ಆ್ಯಕ್ಸಿಡೆಂಟ್ ಕೇಸ್ನಲ್ಲಿ ನಟ ನಾಗಭೂಷಣ್‌ಗೆ ಸಂಕಷ್ಟ
ನಾಗಭೂಷಣ್ ವಿರುದ್ಧ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ
80 ಪುಟಗಳ ಚಾರ್ಜ್ಶೀಟ್ ಸಲ್ಲಿಸಿರುವ ಸಂಚಾರಿ ಪೊಲೀಸರು
ಬೆಂಗಳೂರು: ಟಗರು ಪಲ್ಯ.. ಹಳ್ಳಿ ಸೊಗಡಿನ ಈ ಸಿನಿಮಾ ಥಿಯೇಟರ್ ಅಂಗಳಕ್ಕೆ ಕೆಲದಿನಗಳ ಹಿಂದೆಯಷ್ಟೇ ಕಾಲಿಟ್ಟು ಸದ್ದು ಮಾಡ್ತಿದೆ. ಆದ್ರೆ ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದ ನಾಗಭೂಷಣ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಅವತ್ತು ಅಕ್ಟೋಬರ್ 30.. ಸುಮಾರು ರಾತ್ರಿ 9:30ರ ಸಮಯ.. ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ಭೀಕರ ಅಪಘಾತ ನಡೆದಿತ್ತು. ಊಟ ಮುಗಿಸಿ, ವಾಕ್‌ಗೆ ಹೊರಟಿದ್ದ ದಂಪತಿಗೆ ಹಿಂದಿನಿಂದ ಬಂದ ನಟ ನಾಗಭೂಷಣ್ ಕಾರ್, ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ಪ್ರೇಮ ಮೃತಪಟ್ಟಿದ್ರು, ಕೃಷ್ಣ ಆಸ್ಪತ್ರೆ ಸೇರಿದ್ರು. ಈಗ ಕೃಷ್ಣ ಚೇತರಿಕೆ ಕಂಡಿದ್ದಾರೆ. ಆದ್ರೆ ಆಕ್ಸಿಡೆಂಟ್ ಮಾಡಿದ್ದ ನಟ ನಾಗಭೂಷಣ್‌ಗೆ ಸಂಕಷ್ಟ ಎದುರಾಗಿದೆ.
ಈ ಕೇಸ್ ಸಂಬಂಧ ನಟ ನಾಗಭೂಷಣ್ನ ಪೊಲಿಸರು ಕಸ್ಟಡಿಗೆ ಕೂಡ ತೆಗೆದುಕೊಂಡಿದ್ರು. ಸದ್ಯ ಈ ಕೇಸ್ನಲ್ಲಿ ನಾಗಭೂಷಣ್ ವಿರುದ್ಧ ಚಾರ್ಚ್ ಶೀಟ್ ಸಲ್ಲಿಕೆ ಮಾಡಲಾಗಿದೆ.
ಚಾರ್ಜ್ ಶೀಟ್ ಸಂಕಷ್ಟ!
ನಾಗಭೂಷಣ್ ವಿರುದ್ಧ 80 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. 60 ಸಾಕ್ಷಿ ಕಲೆ ಹಾಕಿದ್ದ ಕುಮಾರಸ್ವಾಮಿ ಟ್ರಾಫಿಕ್ ಪೊಲೀಸರು, ಸಿಸಿಟಿವಿ ಮಾತ್ರವಲ್ಲದೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಕೂಡ ಸಂಗ್ರಹಿಸಿದ್ದಾರೆ. ಕಾರಿನಲ್ಲಿ ಯಾವ ಲೋಪಗಳು ಇಲ್ಲ ಎಂಬ ವರದಿ ಲಭ್ಯವಾಗಿದ್ದು, ಅಜಾಗರೂಕತೆ ಹಾಗೂ ಅತಿವೇಗದಿಂದ ಅಪಘಾತ ಅಂತ ಕೋರ್ಟ್ಗೆ ವರದಿ ನೀಡಲಾಗಿದೆ.
ಸದ್ಯ ಕೃಷ್ಣ ಹೇಳಿಕೆಯನ್ನ ಪೊಲೀಸರು ದಾಖಲಿಸಿಕೊಂಡಿದ್ದು, ಅಂದು ನಾಗಭೂಷಣ್ ಕೊಟ್ಟಿದ್ದ ಹೇಳಿಕೆ, ಇಂದು ಮೃತ ಪ್ರೇಮ ಪತಿ ಕೃಷ್ಣ ಅವರು ನೀಡಿರೋ ಹೇಳಿಕೆ ಒಂದಕ್ಕೊಂದು ವಿರುದ್ಧವಾಗಿದೆ.
ನಾಗಭೂಷಣ್ ಹೇಳಿದ್ದೇನು?
ದಂಪತಿ ಫುಟ್ ಪಾತ್ನಿಂದ ಕೆಳಗೆ ನಡೆದುಕೊಂಡು ಹೋಗುತ್ತಿದ್ರು, ಏಕಾಏಕಿ ಕಾರಿಗೆ ಅಡ್ಡ ಬಂದಿದ್ದರಿಂದ ಕಂಟ್ರೋಲ್ ಸಿಗದೆ ಆ್ಯಕ್ಸಿಡೆಂಟ್ ಆಗಿದೆ. ತಕ್ಷಣ ನಾನು ಕಾರಿನಿಂದ ಇಳಿದು ದಂಪತಿಯನ್ನ ಆಸ್ಪತ್ರೆಗೆ ಸೇರಿಸಿದ್ದೆ ಎಂದಿದ್ದರು ನಾಗಭೂಷಣ್.
ಆದ್ರೆ ಅಸ್ಪತ್ರೆಯಲ್ಲಿ ಚೇತರಿಸಿಕೊಂಡಿರೋ ಕೃಷ್ಣ, ಪ್ರಕರಣ ಸಂಬಂಧ ಬೇರೆಯೇ ಹೇಳಿಕೆ ಕೊಟ್ಟಿದ್ದಾರೆ.. ನಾವು ಫುಟ್ಪಾತ್ನಲ್ಲಿ ನಡೆದುಕೊಂಡು ಹೋಗ್ತಿದ್ವಿ. ಈ ವೇಳೆ ವೇಗವಾಗಿ ಬಂದ ನಾಗಭೂಷಣ್ ಕಾರು ನಮಗೆ ಡಿಕ್ಕಿ ಹೊಡೀತು ಎಂದಿದ್ದಾರೆ.
ಒಟ್ನಲ್ಲಿ ಆಕಸ್ಮಿಕವೋ.. ನಿರ್ಲಕ್ಷ್ಯವೋ.. ಒಂದು ಜೀವ ಬಲಿ ಆಗಿ ಹೋಗಿದೆ. ಸದ್ಯ ಚಾರ್ಜ್ ಶೀಟ್ ಸಲ್ಲಿಕೆಯಾಗಿರೋದ್ರಿಂದ ನಾಗಭೂಷಣ್‌ಗೆ ಕಾನೂನು ಕಂಟಕ ಎದುರಾಗೋ ಸಾಧ್ಯತೆ ಇದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ