Advertisment

ನಾಗ ಚೈತನ್ಯ ಭಾವಿ ಪತ್ನಿ ಮನೆಯಲ್ಲಿ ಭಾರೀ ಸಂಭ್ರಮ; ಬ್ಯೂಟಿಫುಲ್​ ಫೋಟೋಸ್ ಇಲ್ಲಿವೆ

author-image
Veena Gangani
Updated On
ನಾಗಚೈತನ್ಯ ಮದುವೆ ಸಂಭ್ರಮ.. ಕೆಂಪು ಸೀರೆಯಲ್ಲಿ ಮಿಂಚಿದ ನಟಿ ಶೋಭಿತಾ; ಬ್ಯೂಟಿಫುಲ್ ಫೋಟೋ ಇಲ್ಲಿದೆ
Advertisment
  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಾಗ ಚೈತನ್ಯ ಮತ್ತು ನಟಿ ಶೋಭಿತಾ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ನಟಿ ಶೋಭಿತಾ ಫೋಟೋಸ್
  • ಸದ್ದಿಲ್ಲದೇ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಟಾರ್ ಜೋಡಿ

ಸೌತ್‌ ಬ್ಯೂಟಿ ಸಮಂತಾರ ಮಾಜಿ ಪತಿ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಮದುವೆಗೆ ದಿನಾಂಕ ನಿಗದಿಯಾಗಿದೆ. ಇದಷ್ಟೇ ಅಲ್ಲ, ಡೆಸ್ಟಿನೇಶನ್ ವೆಡ್ಡಿಂಗ್ ಮಾಡಲು ತೆರೆಮರೆಯಲ್ಲಿ ತಯಾರಿ ಕೂಡ ಜೋರಾಗಿ ನಡೆಯುತ್ತಿದೆ. ಇದರ ಮಧ್ಯೆ ನಾಗಚೈತನ್ಯ ಭಾವಿ ಪತ್ನಿ ಶೋಭಿತಾ ಧೂಳಿಪಾಲ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

Advertisment

ಇದನ್ನೂ ಓದಿ: ನಟಿ ಚಂದನಾ ಅನಂತಕೃಷ್ಣ ಮದುವೆಗೆ ಯಾರ್ ಯಾರು ಬಂದಿದ್ರು? ಟಾಪ್ 10 ಫೋಟೋ ಇಲ್ಲಿವೆ!

publive-image

ಟಾಲಿವುಡ್ ಸ್ಟಾರ್​ ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಳ್ಳ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ದಿಲ್ಲದೇ ಗುರು ಹಿರಿಯರ ಸಮ್ಮುಖದಲ್ಲಿ ಕಳೆದ ಆಗಸ್ಟ್​ 8ರಂದು ನಟಿ ಶೋಭಿತಾ ಧೂಳಿಪಳ್ಳ ಜೊತೆಗೆ ನಟ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

publive-image

ಇದೀಗ ಶೋಭಿತಾ ಧೂಳಿಪಳ್ಳ ಮನೆಯಲ್ಲಿ ಮದುವೆ ಶಾಸ್ತ್ರ ಇಂದು ಪ್ರಾರಂಭ ಆಗಿದೆ. ಈಗ ಹಳದಿ ಶಾಸ್ತ್ರ ನೆರವೇರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮಾತ್ರವಲ್ಲದೇ ನಾಗ ಚೈತನ್ಯ ಕೂಡ ಭಾಗಿಯಾಗಿದ್ದರು. ನಟಿ ಶೋಭಿತಾ ಹಾಗೂ ನಾಗ ಚೈತನ್ಯ ಹಳದಿ ಹಚ್ಚಿ ಮಂಗಳ ಸ್ನಾನ ಮಾಡಿಸಲಾಗಿದೆ.

Advertisment

publive-image

ನವಜೋಡಿಯನ್ನು ಒಟ್ಟಿಗೆ ಕೂರಿಸಿ ಹೂವು ಹಾಕಿ ಆರ್ಶಿವಾದ ಮಾಡಿದ್ದಾರೆ. ಇದೀಗ ನವ ದಂಪತಿಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದೇ ಫೋಟೋಸ್​ ನೋಡಿದ ಅಭಿಮಾನಿಗಳು ನವ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.

publive-image

ಇನ್ನು ಮದುವೆಗೆ ಎರಡು ಕಡೆಯ ಕುಟುಂಬಸ್ಥರು, ಕೆಲ ಗಣ್ಯರು, ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅಕ್ಕಿನೇನಿ ಕುಟುಂಬವಂತೂ ಹಿರಿಯ ಮಗನಿಗೆ ಮದುವೆ ಹಿನ್ನೆಲೆಯಲ್ಲಿ ಸಂತಸದಲ್ಲಿ ಮುಳುಗಿದೆ. ಡಿಸೆಂಬರ್ 4ರಂದು ಭರ್ಜರಿ ವಿವಾಹದ ಬಳಿಕ ರಾಜಸ್ಥಾನ ಅಥವಾ ವಿದೇಶದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಲು ಪ್ಲಾನ್ ಮಾಡಲಾಗುತ್ತಿದೆ  ಎಂದು ಹೇಳಲಾಗುತ್ತಿದೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment