಿಕ ಆ ವಿಡಿಯೋಗಳನ್ನು ಸಾಮಾಜಿಕ ಜಾಲಾತಾಣಗಳಿಗೆ ಶೇರ್ ಮಾಡುತ್ತಿದ್ದನು. ಈ ಬಗ್ಗೆ ಪೊಲೀಸರು ಯಾರೆಂದು ತಲೆ ಕೆಡಿಸಿಕೊಂಡಿದ್ದರು. ಇದೀಗ ಸಿದ್ಧಾರ್ಥನಗರ ಸಂಚಾರಿ ಪೊಲೀಸರು ಪಿಎಸ್​ಐ ಮಗನನ್ನು ವಶಕ್ಕೆ ಪಡೆದಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೈಯದ್ ಐಮಾನ್ ವ್ಹೀಲಿಂಗ್​ ಮಾಡುತ್ತಿದ್ದ ವಿಡಿಯೋವನ್ನೇ ಆಧಾರವಾಗಿರಿಸಿಕೊಂಡು ಸಿದ್ಧಾರ್ಥನಗರದ ಸಂಚಾರಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಆದಷ್ಟು ಬೇಗ ಪೊಲೀಸರು ಬೈಕ್ ಹಾಗೂ ಸೈಯದ್ ಐಮಾನ್ ಅನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ‌ ಕೂಡ ದಾಖಲು ಮಾಡಲಾಗಿದೆ. ಇನ್ನು ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದ ಮಹಿಳಾ ಪಿಎಸ್​ಐ ಮಗ.. ಪೊಲೀಸ್ರು ಏನ್ ಮಾಡಿದ್ರು ಗೊತ್ತಾ..?

https://newsfirstlive.com/wp-content/uploads/2023/08/MYS_PSI_SON.jpg

Load More