newsfirstkannada.com

ಮೈಸೂರಲ್ಲಿ ಹುಲಿ ದಾಳಿ.. ರೈತನನ್ನು ಕಚ್ಚಿ ಕೊಂಡು ಹೋಗುತ್ತಿದ್ದ ದೃಶ್ಯ ನೋಡಿ ಬೆಚ್ಚಿ ಬಿದ್ದ ಗ್ರಾಮಸ್ಥರು

Share :

06-11-2023

    ಕಾಡಂಚಿನ ಗ್ರಾಮಗಳಲ್ಲಿ ನಿಲ್ಲದ ವನ್ಯಜೀವಿ- ಮಾನವ ಸಂಘರ್ಷ

    ಟೀ ಕುಡಿದು ಶುಂಠಿ ಹೊಲ ನೋಡಲು ಹೋಗಿದ್ದ ರೈತ ಹುಲಿಗೆ ಬಲಿ

    ಮೃತದೇಹದ ಮುಂದೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಮೈಸೂರು: ತಮ್ಮ ಶುಂಠಿ ಹೊಲ ನೋಡಲೆಂದು ಹೋಗಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿ ಸಾಯಿಸಿರುವ ಘಟನೆ ಹೆಚ್.ಡಿ ಕೋಟೆ ತಾಲೂಕಿನ ಕಾಡಬೇಗೂರು ಕಾಲೋನಿಯಲ್ಲಿ ನಡೆದಿದೆ.

ರೈತ ಬಾಲಾಜಿ ನಾಯ್ಕ್​ (45) ಮೃತ ದುರ್ದೈವಿ. ರೈತ ಟೀ ಕುಡಿದು ತಮ್ಮ ಶುಂಠಿ ಹೊಲ ನೋಡಲೆಂದು ಹೋಗಿದ್ದರು. ಈ ವೇಳೆ ಹೊಲ ಎಲ್ಲ ನೋಡಿಕೊಂಡು ವಿಶ್ರಾಂತಿಗೆಂದು ಕುಳಿತುಕೊಂಡಿದ್ದರು. ಈ ವೇಳೆ ರೈತನ ಮೇಲೆ ಹುಲಿ ಏಕಾಏಕಿ ದಾಳಿ ಮಾಡಿ ಸಾಯಿಸಿ, ಎಳೆದುಕೊಂಡು ಹೋಗುತ್ತಿತ್ತು. ಮೃತದೇಹವನ್ನು ಎಳೆದುಕೊಂಡು ಹೋಗುತ್ತಿರುವುದನ್ನು ನೋಡಿದ ಬೈಕ್​ನಲ್ಲಿ ಹೋಗುತ್ತಿದ್ದವರು ನಿಲ್ಲಿಸಿ ಕೂಗಾಡಿ, ಕಿರುಚಿ ಹುಲಿಯನ್ನು ಓಡಿಸಿದ್ದಾರೆ.

ಹುಲಿ ಮೃತ ದೇಹವನ್ನು ಬಿಟ್ಟು ಓಡಿ ಹೋಗಿದ್ದರಿಂದ ಬಳಿಕ ಮಾಹಿತಿ ತಿಳಿದು ಸಂಬಂಧಿಕರು, ಗ್ರಾಮಸ್ಥರು ಬಂದು ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಬಾಲಾಜಿ ನಾಯ್ಕ್​​ ಅವರು ಬಿ.ಮಟಗೆರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಆಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈಸೂರಲ್ಲಿ ಹುಲಿ ದಾಳಿ.. ರೈತನನ್ನು ಕಚ್ಚಿ ಕೊಂಡು ಹೋಗುತ್ತಿದ್ದ ದೃಶ್ಯ ನೋಡಿ ಬೆಚ್ಚಿ ಬಿದ್ದ ಗ್ರಾಮಸ್ಥರು

https://newsfirstlive.com/wp-content/uploads/2023/11/MYS_TIGER_ATTACK.jpg

Load More