ದಸರಾದಲ್ಲಿ ಜನರ ಕಣ್ಮನ ಸೆಳೆದ ರಾಜ್ಯದ 31 ಜಿಲ್ಲೆಗಳ ಸ್ತಬ್ಧ ಚಿತ್ರಗಳು
ಅಭಿಮನ್ಯುಗೆ ಸಾಥ್ ಕೊಟ್ಟ 14 ಆನೆಗಳು, ಹೇಗಿತ್ತು ಜಂಬೂ ಸವಾರಿ..?
ಸತತ 4ನೇ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಮಿಂಚಿದ ಅಭಿಮನ್ಯು ಆನೆ
ಮೈಸೂರು ದಸರಾ ಎಷ್ಟೊಂದು ಸುಂದರ.. ಅದರಲ್ಲೂ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳೋದೆ ಒಂದು ಹಬ್ಬ. ಸರ್ಕಾರ ಸರಳ ದಸರಾ ಮಾಡ್ತೀವಿ ಅಂದಿದ್ರೂ ಈ ಬಾರಿ ಮೈಸೂರು ದಸರಾ ವೈಭವ ಜೋರಾಗಿಯೇ ಇತ್ತು. 750 ಕೆಜಿ ತೂಕದ ಅಂಬಾರಿ ಹೊತ್ತು ಅಭಿಮನ್ಯು ಸಾಗಿದ ಆ ಗಜಗಾಂಭೀರ್ಯ ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿತು. ತರಹೇವಾರಿ ಸ್ತಬ್ಧ ಚಿತ್ರಗಳು ಜನರ ಮನಸೂರೆಗೊಂಡವು.
ಸಾಂಸ್ಕೃತಿಕ ನಗರಿಯಲ್ಲಿ ಮೇಳೈಸಿದ ಜಂಬೂ ಸವಾರಿ. ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಗಾಂಭೀರ್ಯದಿಂದ ಕ್ಯಾಪ್ಟನ್ ಅಭಿಮನ್ಯು ಸಾಗಿದ. ಅತ್ತ ರೋಹಿತ್ ಇತ್ತ ಗೋಪಿ ನಡುವಲ್ಲಿ ಕ್ಯಾಪ್ಟನ್ ಅಭಿಮನ್ಯು ಹೆಜ್ಜೆ ಹಾಕಿದ. 14 ಆನೆಗಳು ಅಭಿಮನ್ಯುಗೆ ಸಾಥ್ ಕೊಟ್ಟವು.
750 ಕೆಜಿ ತೂಕದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು
ವಿಶ್ವವಿಖ್ಯಾತ ನಾಡಹಬ್ಬ ದಸರಾದ 414ನೇ ಜಂಬೂಸವಾರಿ ಅದ್ದೂರಿಯಾಗಿ ನೆರವೇರಿದೆ. ಪಟ್ಟದ ಆನೆ ಕ್ಯಾಪ್ಟನ್ ಅಭಿಮನ್ಯು ಸಂಭ್ರಮದಿಂದ ಅಂಬಾರಿಯನ್ನು ಹೊತ್ತು ಸಾಗಿದ್ದಾನೆ. ಸಂಜೆ 4.40ರ ಸುಮಾರಿಗೆ ಅಂಬಾವಿಲಾಸ ಅರಮನೆಯ ಒಳಾವರಣದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನು ಹೊತ್ತು ಕ್ಯಾಪ್ಟನ್ ಅಭಿಮನ್ಯು ಮೈಸೂರಿನ ಬೀದಿ ಬೀದಿಗಳಲ್ಲಿ ಗಾಂಭೀರ್ಯದಿಂದ ಸಾಗಿದ್ದಾನೆ. ಈ ವೇಳೆ ಅಭಿಮನ್ಯುಗೆ 14 ಆನೆಗಳು ಸಾಥ್ ನೀಡಿದವು. ಬಲರಾಮ ದ್ವಾರದಿಂದ ಶುರುವಾದ ಜಂಬೂಸವಾರಿ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಆಸ್ಪತ್ರೆ ವೃತ್ತ, ಮೈಸೂರು ಸರ್ಕಲ್, ಬನ್ನಿಮಂಟಪದವರೆಗೆ ಸಾಗಿ ಬಂತು.
ಜಂಬೂಸವಾರಿಯಲ್ಲಿ ನಾಡದೇವತೆಯನ್ನು ಕಣ್ತುಂಬಿಕೊಂಡ ಲಕ್ಷಾಂತರ ಜನ
ಇನ್ನು ಜಂಬೂಸವಾರಿ ಸಾಗಿದ ರಸ್ತೆಯ ಇಕ್ಕೆಲಗಳಲ್ಲೂ ಜನರು ಕಿಕ್ಕಿರಿದು ತುಂಬಿದ್ರು. ಸಂಭ್ರಮದ ಜಂಬೂಸವಾರಿಯನ್ನು 4 ರಿಂದ 5 ಲಕ್ಷ ಜನರು ಕಣ್ತುಂಬಿಕೊಂಡರು. ಅಂಬಾರಿಯಲ್ಲಿ ವಿರಾಜಮಾನಳಾದ ನಾಡದೇವತೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ಪುನೀತರಾದ್ರು. ಪೊಲೀಸರು ದಸರಾ ಹಿನ್ನೆಲೆ ಬಿಗಿಬಂದೋಬಸ್ತ್ ಕೈಗೊಂಡಿದ್ರು. ಜಂಬೂಸವಾರಿ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ರು.
ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧ ಚಿತ್ರಗಳ ಮೆರವಣಿಗೆ
ಇನ್ನು ಜಂಬೂಸವಾರಿಗೂ ಮುನ್ನ ಜನರನ್ನು ಸೆಳೆದದ್ದು ಅಂದ್ರೆ ಅದು ತರಹೇವಾರಿ ಸ್ತಬ್ಧಚಿತ್ರಗಳು. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಪ್ರದರ್ಶಿಸುತ್ತಾ ರಾಜಪಥದಲ್ಲಿ 31 ಜಿಲ್ಲೆಗಳು ಹಾಗೂ 18 ವಿವಿಧ ಇಲಾಖೆಗಳಿಂದ ಒಟ್ಟು 49 ಸ್ತಬ್ಧ ಚಿತ್ರಗಳು ಮೆರವಣಿಗೆ ಸಾಗಿ ಜನರ ಗಮನ ಸೆಳೆದವು. ಅದರಲ್ಲೂ ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತ ಸ್ತಬ್ಧ ಚಿತ್ರ ಎಲ್ಲರ ಗಮನ ಸೆಳೆಯಿತು. ಶಕ್ತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಸೇರಿದಂತೆ ಪಂಚ ಗ್ಯಾರಂಟಿಗಳ ಮಾದರಿ ವಿಶೇಷವಾಗಿತ್ತು.
ಇನ್ನು ಬೆಂಗಳೂರು ನಗರದಿಂದ ಚಂದ್ರಯಾನ -3 ಮಾದರಿ ಎಲ್ಲರ ಆಕರ್ಷಣೆಗೆ ಕಾರಣವಾಗಿತ್ತು. ಸ್ತಬ್ಧ ಚಿತ್ರ ಉಪಸಮಿತಿಯಿಂದ ಯುನೆಸ್ಕೋದಿಂದ ಗುರುತಿಸಲ್ಪಟ್ಟ ವಿಶ್ವ ಪಾರಂಪರಿಕ ಹೊಯ್ಸಳ ದೇವಸ್ಥಾನ, ಬೇಲೂರು ಹಳೇಬೀಡು, ಸೋಮನಾಥಪುರ ದೇವಾಲಯ ಕುರಿತ ಸ್ತಬ್ಧ ಚಿತ್ರ ಮನಮೋಹಕವಾಗಿತ್ತು. ಧಾರವಾಡ ಜಿಲ್ಲೆಯಿಂದ ಧಾರವಾಡ ಪೇಡ, ಧಾರವಾಡ ಎಮ್ಮೆ ನಮ್ಮ ಹೆಮ್ಮೆ ಎಂಬ ಸ್ತಬ್ಧ ಚಿತ್ರ ಕಣ್ಮನ ಸೆಳೆಯಿತು. ಇನ್ನು ಮಂಡ್ಯ ಜಿಲ್ಲೆಯಿಂದ ಸಾಂಪ್ರದಾಯಿಕ ಉದ್ಯಮ ಆಲೆಮನೆ ಕುರಿತ ಸ್ತಬ್ಧ ಚಿತ್ರ ಆಕರ್ಷಕವಾಗಿತ್ತು.
ಐತಿಹಾಸಿಕ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಜಂಬೂಸವಾರಿ ವೈಭವದಿಂದ ಜರುಗಿತು. ಸತತವಾಗಿ 4ನೇ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಮಿಂಚಿದನು. ಜಂಬೂಸವಾರಿಯಲ್ಲಿ ಸ್ತಬ್ಧಚಿತ್ರಗಳು ಕೂಡ ಜನರ ಮನಸೂರೆಗೊಂಡವು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ