newsfirstkannada.com

ವಾರೆ ವ್ಹಾ.. ಮೈಸೂರು ಪಾಕ್‌ಗೆ 4.4 ರೇಟಿಂಗ್! ವಿಶ್ವದ ಸ್ಟ್ರೀಟ್ ಪುಡ್ ಪೈಕಿ 14ನೇ ಸ್ಥಾನ

Share :

21-07-2023

  ಜಾಗತಿಕ‌ ಮನ್ನಣೆ ಪಡೆದ ಮೈಸೂರಿನ ಮೈಸೂರ್​ ಪಾಕ್​

  ಮೈಸೂರ್​ ಪಾಕ್​ ಇತಿಹಾಸ ಕೇಳಿದ್ರೆ ಅಚ್ಚರಿಯಾಗುತ್ತೆ

  ಪಾಕ ಪ್ರವೀಣ ಕಾಕಾಸುರ ಮಾದಪ್ಪ ಗೊತ್ತಾ?

ಬಹುಜನರ ನೆಚ್ಚಿನ ತಿಂಡಿ ಮತ್ತು ಮೈಸೂರು ಅರಸರ ಕಾಲದಲ್ಲಿ ತಯಾರಾಗಿದ್ದ ಮೈಸೂರು ಪಾಕ್‌ಗೆ ಜಾಗತಿಕ‌ ಮನ್ನಣೆ ಸಿಕ್ಕಿದೆ. ವಿಶ್ವದ ಸ್ಟ್ರೀಟ್ ಪುಡ್ ಪೈಕಿ 14ನೇ ಸ್ಥಾನ ದೊರೆತಿದೆ.

ಆನ್‌ಲೈನ್‌ನಲ್ಲಿ ವಿಶ್ವದ 50 ತಿಂಡಿ ತಿನಿಸುಗಳಿಗೆ ಸ್ಥಾನ ನೀಡಲಾಗಿದೆ. ಸಿಹಿ ತಿಂಡಿಗಳ ಪೈಕಿ ಮೈಸೂರು ಪಾಕ್‌ಗೆ 4.4 ರೇಟಿಂಗ್ ಪಡೆದಿದೆ. ಅದಲ್ಲದೆ ಕುಲ್ಫಿಗೆ 18ನೇ ಸ್ಥಾನ ಫಲೂಡಾಗೆ 32ನೇ ಸ್ಥಾನ ದೊರೆತಿದೆ.

ಮೈಸೂರ್​ ಪಾಕ್​ ಇತಿಹಾಸ

ಮೈಸೂರು ಅಂದ್ರೆ ಮೊದಲಿಗೆ ನೆನಪಿಗೆ ಬರೋದು ವಿಶ್ವ ವಿಖ್ಯಾತ ದಸರಾ ಮತ್ತು ಅರಮನೆ. ಅಂದಹಾಗೆಯೇ ಮೈಸೂರು ರಾಜವಂಶಸ್ಥರ ಕಾಲದಲ್ಲಿ ಹುಟ್ಟಿಕೊಂಡ ಪಾಕವೇ ಈ ಮೈಸೂರು ಪಾಕ. ಅರಮನೆಯ ಬಾಣಸಿಗ ಕಾಕಾಸುರ ಮಾದಪ್ಪ ಈ ಪಾಕವನ್ನು ಸಿದ್ಧಪಡಿಸಿದರು.

ಇನ್ನು ಮೈಸೂರು ಪಾಕವನ್ನು ಕಡ್ಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆ ಮಿಶ್ರಣದೊಂದಿದೆ ತಯಾರಿಸಲಾಗುತ್ತದೆ. ಸದ್ಯ ಈ ತಿಂಡಿ ಮೈಸೂರು ಮಾತ್ರವಲ್ಲ, ವಿಶ್ವದ ಬಹುಪಾಲು ಜನರ ಮನಗೆದ್ದಿದೆ. ಅದೇ ಕಾರಣಕ್ಕೆ 4.4 ರೇಟಿಂಗ್ ಪಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾರೆ ವ್ಹಾ.. ಮೈಸೂರು ಪಾಕ್‌ಗೆ 4.4 ರೇಟಿಂಗ್! ವಿಶ್ವದ ಸ್ಟ್ರೀಟ್ ಪುಡ್ ಪೈಕಿ 14ನೇ ಸ್ಥಾನ

https://newsfirstlive.com/wp-content/uploads/2023/07/Mysore-Pak.jpg

Load More