newsfirstkannada.com

ತ್ರಿಬಲ್​ ರೈಡಿಂಗ್​ನಲ್ಲಿ ಪುಂಡರ ವೀಲಿಂಗ್​;  ಶಿಕ್ಷಕಿಗೆ ಗುದ್ದಿ ಪರಾರಿ, ಸಾವು ಬದುಕಿನ ಮಧ್ಯೆ ಟೀಚರ್

Share :

21-07-2023

    ರಾಜ್ಯದಲ್ಲಿ ವೀಲಿಂಗ್​ ಹಾವಳಿಗೆ ಬ್ರೇಕ್​ ಯಾವಾಗ?

    ಪೊಲೀಸರ ಭಯವಿಲ್ಲದೆ ವೀಲಿಂಗ್​ ಮಾಡುವ ಪುಂಡರು

    ಹೆಚ್ಚುತ್ತಿದೆ ಪುಂಡರ ವೀಲಿಂಗ್​ ಅಟ್ಟಹಾಸ, ಸಾರ್ವಜನಿಕರಿಗೆ ಪ್ರಾಣ ಸಂಕಟ

ಮೈಸೂರು: ಯುವಕರು ತ್ರಿಬಲ್ ರೈಡಿಂಗ್ ಮೂಲಕ ವೀಲಿಂಗ್ ಮಾಡುತ್ತಾ ಬಂದು ಶಾಲಾ ಶಿಕ್ಷಕಿಗೆ ಡಿಕ್ಕಿ ಹೊಡೆದ ಘಟನೆ ಗಾಯತ್ರಿ ಪುರಂ ಚರ್ಚ್ ಬಳಿ ನಡೆದಿದೆ. ಮಂಗಳವಾರದಂದು ನಡೆದ ಈ ಘಟನೆಯಲ್ಲಿ ಶಿಕ್ಷಕಿ ತಲೆಗೆ ಬಲವಾಗಿ ಗಾಯವಾಗಿದೆ. ಪರಿಣಾಮ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿದ್ದಾರೆ.

ಯುವಕರು ಕೆಟಿಎಂ ಬೈಕ್ ನಲ್ಲಿ ಬಂದು ಡಿಕ್ಕಿ ಹೊಡೆದಿದ್ದಾರೆ. ಶಿಕ್ಷಕಿ ಪ್ರಜ್ಞೆ ತಪ್ಪಿದಂತೆಯೇ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನು ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಾಯವಾಗಿ ರಕ್ತದ ಮಡುವಿನಲ್ಲಿದ್ದ ಶಿಕ್ಷಕಿಯನ್ನು ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದ್ದಾರೆ.

ಸದ್ಯ ಶಿಕ್ಷಕಿ ತೀವ್ರನಿಗಾ ಘಟಕದಲ್ಲಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸಿದ್ದಾರ್ಥ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತ್ರಿಬಲ್​ ರೈಡಿಂಗ್​ನಲ್ಲಿ ಪುಂಡರ ವೀಲಿಂಗ್​;  ಶಿಕ್ಷಕಿಗೆ ಗುದ್ದಿ ಪರಾರಿ, ಸಾವು ಬದುಕಿನ ಮಧ್ಯೆ ಟೀಚರ್

https://newsfirstlive.com/wp-content/uploads/2023/07/Weeling.jpg

Load More