newsfirstkannada.com

ಹುಣಸೂರಲ್ಲಿ ದಾರುಣ ಘಟನೆ; ಕಣ್ಣೆದುರಲ್ಲೇ ವಿಷಹಾರ ಸೇವಿಸಿ ಪ್ರಾಣಬಿಟ್ಟ ನಾಲ್ಕು ಹಸುಗಳು..

Share :

31-10-2023

    ಮರಣೋತ್ತರ ಪರೀಕ್ಷೆಯಲ್ಲಿ ಹಸುಗಳು ತಿಂದ ಆಹಾರ ವಿಷ

    ಘಟನಾ ಸ್ಥಳಕ್ಕೆ ಪಶುಸಂಗೋಪನಾ ಇಲಾಖೆ ಅಧಿಕಾರಿ ಭೇಟಿ

    ಮೃತ ಹಸು ತಿಂದಿದ್ದನ್ನೇ ಉಳಿದವುಗಳಿಗೆ ಇಟ್ಟಾಗ ಎಲ್ಲಾ ಸಾವು

ಮೈಸೂರು: ವಿಷ ಆಹಾರ ಸೇವನೆ ಮಾಡಿ 4 ರಾಸುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಣಸೂರು ತಾಲ್ಲೂಕಿನ ಗಾವಡಗೆರೆ ಹೋಬಳಿಯ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಯಕೃಷ್ಣ ಎಂಬುವರಿಗೆ ಸೇರಿದ ಹಸುಗಳು ಸಾವನ್ನಪ್ಪಿವೆ. ಇದರಲ್ಲಿ ಎರಡು ಎತ್ತುಗಳು, ಎರಡು ಹಸುಗಳು ಸೇರಿದ್ದು ಇದ್ದು ಸುಮಾರು 3 ಲಕ್ಷ ರೂಪಾಯಿಗೂ ಅಧಿಕ ಬೆಲೆಬಾಳುವ ರಾಸುಗಳು ಆಗಿದ್ದವು. ಇದರಲ್ಲಿ ಒಂದು ಹಸು ಗಬ್ಬಾಗಿದ್ದು ಇನ್ನೇನು ಕೆಲವು ದಿನಗಳಲ್ಲಿ ಕರುವಿಗೆ ಜನ್ಮ ನೀಡುತ್ತಿತ್ತು. ವಿಷಯ ತಿಳಿಯುತ್ತಿದ್ದಂತೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳಾದ ಡಾ. ರಾಜಶೇಖರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆ ವೇಳೆ ಹಸುಗಳು ತಿಂದಿರುವ ಫೀಡ್ಸ್ ವಿಷವಾಗಿದ್ದರಿಂದ ಮೃತಪಟ್ಟಿವೆ ಎಂದು ಹೇಳಿದ್ದಾರೆ.

ಯಾಚೇಗೌಡನಹಳ್ಳಿ ಗ್ರಾಮದ ಶ್ರೀಗಣೇಶ ಫೀಡ್ಸ್‌ನಿಂದ ಖರೀದಿಸಿದ್ದ ಫೀಡ್ಸ್‌ ಅನ್ನು ಹಸುಗಳ ಮಾಲೀಕ ನಿನ್ನೆ ಬೆಳಗ್ಗೆ 6 ಗಂಟೆ ಸುಮಾರಿಗೆ ಹಾಲು ಕರೆಯುವ ಹಸುವಿಗೆ ಫೀಡ್ಸ್ ಇಟ್ಟಿದ್ದಾರೆ. ಇದನ್ನು ತಿಂದ ಕೆಲವೇ ಕ್ಷಣಗಳಲ್ಲಿ ಹಸು ನೆಲಕ್ಕೆ ಬಿದ್ದು ಒದ್ದಾಡಿ ಸಾವನ್ನಪ್ಪಿದೆ. ಬಳಿಕ ಮನೆಯವರು ಅಲ್ಲೇ ಸಮೀಪದಲ್ಲಿ ಗುಂಡಿ ತೆಗೆದು ಹಸುವನ್ನು ಮಣ್ಣಲ್ಲಿ ಮುಚ್ಚಿದ್ದಾರೆ. ಬಳಿಕ ಮೃತ ಹಸು ತಿಂದಿದ್ದ ಫಿಡ್ಸ್ ಇರುವ ಬಕೆಟ್​ ಅನ್ನು ಉಳಿದ ಹಸುಗಳಿಗೆ ಇಟ್ಟಿದ್ದಾರೆ. ಅದನ್ನು ತಿಂದ ಅವುಗಳು ಸಾವನ್ನಪ್ಪಿವೆ. ಈ 4 ಹಸುಗಳ ಮೌಲ್ಯ ಸುಮಾರು 3 ಲಕ್ಷ ರೂ.ಗೂ ಅಧಿಕ ಎಂದು ಮಾಲೀಕ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಣಸೂರಲ್ಲಿ ದಾರುಣ ಘಟನೆ; ಕಣ್ಣೆದುರಲ್ಲೇ ವಿಷಹಾರ ಸೇವಿಸಿ ಪ್ರಾಣಬಿಟ್ಟ ನಾಲ್ಕು ಹಸುಗಳು..

https://newsfirstlive.com/wp-content/uploads/2023/10/MYS_COWS_DEAD.jpg

Load More