newsfirstkannada.com

ಆಷಾಢ ಮಾಸದ ಮೊದಲ ಶುಕ್ರವಾರ.. ಚಾಮುಂಡಿ ಸನ್ನಿಧಿಯಲ್ಲಿ ಭಕ್ತ ಸಾಗರ

Share :

Published June 23, 2023 at 10:01am

    ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹರಿದು ಬರುತ್ತಿರುವ ಭಕ್ತರು

    65 ವರ್ಷ ಮೇಲ್ಪಟ್ಟ ಭಕ್ತರಿಗೆ ಚಾಮುಂಡಿಯ ನೇರ ದರ್ಶನ..!

    ಆಷಾಢ ಮಾಸದ ಮೊದಲ ಶುಕ್ರವಾರ ದೇವಿಗೆ ವಿಶೇಷ ಪೂಜೆ

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರ ಹಿನ್ನೆಲೆಯಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆಯಲು ಭಕ್ತ ಸಾಗರ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಸಡಗರ, ಸಂಭ್ರಮ ಕಳೆಗಟ್ಟಿದೆ.

ಇವತ್ತಿನ ಬೆಳಗಿನ ಜಾವ 3 ಗಂಟೆಯಿಂದ ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತಿದೆ. ದೇವಾಲಯದ ಗರ್ಭ ಗುಡಿಯೊಳಗಿನ ಶ್ರೀ ಚಾಮುಂಡೇಶ್ವರಿ ಅಲಂಕಾರದಿಂದ ಲಕ್ಷ್ಮೀಯಂತೆ ಕಂಗೊಳಿಸುತ್ತಿದ್ದಾಳೆ. ಇನ್ನು ದೇವಾಲಯದ ಆವರಣವೆಲ್ಲ ವಿವಿಧ ಹೂವು ಹಾಗೂ ಹಣ್ಣುಗಳಿಂದ ಸಿಂಗಾರ ಮಾಡಲಾಗಿದೆ. ಚಾಮುಂಡಿ ತಾಯಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ನಂತರ ಮಹಾ ಮಂಗಳಾರತಿ ಮಾಡಲಾಗುತ್ತದೆ. ಈ ಎಲ್ಲ ಪೂಜೆಗಳು ದೇವಿಗೆ ಮಾಡಿದ ಬಳಿಕ ಭಕ್ತರಿಗೆ ದರ್ಶನ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಇದನ್ನು ಓದಿ: Video: ಅಮೆರಿಕ ಸಂಸತ್​ನಲ್ಲಿ ಮೊಳಗಿದ ಮೋದಿ, ಮೋದಿ, ಮೋದಿ ಘೋಷಣೆ..!

ಬೆಳಗ್ಗೆ 5:30 ರಿಂದಲೇ ಚಾಮುಂಡೇಶ್ವರಿ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ. ಈ‌ ಬಾರಿ ಪಾಸ್ ವ್ಯವಸ್ಥೆಯನ್ನು ತೆಗೆದು ಹಾಕಲಾಗಿದ್ದು 300 ರೂ. ಹಾಗೂ 50 ರೂ. ಟಿಕೆಟ್ ಪಡೆದ ಭಕ್ತರಿಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇನ್ನು 65 ವರ್ಷ ಮೇಲ್ಪಟ್ಟವರಿಗೆ 50 ರೂ. ಟಿಕೆಟ್ ಸಾಲಿನಲ್ಲಿ ನೇರವಾಗಿ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ದೇವಿಯ ದರ್ಶನವು ಇಂದು ಬೆಳಗ್ಗೆ‌ 5.30 ರಿಂದ ರಾತ್ರಿ 12 ಗಂಟೆವರೆಗೆ ಇರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಷಾಢ ಮಾಸದ ಮೊದಲ ಶುಕ್ರವಾರ.. ಚಾಮುಂಡಿ ಸನ್ನಿಧಿಯಲ್ಲಿ ಭಕ್ತ ಸಾಗರ

https://newsfirstlive.com/wp-content/uploads/2023/06/MYS_CHAMUNWESHWARI.jpg

Load More