newsfirstkannada.com

VIDEO: ಅಬ್ಬಾ.. ಒಂದು ತಿಂಗಳಲ್ಲೇ ಕಬಿನಿ‌ ಡ್ಯಾಂ ಭರ್ತಿ; ಕಪಿಲಾ ನದಿ‌ ತೀರದ ಜನರಿಗೆ ಈಗ ಮುಳುಗಡೆ ಭೀತಿ

Share :

27-07-2023

    ಕಳೆದ ಜೂನ್ 27ರಂದು ಕಬಿನಿ ಡ್ಯಾಂ ನೀರು 50 ಅಡಿಗೆ ಕುಸಿದಿತ್ತು

    ಡ್ಯಾಂ ಇತಿಹಾಸದಲ್ಲೇ ಎರಡನೇ ಬಾರಿಗೆ ಅತಿ ಕಡಿಮೆ ನೀರು ಸಂಗ್ರಹ

    HD ಕೋಟೆ, T. ನರಸೀಪುರದ ಹಲವು ಹಳ್ಳಿಗಳಿಗೆ ಮುಳುಗಡೆ ಭೀತಿ

ಮೈಸೂರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಕಬಿನಿ ಡ್ಯಾಂ ಸಂಪೂರ್ಣ‌ ಭರ್ತಿಯಾಗಿದೆ. ಜಲಾಶಯದ ಹಿತದೃಷ್ಟಿಯಿಂದ ಅಪಾರ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗಿದೆ. ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್ಸ್ ಒಳಹರಿವು ಇದ್ರೆ 21 ಸಾವಿರ ಕ್ಯೂಸೆಕ್ಸ್ ನೀರು ಹೊರ ಹರಿವು ಇದೆ. ಒಂದು ತಿಂಗಳ ಹಿಂದಷ್ಟೇ ಖಾಲಿ ಖಾಲಿಯಾಗಿದ್ದ ಡ್ಯಾಂ ಇದೀಗ ತುಂಬಿ ಹರಿಯುತ್ತಿದೆ. ಕಳೆದ ಜೂನ್ 27ರಂದು ಡ್ಯಾಂ ನೀರು 50 ಅಡಿಗೆ ಕುಸಿದಿತ್ತು. ಡ್ಯಾಂ ಇತಿಹಾಸದಲ್ಲೇ ಎರಡನೇ ಬಾರಿಗೆ ಅತಿ ಕಡಿಮೆ ನೀರು ಸಂಗ್ರಹವಾಗಿತ್ತು. ಇದೀಗ ಸರಿಯಾಗಿ ಜುಲೈ 27ಕ್ಕೆ ಕಬಿನಿ ಡ್ಯಾಂ ಸಂಪೂರ್ಣ ಭರ್ತಿಯಾಗಿ ನಳನಳಿಸುತ್ತಿದೆ.

ಕಬಿನಿ ಡ್ಯಾಂ ತುಂಬಿರುವುದರಿಂದ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ಹಾಲ್ನೊರೆಯಂತೆ ಧುಮ್ಮುಕ್ಕುತ್ತಿರುವ ಕಪಿಲೆಯ ದೃಶ್ಯ ಮನಮೋಹಕವಾಗಿದೆ. ಈ ಪ್ರಕೃತಿ ಸೌಂದರ್ಯದ ಜೊತೆಗೆ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಲಾಗಿದೆ. ಯಾಕಂದ್ರೆ, ಎಚ್.ಡಿ.ಕೋಟೆ, ತಿ.ನರಸೀಪುರ, ನಂಜನಗೂಡು ತಾಲೂಕಿನ ಹಲವು ಹಳ್ಳಿಗಳಿಗೆ ಮುಳುಗಡೆ ಭೀತಿ ಎದುರಾಗಿದೆ.

ಕಬಿನಿ ಡ್ಯಾಂ ಹೊರಹರಿವು ಹೆಚ್ಚಾದಂತೆ ಬಿದರಹಳ್ಳಿ ಸೇತುವೆ ಸಂಪೂರ್ಣ‌ ಮುಳುಗಡೆಯಾಗಿದೆ. ಸೇತುವೆ ಮೇಲೆ ಕಪಿಲಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಸಾರ್ವಜನಿಕರು, ವಾಹನಗಳಿಗೆ ಸಂಪೂರ್ಣ ನಿರ್ಬಂಧ ಏರಲಾಗಿದೆ. ಸೇತುವೆ ಮುಳುಗಡೆ ಹಿನ್ನೆಲೆ ತೆರಣಿಮುಂಟಿ, ನಂಜನಾಥಪುರ, ಕಂದೇಗಾಲ, ಮೊಸರಹಳ್ಳಿ, ಬಸಾಪುರ, ಭೀಮನಕೊಲ್ಲಿ, ಎನ್. ಬೇಗೂರು, ಜಕ್ಕಳ್ಳಿ, ಬೀರಂಬಳ್ಳಿ, ಗೆಂಡತ್ತೂರು ಸೇರಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ನದಿ‌ಪಾತ್ರದ ಜನತೆ ಎಚ್ಚರಿಕೆಯಿಂದ‌ ಇರಲು ಸೂಚಿಸಲಾಗಿದ್ದು, ಸೇತುವೆ ಎರಡೂ ಬದಿಗಳಲ್ಲಿ‌ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಅಬ್ಬಾ.. ಒಂದು ತಿಂಗಳಲ್ಲೇ ಕಬಿನಿ‌ ಡ್ಯಾಂ ಭರ್ತಿ; ಕಪಿಲಾ ನದಿ‌ ತೀರದ ಜನರಿಗೆ ಈಗ ಮುಳುಗಡೆ ಭೀತಿ

https://newsfirstlive.com/wp-content/uploads/2023/07/Kabini-Dam-2.jpg

Load More