/newsfirstlive-kannada/media/post_attachments/wp-content/uploads/2024/10/Sobhita.jpg)
ಟಾಲಿವುಡ್ ಸ್ಟಾರ್​ ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಳ್ಳ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ದಿಲ್ಲದೇ ಗುರು ಹಿರಿಯರ ಸಮ್ಮುಖದಲ್ಲಿ ಕಳೆದ ಆಗಸ್ಟ್​ 8ರಂದು ನಟಿ ಶೋಭಿತಾ ಧೂಳಿಪಳ್ಳ ಜೊತೆಗೆ ನಟ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
/newsfirstlive-kannada/media/post_attachments/wp-content/uploads/2024/10/Sobhita5.jpg)
ಇದೀಗ ನಾಗ ಚೈತನ್ಯ ಭಾವಿ ಪತ್ನಿ ಶೋಭಿತಾ ಧೂಳಿಪಳ್ಳ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ನಟಿ ಶೋಭಿತಾ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/10/Sobhita8.jpg)
ಇನ್ನು, ಈ ಸ್ಟಾರ್​ ಜೋಡಿ ಮದುವೆ ಯಾವಾಗ ಅಂತ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಆದ್ರೆ ಅಕ್ಕಿನೇನಿ ಭಾವಿ ಸೊಸೆ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ.
/newsfirstlive-kannada/media/post_attachments/wp-content/uploads/2024/10/Sobhita4.jpg)
ವೈಜಾಗ್‌ನಲ್ಲಿರುವ ನಡೆಯುತ್ತಿರೋ ಶಾಸ್ತ್ರದಲ್ಲಿ ನಟಿ ಶೋಭಿತಾ ಕೇಸರಿ ಹಾಗೂ ಹಸಿರು ಕಾಂಬಿನೇಷನ್​ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಅರಿಶಿನವನ್ನು ಕುಟ್ಟುವ ಶಾಸ್ತ್ರದಲ್ಲಿ ಶೋಭಿತಾ ಭಾಗಿಯಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/10/Sobhita9.jpg)
ನಟಿ ಮನೆಯಲ್ಲಿ ನಡೆದ ಶಾಸ್ತ್ರವನ್ನು ಪಸುಪು ದಂಚಾಟಂ ಎಂದು ಕರೆಯುತ್ತಾರೆ. ಗೋಧೂಮ ಎಂದರೆ ಗೋಧಿ. ರಾಯ ಎಂದರೆ ಕಲ್ಲು. ಪಸುಪು ಎಂದರೆ ಅರಿಶಿನ. ದಂಚತಂ ಎಂದರೆ ಪುಡಿ ಮಾಡುವುದು ಅಥವಾ ರುಬ್ಬುವುದು ಎಂದರ್ಥ. ಆದ್ದರಿಂದ, ಗೋಧಿ, ಕಲ್ಲು ಮತ್ತು ಅರಿಶಿನವನ್ನು ಒಟ್ಟಿಗೆ ಪುಡಿಮಾಡುವುದು ಎಂದು ಅನುವಾದಿಸುತ್ತದೆ.
/newsfirstlive-kannada/media/post_attachments/wp-content/uploads/2024/10/Sobhita6.jpg)
ತೆಲುಗು ಮದುವೆಯ ಸಂದರ್ಭದಲ್ಲಿ ಇದು ಮಹತ್ವವನ್ನು ಹೊಂದಿದೆ. ಇದು ಸಾಂಪ್ರದಾಯಿಕ ಆಚರಣೆಯನ್ನು ಸೂಚಿಸುತ್ತದೆ. ಅಲ್ಲಿ ವಧು ಮತ್ತು ವರರು ಜಂಟಿಯಾಗಿ ಗೋಧಿ, ಅರಿಶಿನ ಮತ್ತು ಕೆಲವೊಮ್ಮೆ ಇತರ ಪದಾರ್ಥಗಳನ್ನು ರುಬ್ಬುವ ಕಲ್ಲಿನ ಮೇಲೆ (ರಾಯೀ) ಪುಡಿಮಾಡುತ್ತಾರೆ.
/newsfirstlive-kannada/media/post_attachments/wp-content/uploads/2024/10/Sobhita3.jpg)
ಈ ಕಾರ್ಯವು ಒಟ್ಟಿಗೆ ಅವರ ಜೀವನದ ಆರಂಭವನ್ನು ಸಂಕೇತಿಸುತ್ತದೆ, ಅಲ್ಲಿ ಅವರು ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಾರೆ. ಒಟ್ಟಿಗೆ ಕೆಲಸ ಮಾಡುತ್ತಾರೆ ಮತ್ತು ಜೀವನದಲ್ಲಿ ಹೊಸ ಹಂತಕ್ಕೆ ಸಿದ್ಧರಾಗುತ್ತಾರೆ ಎಂದು ಅರ್ಥ.
/newsfirstlive-kannada/media/post_attachments/wp-content/uploads/2024/10/Sobhita2.jpg)
ಇನ್ನೂ, ಈ ಹಿಂದೆ ನಾಗಚೈತನ್ಯ ನಿಶ್ಚಿತಾರ್ಥ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದೇ ಫೋಟೋಸ್​ ನೋಡಿದ ಅಭಿಮಾನಿಗಳು ಅಕ್ಷರಶಃ ಶಾಕ್ ಆಗಿದ್ದರು. ಖುದ್ದು ಟ್ವೀಟ್ ಮೂಲಕ ಮಗನ ಎಂಗೇಜ್​ಮೆಂಟ್ ಬಗ್ಗೆ ಮಾಹಿತಿ ನೀಡಿರುವ ಅಕ್ಕಿನೇನಿ ನಾಗಾರ್ಜುನ್ ಅವರು, ಇಬ್ಬರಿಗೂ ಲೈಫ್ ಟೈಮ್ ಲವ್ ಹಾಗೂ ಸಂತೋಷವನ್ನು ಬಯಸುತ್ತೇನೆ ಅಂತ ಪೋಸ್ಟ್ ಮಾಡಿದ್ದರು.
/newsfirstlive-kannada/media/post_attachments/wp-content/uploads/2024/10/Sobhita7.jpg)
2017ರಲ್ಲಿ ನಟಿ ಸಮಂತಾ ಜೊತೆ ನಾಗಚೈತನ್ಯ ಅವರ ಮದುವೆ ಆಗಿತ್ತು. 2021ರಲ್ಲಿ ಸಮಂತಾ ಮತ್ತು ನಾಗಚೈತನ್ಯ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ವೈವಾಹಿಕ ಬದುಕು ಮುರಿದು ಬಿದ್ದಿತ್ತು. ಇದಾದ ಬಳಿಕ ಶೋಭಿತಾ ಜೊತೆ ನಾಗಚೈತನ್ಯ ಡೇಟಿಂಗ್ ಮಾಡುತ್ತಿದ್ದ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಬಹಳ ಹಿಂದೆಯೇ ಕೇಳಿ ಬಂದಿತ್ತು.
/newsfirstlive-kannada/media/post_attachments/wp-content/uploads/2024/10/Sobhita1.jpg)
ಆದರೆ ಈ ಬಗ್ಗೆ ನಾಗಚೈತನ್ಯ ಹಾಗೂ ಶೋಭಿತಾ ಅವರು ಹೇಳಿಕೊಂಡಿರಲಿಲ್ಲ. ಸಮಂತಾ ಜೊತೆಗಿನ ಡಿವೋರ್ಸ್ ನಂತರ ನಾಗಚೈತನ್ಯ ಅವರು ಎರಡನೇ ಮದುವೆಗೆ ಮುಂದಾಗಿದ್ದಾರೆ. ಅಧಿಕೃತವಾಗಿ ಎಂಗೇಜ್ ಆಗಿರುವ ಈ ಜೋಡಿ ಮದುವೆ ದಿನಾಂಕದ ಬಗ್ಗೆ ಮಾಹಿತಿ ಬಿಟ್ಟು ಕೊಟ್ಟಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us