newsfirstkannada.com

ಸಂಭ್ರಮದ ಮೈಸೂರು ದಸರಾ; ಇವತ್ತು ದುರ್ಗಾಷ್ಟಮಿ.. ನಾಳೆ ಜಂಬೂ ಸವಾರಿ, ಜಟ್ಟಿ ಕಾಳಗಕ್ಕೆ ಕ್ಷಣಗಣನೆ  

Share :

23-10-2023

  ನಿನ್ನೆ ಬಾನಂಗಳದಲ್ಲಿ ಜಸ್ಟ್​​ ಝಲಕ್​​​, ಇಂದು ಉಕ್ಕಿನ ಹಕ್ಕಿಗಳ ಕಲರವ

  ಜಂಬೂಸವಾರಿ ದಿನ ಯದುವೀರ ಒಡೆಯರ್ ಸಮ್ಮುಖದಲ್ಲಿ ಜಟ್ಟಿ ಕಾಳಗ

  ದೇಶ ವಿದೇಶಗಳಿಂದ ಆಗಮಿಸಿದ ಲಕ್ಷಗಟ್ಟಲೆ ಜನರು ಮೈಸೂರಿನತ್ತ ಹೆಜ್ಜೆ 

ಇಡೀ ರಾಜ್ಯದ ಚಿತ್ತ, ಮೈಸೂರು ದಸರಾದತ್ತ ನೆಟ್ಟಿದೆ. ಎಲ್ಲಿ ನೋಡಿದ್ರು ದಸರಾ ಸಂಭ್ರಮ ಮೇಳೈಸಿದೆ. ತಳಿರು ತೋರಣಗಳಿಂದ ಅತಿಥಿಗಳನ್ನ ಆತ್ಮೀಯವಾಗಿ ಸ್ವಾಗತಿಸ್ತಿದೆ. ಇವತ್ತು ದುರ್ಗಾಷ್ಠಮಿ ಇದ್ದು, ಆಯುಧ ಪೂಜೆ ನಡೆಯಲಿದೆ. ಇನ್ನು, ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ನಾಳೆ ನಡೆಯಲಿದೆ.

ಮೈಸೂರು ದಸರಾ ಎಷ್ಟೊಂದು ಸುಂದರ. ಚೆಲ್ಲಿದೆ ನಗೆಯಾ ಪನ್ನೀರಾ? ಈ ಹಾಡಿನಷ್ಟೇ ಮಧುರ ನಾಡಹಬ್ಬ ದಸರಾ. ದಸರಾ ಸಡಗರ ಸದ್ಯ, ಕೊನೆಘಟ್ಟಕ್ಕೆ ತಲುಪಿದ್ದು, ಇವತ್ತು ನವರಾತ್ರಿ ಸಂಭ್ರಮ. ಆಯುಧ ಪೂಜೆ, ನಾಳೆ ಜಂಬೂ ಸವಾರಿ ಜರುಗಲಿದೆ.. ಈ ದಶ ದಿನದ ಕ್ಷಣಕ್ಕೆ ಸಾಕ್ಷಿಯಾಗಲು ಲಕ್ಷಗಟ್ಟಲೆ ಪ್ರವಾಸಿಗರು ದೇಶ ವಿದೇಶಗಳಿಂದ ಮೈಸೂರಿನತ್ತ ಹೆಜ್ಜೆ ಹಾಕ್ತಿದ್ದಾರೆ.

ಯದುವೀರ ಒಡೆಯರ್

ಇವತ್ತು ದುರ್ಗಾಷ್ಠಮಿ, ನಾಳೆಯೇ ವಿಜಯದಶಮಿ!

ಇದು  ಕರ್ನಾಟಕದ ಉತ್ಸವ. ಈ ಸುಮಧುರ ಘಳಿಗೆಗಾಗಿ ವರ್ಷ ಪೂರ್ತಿ ಕಾಯುವ ಅದ್ಭುತ ಹಬ್ಬ.. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಸ್ವರ್ಗವೇ ಧರೆಗಿಳಿದಂತೆ ಭಾಸವಾಗ್ತಿದೆ. ವಿದ್ಯುತ್​ ದೀಪಗಳಿಂದ ಅಲಂಕೃತಗೊಂಡ ಮೈಸೂರು, ಎತ್ತ ನೋಡಿದ್ರು ಝಗಮಗಿಸ್ತಿದೆ.. ಈ ಸ್ವರ್ಗಾನುಭವ ಆಸ್ವಾದಿಸಲು ಅರಮನೆ ನಗರಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.. ಇವತ್ತು ಅರಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ವೇದ-ಮಂತ್ರ ಘೋಷ ಮೊಳಗಲಿದೆ.

ಅರಮನೆಯಲ್ಲಿ ಧಾರ್ಮಿಕ ಕಾರ್ಯಗಳು

 • ಅಕ್ಟೋಬರ್​​​ 23 ಅಂದರೆ ಇವತ್ತು ದುರ್ಗಾಷ್ಠಮಿ ಆಚರಣೆ
 • ಬೆಳಗ್ಗೆ 5.30- ಚಂಡಿ ‌ಹೋಮದೊಂದಿಗೆ ಪೂಜೆಗಳು ಶುರು
 • ಬೆ.5.30- ಪಟ್ಟದ ಆನೆ, ಪಟ್ಟದ ಕುದುರೆ, ಹಸು ಆಗಮನ
 • ಬೆ.6.05- ಕೋಡಿ‌ ಸೋಮೇಶ್ವರ ದೇಗುಲಕ್ಕೆ ಖಾಸಾ ಆಯುಧಗಳು ರವಾನೆ
 • ಬೆ.07.15- ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆಗೆ ಆಯುಧಗಳು ವಾಪಸ್​
 • ಬೆ.9.30- ಚಂಡಿಹೋಮ ಪೂರ್ಣಾಹುತಿ
 • ಬೆ.11.45- ಕಲ್ಯಾಣ ಮಂಟಪಕ್ಕೆ ಪಟ್ಟದ ಕುದುರೆ, ಪಟ್ಟದ ಆನೆ, ಹಸು ಆಗಮನ
 • ಮ.12.20-12:45: ರಾಜವಂಶಸ್ಥ ಯದುವೀರ ಒಡೆಯರ್​ರಿಂದ ಆಯುಧಗಳಿಗೆ ಪೂಜೆ
 • ಸಂಜೆ ಯದುವೀರ್​ರಿಂದ ಖಾಸಗಿ ದರ್ಬಾರ್, ಖಾಸಗಿ ದರ್ಬಾರ್ ನಂತರ ಸಿಂಹ ವಿಸರ್ಜನೆ

ಈ ಬಾರಿ ನಾಲ್ಕು ಜಟ್ಟಿಗಳ ಎರಡು ತಂಡ ಸಿದ್ಧ

ನಾಡಿದ್ದು ವಿಶ್ವ ಪ್ರಸಿದ್ಧ ಜಗತ್ ಜೆಟ್ಟಿ ಕಾಳಗ ನಡೆಯಲಿದೆ. ವಜ್ರಮುಷ್ಟಿ ಕಾಳಗಕ್ಕೆ ಜೋಡಿಗಳ ತಯಾರಿ ನಡೆದಿದೆ. ಅರಮನೆ ಅಂಗಳದಲ್ಲಿ ಜಟ್ಟಿಗಳ ಜೋಡಿ ಕಟ್ಟುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಮೈಸೂರು, ಚಾಮರಾಜನಗರ, ಚನ್ನಪಟ್ಟಣ, ಬೆಂಗಳೂರು ಮೂಲದ ಜಟ್ಟಿಗಳು ಭಾಗಿ ಆಗ್ತಿದ್ದಾರೆ. ಈ 4 ಜಟ್ಟಿಗಳ ನಡುವೆ ಉಸ್ತಾದ್‌ಗಳು ಎರಡು ತಂಡ ಮಾಡಿದ್ದಾರೆ..

ಜಟ್ಟಿ ಕಾಳಗದ ಜೋಡಿ

 • ಚಾಮರಾಜನಗರ Vs ಬೆಂಗಳೂರು ಜಟ್ಟಿಗಳು
 • ಚನ್ನಪಟ್ಟಣ Vs ಮೈಸೂರು ಜಟ್ಟಿಗಳ ಜೋಡಿ
 • ಯದುವೀರ ಒಡೆಯರ್ ಸಮ್ಮುಖದಲ್ಲಿ ಜಟ್ಟಿ ಕಾಳಗ
 • ಜಂಬೂಸವಾರಿ ದಿನ ನಡೆಯುವ ವಜ್ರಮುಷ್ಠಿ ಕಾಳಗ
 • ರಾಜ ಕುಲಕ್ಕೆ ನಿಷ್ಠೆ ತೋರಿಸುವ ನಿಟ್ಟಲ್ಲಿ ಮುಷ್ಠಿಯುದ್ಧ

ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭ

ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಶುರುವಾಗಿದೆ.. ನಿನ್ನೆ ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆ ಅಂತಿಮ ತಾಲೀಮು ನಡೆಯಿತು. ಜಂಬೂ ಸವಾರಿ ಪುಷ್ಪಾರ್ಚನೆ, ಪೊಲೀಸ್ ಭದ್ರತೆ ಸೇರಿ ಮೆರವಣಿಗೆಯ ಪೂರ್ಣ ಪ್ರಮಾಣದ ತಾಲೀಮು ಆಗಿದೆ. ಗಜಪಡೆ, ಅಶ್ವದಳ, ಪೊಲೀಸ್ ತುಕಡಿ, ಪೊಲೀಸ್ ಬ್ಯಾಂಡ್, ಫಿರಂಗಿದಳ ತಾಲೀಮಿನಲ್ಲಿ ಭಾಗಿ ಆಗಿದ್ವು.. ಮೈಸೂರು ಅರಮನೆ ಸಿಬ್ಬಂದಿ ಸಾಂಪ್ರದಾಯಿಕ ಉಡುಗೆ ತೊಟ್ಟು ಗಮನ ಸೆಳೆದ್ರು. ಸಾಂಕೇತಿಕವಾಗಿ ಡಿಸಿ ರಾಜೇಂದ್ರ, ಹಿರಿಯ ಪೊಲೀಸ್ ಅಧಿಕಾರಿಗಳು ಪುಷ್ಪಾರ್ಚನೆ ಮಾಡಿದ್ರು.

ಬಾನಂಗಳದಲ್ಲಿ ಏರ್​ ಶೋ

ಮೈಸೂರಿನ ಬಾನಂಗಳದಲ್ಲಿ ಏರ್​ ಶೋ ಪ್ರದರ್ಶನ!

ನಿನ್ನೆ ಬಾನಂಗಳದಲ್ಲಿ ಏರ್​ ಶೋ ಪ್ರದರ್ಶನ ಚಿತ್ತಾರ ಮೂಡಿಸಿತು. ನಿನ್ನೆ ರಿಹರ್ಸಲ್​​​​ ನಡೆಸಿದ ಏರೊ ಬ್ಯಾಟಿಕ್ ಚಟುವಟಿಕೆ ನಡೆಸುವ ವಾಯು ಪಡೆಯ ಪ್ರತ್ಯೇಕ ತಂಡ, ಇವತ್ತು ಏರ್​ ಶೋ ನಡೆಸಲಿದೆ. ಮೈಸೂರಿನ ಬನ್ನಿ ಮಂಟಪ ಮೈದಾನ ಪೂರ್ವಕ್ಕೆ ಮುಖ ಮಾಡಿ ಮಧ್ಯಾಹ್ನದ ನಂತ್ರ ಶೋ ಮಾಡಬೇಕೆಂದು ಪ್ಲಾನ್ ಮಾಡಲಾಗ್ತಿದೆ. ನಿನ್ನೆ ರಿಹರ್ಸಲ್​​ನಲ್ಲಿ ಸಾವಿರಾರು ಜನ ನೆರೆದಿದ್ರು. ಇಂದು ಏರ್​​ಶೋ ಮತ್ತಷ್ಟು ಮಗದಷ್ಟು ಜನ ಸೇರುವ ಸಾಧ್ಯತೆಗಳಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ಸಂಭ್ರಮದ ಮೈಸೂರು ದಸರಾ; ಇವತ್ತು ದುರ್ಗಾಷ್ಟಮಿ.. ನಾಳೆ ಜಂಬೂ ಸವಾರಿ, ಜಟ್ಟಿ ಕಾಳಗಕ್ಕೆ ಕ್ಷಣಗಣನೆ  

https://newsfirstlive.com/wp-content/uploads/2023/10/MYS_DASARA_1.jpg

Load More