ತೆಲುಗು ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ ಎನ್ ಕನ್ವೆನ್ಷನ್ ಹಾಲ್ ನೆಲಸಮ
10 ಎಕರೆ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ್ದ ಕಟ್ಟಡ ಕೆಡವಿದ ತೆಲಂಗಾಣ ಸರ್ಕಾರ
ಅಕ್ರಮವಾಗಿ, ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣವಾಗಿತ್ತಾ ಈ ಕಟ್ಟಡ..?
ಹೈದ್ರಾಬಾದ್: ತೆಲುಗು ಸೂಪರ್ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ಗೆ ಸಂಬಂಧಿಸಿದ್ದ, 10 ಎಕರೆಯಲ್ಲಿ ನಿರ್ಮಾಣವಾಗಿದ್ದ ಕಟ್ಟಡಗಳನ್ನು ತೆಲಂಗಾಣ ಸರ್ಕಾರ ನೆಲಸಮಗೊಳಿಸಿದೆ. ಅನೇಕ ರೀತಿಯ ಕಾನೂನುಗಳನ್ನು ಉಲ್ಲಂಘಿಸಿ ಈ ಕಟ್ಟಡಗಳನ್ನು ಕಟ್ಟಲಾಗಿತ್ತು ಎಂಬ ಆರೋಪದ ಮೇಲೆ ಸುಮಾರು 10 ಎಕರೆಯಲ್ಲಿ ಸ್ಥಾಪನೆಗೊಂಡಿದ್ದ ನಾಗರ್ಜುನ್ ಅವರ ಕನ್ವೆನ್ಷನ್ ಸೆಂಟರ್ನ್ನು ನೆಲಸಮಗೊಳಿಸಲಾಗಿದೆ.
ಇದನ್ನೂ ಓದಿ: ವಿದೇಶ ಸುತ್ತುತ್ತಾ ವ್ಲಾಗ್ ಮಾಡೋ ಮಾ ಡಾ. ಬ್ರೋ; ಒಂದು ತಿಂಗಳಿಗೆ ದುಡಿಯೋ ಹಣ ಎಷ್ಟು..?
ತಮ್ಮಿಡು ಕುಂಟಾ ಕೆರೆಯ ಬಳಿ ನಿರ್ಮಾಣವಾಗಿದ್ದ ಈ ಕನ್ವೆನ್ಷನ್ ಸೆಂಟರ್ ಹಲವು ಪರಿಸರ ನಿಯಮಗಳನ್ನು ಉಲ್ಲಂಘಿಸಿತ್ತು ಎನ್ನುವ ಆರೋಪದ ಮೇಲೆ ನೆಲಸಮಗೊಳಿಸಲಾಗಿದೆ.
ಇಷ್ಟೆಲ್ಲಾ ಆದರೂ ಕೂಡ ತೆಲುಗು ಸೂಪರ್ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ ಅವರು ಕಟ್ಟಿದ್ದ ಕನ್ವೆನ್ಷನ್ ಸೆಂಟರ್ ಹಲವು ಐಷಾರಾಮಿ ಕಾರ್ಯಕ್ರಮಗಳಿಗೆ ಹೇಳಿ ಮಾಡಿಸದಂತ ಸ್ಥಳವಾಗಿತ್ತು ಮತ್ತು ಅಷ್ಟೇ ಜನಪ್ರಿಯತೆಯನ್ನು ಪಡೆದಿತ್ತು. ಮದುವೆ ಕಾರ್ಪೋರೇಟ್ ಮೀಟಿಂಗ್ ಇವೆಂಟ್ಗಳು ಸೇರಿದಂತೆ ಹಲವು ಸಮಾರಂಭಗಳು ಅಲ್ಲಿ ನಡೆಯುತ್ತಿದ್ದವು.
ಇದನ್ನೂ ಓದಿ: ಒಂದೊಂದು ರೂಪಾಯಿಗೂ ಪರದಾಡ್ತಿರೋ ಪಾಕ್ಗೆ ಮತ್ತೊಂದು ಸಂಕಷ್ಟ; ಏನದು?
ಸದ್ಯ ಅವರ ಕಟ್ಟಡ ನೆಲಸಮಗೊಂಡಿದ್ದಕ್ಕೆ ನಾಗಾರ್ಜುನ್ ತಮ್ಮ ಎಕ್ಸ್ ಖಾತೆಯಲ್ಲಿ ಬೇಸರವ್ಯಕ್ತಪಡಿಸಿದ್ದಾರೆ. ಎನ್ ಕನ್ವೆನ್ಷನ್ ಹಾಲ್ ಅನ್ನು ನೆಲಸಮಗೊಳಿಸಿದ್ದು ಅಕ್ಷರಶಃ ಕಾನೂನು ಬಾಹಿರ, ಕೋರ್ಟ್ನಿಂದ ಸ್ಟೇ ತಂದಿದ್ದ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಒಂದೇ ಒಂದು ನೋಟಿಸ್ ಕೂಡ ನೀಡದೆ ಬೆಳ್ಳಂ ಬೆಳಗ್ಗೆ ಕನ್ವೆನ್ಷನ್ ಹಾಲ್ ಅನ್ನು ಧ್ವಂಸಗೊಳಿಸಲಾಗಿದೆ. ಒಂದೇ ಒಂದು ಇಂಚು ಜಾಗದಲ್ಲಿಯೂ ಅಕ್ರಮವಾಗಿ ಕಟ್ಟಡ ಕಟ್ಟಿಲ್ಲ. ಇದು ಅಕ್ಷರಶಃ ಕಾನೂನು ಬಾಹಿರ ನಡುವಳಿಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ