newsfirstkannada.com

ಗಂಡ-ಹೆಂಡತಿ ಮಧ್ಯೆ ನಿತ್ಯ ಜಗಳ; ಬೇಸತ್ತು ಜೀವ ತೆಗೆದುಕೊಂಡ ಪತಿರಾಯ

Share :

17-11-2023

  ನಿತ್ಯ ಜಗಳ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರಿಂದ ನ್ಯಾಯ ಪಂಚಾಯತಿ

  ಪತ್ನಿಯ ಕಾಟ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ್ರಾ ಪತಿ ಮಾದೇಶ್?

  ಮನನೊಂದ ಪತಿ, ಯಾರೂ ಇಲ್ಲದ ವೇಳೆ ನೇಣಿಗೆ ಶರಣು

ಮೈಸೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಗಂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ‌ ಹದಿನಾರು ಮೋಳೆ ಗ್ರಾಮದಲ್ಲಿ ನಡೆದಿದೆ.

ಮಾದೇಶ್ (34) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮಾದೇಶ್ ಮತ್ತು ಪತ್ನಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತು ಹೋಗಿದ್ದ ಎನ್ನಲಾಗಿದೆ. ಜಗಳ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯತಿ ಮಾಡಲಾಗಿತ್ತು. ಆದರೂ ಗಂಡ-ಹೆಂಡತಿ ಜಗಳ ಮಾತ್ರ ಹಾಗೇ ನಡೆಯುತ್ತಲೇ ಇತ್ತು. ಹೀಗಾಗಿ ಮನನೊಂದಿದ್ದ ಪತಿ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ನೇಣಿಗೆ ಕೊರೊಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎಲ್ಲ ಸೇರಿಕೊಂಡು ಪೊಲೀಸರಿಗೆ​ ಮಾಹಿತಿ ನೀಡಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡ-ಹೆಂಡತಿ ಮಧ್ಯೆ ನಿತ್ಯ ಜಗಳ; ಬೇಸತ್ತು ಜೀವ ತೆಗೆದುಕೊಂಡ ಪತಿರಾಯ

https://newsfirstlive.com/wp-content/uploads/2023/11/MYS_HUSBAND_DEATH.jpg

Load More