ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಕಾರಲ್ಲೇ ನಮಸ್ಕರಿಸಿದ ಸಿಎಂ ಪತ್ನಿ
ಮುಡಾ ಕೇಸ್ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಪಾರ್ವತಮ್ಮ
ಚಾಮುಂಡಿ ಬೆಟ್ಟಕ್ಕೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರ ಕುಟುಂಬ
ಮೈಸೂರಲ್ಲಿ ದಸರಾ ಸಂಭ್ರಮ ಅದ್ಧೂರಿಯಾಗಿದೆ. ರಾಜ ಬೀದಿಯಲ್ಲಿ ವಿರಾಜಮಾನಳಾಗಿ ಚಾಮುಂಡೇಶ್ವರಿ ಅಂಬಾರಿಯಲ್ಲಿ ಮೆರವಣಿಗೆ ಸಾಗಿದ್ದಾಯ್ತು. ಇವತ್ತು ವಿಶೇಷವಾಗಿ ಅಲಂಕಾರಗೊಂಡಿದ್ದ ಚಾಮುಂಡೇಶ್ವರಿಯನ್ನ ನೋಡಲು ಸಾಕಷ್ಟು ಜನರು ಆಗಮಿಸಿದ್ರು. ಅವರಲ್ಲಿ ಮುಡಾ ಕೇಸ್ ಎದುರಿಸುತ್ತಿರುವ ಸಿಎಂ ಪತ್ನಿಯೂ ಕಣ್ಣಿಗೆ ಬಿದ್ದಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಮುಡಾ ಕಂಟಕದಿಂದ ಸಿಎಂ ಪತ್ನಿ ಪಾರಾಗ್ತಾರಾ? ದೈವ ಭಕ್ತೆ ಪಾರ್ವತಮ್ಮನ ಕಾಪಾಡುವನೇ ಮಾದಪ್ಪ?
ದಸರಾ ಹಿನ್ನೆಲೆಯಲ್ಲಿ ಅರಮನೆ ನಗರಿ ಮೈಸೂರಿನಲ್ಲಿ ಸಂಭ್ರಮ ಮನೆ ಮಾಡಿದೆ. ದಸರಾ ಕೊನೆಯ ದಿನವಾಗಿ ಇವತ್ತು ಸಾಕಷ್ಟು ಸಂಖ್ಯೆಯಲ್ಲಿ ಜನರು ಮೈಸೂರಿಗೆ ಆಗಮಿಸಿ ಜಂಬೂ ಸವಾರಿಯನ್ನ ಕಣ್ತುಂಬಿಕೊಂಡಿದ್ದಾರೆ. 750 ಕೆಜಿ ಅಂಬಾರಿ ಒಳಗೆ ನಾಡ ಅಧಿದೇವತೆ ಚಾಮುಂಡೇಶ್ವರಿ ಅಲಂಕಾರಗೊಂಡು ರಾಜಬೀದಿಯಲ್ಲಿ ಮೆರವಣಿಗೆ ಸಾಗಿದ್ದ ಲಕ್ಷಾಂತರ ಜನರು ಕಣ್ತುಂಬಿಕೊಂಡರು.
ಚಾಮುಂಡಿ ಬೆಟ್ಟಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಕುಟುಂಬ
ನವರಾತ್ರಿಯ ಕೊನೆಯ ದಿನವಾಗಿರುವ ಇಂದು ನಾಡದೇವತೆ ಮತ್ತು ಉತ್ಸವ ಮೂರ್ತಿ ಚಾಮುಂಡೇಶ್ವರಿಗೆ ನಾಡಿನ ಮುಖ್ಯಮಂತ್ರಿಗಳ ಕುಟುಂಬ ಪೂಜೆ ಸಲ್ಲಿಸೋದು ಪದ್ದತಿ. ಅದ್ರಂತೆ ಈ ಬಾರಿ ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದೆ. ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಅವರು ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿದ್ರು.
ಉತ್ಸವ ಮೂರ್ತಿಗೆ ಕಾರಲ್ಲೇ ನಮಸ್ಕರಿಸಿದ ಸಿಎಂ ಪತ್ನಿ
ಕ್ಯಾಮೆರಾ ಕಾಣ್ತಿದ್ದಂತೆ ಮುಖ ಮರೆಮಾಚಿಕೊಂಡ ಸಿಎಂ ಪತ್ನಿ
ಸಿಎಂ ಸೊಸೆ ಸ್ಮಿತಾ ರಾಕೇಶ್ ಅವರು ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ನಮಸ್ಕರಿಸಿ ಬಂದ್ರೆ ಸಿಎಂ ಪತ್ನಿ ಪಾರ್ವತಿ ಕಾರಲ್ಲೇ ಕೂತು ದೇವಿಯನ್ನ ಕಣ್ತುಂಬಿಕೊಂಡು ನಮಸ್ಕರಿಸಿದ್ರು. ಬೆಳಗ್ಗೆ 8 ಗಂಟೆಗೆ ಉತ್ಸವ ಮೂರ್ತಿ ಚಾಮುಂಡಿ ಬೆಟ್ಟದಿಂದ ಮೆರವಣಿಗೆ ಸಾಗಿತ್ತು. ಈ ವೇಳೆ ಕಾರಲ್ಲೇ ಕೂತು ಪಾರ್ವತಿಯವರು ದೇವಿ ದರ್ಶನ ಪಡೆದ್ರು.
ಮುಡಾ ಸೈಟ್ ಆರೋಪ ಕೇಸಲ್ಲಿ ಪ್ರಮುಖ ಆರೋಪಿಯಾಗಿರುವ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಚಾಮುಂಡಿ ದೇವಿಯ ದರ್ಶನವನ್ನೂ ಕಾರಲ್ಲೇ ಪಡೆದಿದ್ದಾರೆ. ಕಾರಲ್ಲೇ ಕೂತು ಚಾಮುಂಡೇಶ್ವರಿ ಸರ್ವ ಸಮಸ್ಯೆ ದೂರ ಮಾಡು. ಪತಿಯ ಏಳಿಗೆಗೆ ಆಶೀರ್ವಾದ ಮಾಡಲಿ ಅಂತ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ