ತಡರಾತ್ರಿ ಪಾರ್ಟಿ ಮಾಡುತಿದ್ದ ವೇಳೆ ಪೋಲೀಸರ ಸಡನ್ ಎಂಟ್ರಿ
ಮೈಸೂರಿನ ಹೊರವಲಯದಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ದಾಳಿ
ನಾಡಹಬ್ಬ ದಸರಾ ಸಂದರ್ಭದಲ್ಲೇ ನಡೆಯುತ್ತಿದ್ದ ರೇವ್ ಪಾರ್ಟಿ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಸಂಸ್ಕೃತಿ ಚಟುವಟಿಕೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ನಾಡಹಬ್ಬ ದಸರಾ ಸಂದರ್ಭದಲ್ಲಿ ರೇವ್ ಪಾರ್ಟಿ ನಡೆಸಲಾಗಿದ್ದು 50ಕ್ಕೂ ಹೆಚ್ಚು ಯುವಕ- ಯುವತಿಯರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅರಮನೆ ನಗರಿ ಮೈಸೂರಿಗೂ ರೇವ್ ಪಾರ್ಟಿ ಕಾಲಿಟ್ಟಿದ್ದು ಪ್ರಖ್ಯಾತ ನಾಡಹಬ್ಬ ದಸರಾ ವೇಳೆಯೇ ಪಾರ್ಟಿ ನಡೆಸಲಾಗುತ್ತಿತ್ತು. ನಗರದ ಹೊರವಲಯದಲ್ಲಿ ರೇವ್ ಪಾರ್ಟಿಯನ್ನು ಆಯೋಜನೆ ಮಾಡಲಾಗಿದೆ. ಈ ಬಗ್ಗೆ ನ್ಯೂಸ್ಫಸ್ಟ್ ಖಚಿತ ಮಾಹಿತಿ ಕಲೆ ಹಾಕಿ ಪೊಲೀಸರಿಗೆ ತಿಳಿಸಿತ್ತು. ಕೂಡಲೇ ಪೊಲೀಸರು ತಡರಾತ್ರಿ ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಸುಮಾರು 50ಕ್ಕೂ ಹೆಚ್ಚು ಯುವಕ-ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು.. ಈ ಬಾರಿ ಶೋಗೂ ಮೊದಲೇ 5 ಸ್ಪರ್ಧಿಗಳ ಹೆಸರು ರಿವೀಲ್!
ಬಂಧಿಸುವ ವೇಳೆ ತಪ್ಪಿಸಿಕೊಳ್ಳಲು ಕೆಲವು ಯುವಕರು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಓಡಿ ಹೋಗಲು ಯತ್ನಿಸಿದ್ದರು. ಆದರೂ ಪೊಲೀಸರು ತಮ್ಮ ಪಟ್ಟು ಸಡಿಲಿಸದೇ ಅರೆಸ್ಟ್ ಮಾಡಿದ್ದಾರೆ. ಈ ದಾಳಿಯನ್ನು ಅಡಿಷನಲ್ ಎಸ್.ಪಿ ನಾಗೇಂದ್ರ ಹಾಗೂ ಡಿವೈಎಸ್ಪಿ ಕರೀಂ ಅವರ ಟೀಮ್ನಿಂದ ನಡೆಸಲಾಗಿತ್ತು. ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಎಸ್ಪಿ ವಿಷ್ಣುವರ್ಧನ್ ಅವರು.. ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ. ಮದ್ಯ, ಸಿಗರೇಟ್ ಸ್ಥಳದಲ್ಲಿ ಇತ್ತು. ಅಲ್ಲಿದ್ದ ಎಲ್ಲರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು. ಎಫ್ಎಸ್ಎಲ್ ತಂಡ ಸಹಾ ಭೇಟಿ ನೀಡಿ ಪರಿಶೀಲನೆ ಮಾಡಿದೆ. ವರದಿ ಬಂದ ನಂತರ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ