ನಾನು ಅವತ್ತು ಮಾತನಾಡಿದ್ದು CSR ಫಂಡ್ ವಿಚಾರದ ಬಗ್ಗೆ
ಲಿಸ್ಟ್ ಎಂದ ಕೂಡಲೇ ಎಲ್ಲವೂ ವರ್ಗಾವಣೆ ದಂಧೆ ಆಗುತ್ತಾ?
ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿಸಿದ್ರೆ ತಪ್ಪೇನಿದೆ- ಯತೀಂದ್ರ
ಮೈಸೂರು: ವಿವೇಕಾನಂದ ಯಾರು? ಅವಱರೆಂದು ನನಗೆ ಈಗಲೂ ಗೊತ್ತಿಲ್ಲ. ವಿವೇಕಾನಂದ ಟ್ರಾನ್ಸ್‌ಫರ್ ಎಲ್ಲಿಗೆ ಆಗಿದೆ. ಆ ಕ್ಷೇತ್ರದ ವ್ಯಾಪ್ತಿ ಯಾವುದು? ಅದರ ಬಗ್ಗೆ ಕ್ಷೇತ್ರದ ಶಾಸಕರನ್ನ ಕೇಳಿ. ಅದಕ್ಕೂ ನನಗೂ ಏನು ಸಂಬಂಧ ಇಲ್ಲ. ನಮ್ಮ ಕ್ಷೇತ್ರದಲ್ಲಿ ಒಬ್ಬರು ಬಿಇಒ ಅಧಿಕಾರಿ ವಿವೇಕಾನಂದ ಎಂದು ಇದ್ದಾರೆ. ಆ ವರ್ಗಾವಣೆ ಹೆಸರು ನನಗೆ ಗೊತ್ತಿಲ್ಲ ಎಂದು ವಿವೇಕಾನಂದ ಹೆಸರಿನ ವಿಚಾರದಲ್ಲಿ ಸಿಎಂ ಪುತ್ರ ಸ್ಪಷ್ಟನೆ ನೀಡಿದ್ದಾರೆ.
ವರ್ಗಾವಣೆ ದಂಧೆ ಬಗ್ಗೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ನಾನು ಆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವಿಲ್ಲ. ನಾನು ಸಿಎಂ ಜೊತೆ ಹತ್ತಾರು ವಿಚಾರಗಳ ಬಗ್ಗೆ ಮಾತನಾಡುತ್ತೇನೆ. ದುಡ್ಡಿನ ಬಗ್ಗೆ ಮಾತಾಡಿದ್ದರೇ ಸ್ಪಷ್ಟನೆ ಕೊಡಬಹುದಿತ್ತು. ಆದರೆ ಮಾತನಾಡಿಲ್ಲದಿದ್ದರೂ ಅದರ ಬಗ್ಗೆ ಸ್ಪಷ್ಟೀಕರಣ ಕೊಡುತ್ತಿದ್ದೇನೆ ಎಂದಿದ್ದಾರೆ.
ನಾನು ಅವತ್ತು ಮಾತನಾಡಿದ್ದು CSR ಫಂಡ್ ವಿಚಾರದ ಲಿಸ್ಟ್ ಬಗ್ಗೆ. ಆದರೆ ಅದನ್ನು ವರ್ಗಾವಣೆ ಎಂದು ಹೇಳುತ್ತಿದ್ದಾರೆ. ಇವರ ಅವಧಿಯಲ್ಲಿ ಲಿಸ್ಟ್ ಎಂದರೇ ವರ್ಗಾವಣೆ ದಂಧೆಯಾಗುತ್ತಾ? ಪತ್ನಿ, ಮಗ ಸೇರಿ ಇಡೀ ಕುಟುಂಬವೇ ರಾಜಕಾರಣದಲ್ಲಿದೆ. ಅವರ ಮೇಲೂ ಅದೇ ರೀತಿ ಮಾತನಾಡಲು ಆಗುತ್ತಾ? ಹಾಗಾದ್ರೆ ಅವರ ಅವಧಿಯಲ್ಲಿ ಮಾಡಿದಂತ ವರ್ಗಾವಣೆ ಎಲ್ಲ ದಂಧೆನಾ. ಹಣ ಪಡೆಯದೆ ವರ್ಗಾವಣೆ ಮಾಡಿದ್ದಾರಾ ಎಂದು ಯತೀಂದ್ರ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಹೆಸರನ್ನು ಹೇಳದೇ ಪರೋಕ್ಷವಾಗಿ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ.
ವರುಣಾ ಕ್ಷೇತ್ರದ ಜವಾಬ್ದಾರಿ ನನ್ನ ಮೇಲಿದೆ. ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿಸಿದರೆ ತಪ್ಪೇನಿದೆ. ಎಲ್ಲ ವರ್ಗಾವಣೆಯನ್ನು ಹಣದಿಂದ ನೋಡಿದರೆ, ಅವರ ಅಧಿಕಾರವಧಿಯಲ್ಲಿ ಅದೇ ಕೆಲಸ ಮಾಡುತ್ತಿದ್ದರು ಎಂದು ಅರ್ಥ ಅಲ್ವಾ. ದಾಖಲೆಯಿಟ್ಟು ಆರೋಪಿಸಬೇಕು. ದಾಖಲೆ ಇಲ್ಲದೆ ಸುಖಾಸುಮ್ಮನೆ ಆರೋಪಿಸಬಾರದು. ನನ್ನ ಪಾಡಿಗೆ ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ. ಅನಗತ್ಯವಾಗಿ ಎಲ್ಲದಕ್ಕೂ ನನ್ನ ಹೆಸರು ತಳುಕು ಹಾಕಲಾಗುತ್ತಿದೆ ಎಂದು ಮೈಸೂರಿನಲ್ಲಿ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ