newsfirstkannada.com

‘ಡಿಸೆಂಬರ್​​​ ಒಳಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಪತನ’- ಭವಿಷ್ಯ ನುಡಿದ ಕಟೀಲ್​​!

Share :

19-06-2023

    ಕಾಂಗ್ರೆಸ್​​ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಬಿಜೆಪಿ ರಾಜ್ಯಾಧ್ಯಕ್ಷ

    ಡಿಸೆಂಬರ್​ ಒಳಗೆ ಸಿದ್ದು ಕಾಂಗ್ರೆಸ್​ ಸರ್ಕಾರ ಪತನ ಎಂದ ಕಟೀಲ್​​​

    ಸಿಎಂ ಸಿದ್ದರಾಮಯ್ಯ ವಿರುದ್ಧ ನಳೀನ್ ಕುಮಾರ್ ಕಟೀಲ್ ಕೆಂಡ!

ಬೆಂಗಳೂರು: ಡಿಸೆಂಬರ್​​ ಒಳಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​ ಪತನವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ. ಈ ಸಂಬಂಧ ಮಾತಾಡಿದ ಕಟೀಲ್​​​, ಕಾಂಗ್ರೆಸ್​ ನಾಯಕರು ಬಹಿರಂಗವಾಗಿಯೇ ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದಿದ್ದಾರೆ. ಹೀಗಾಗಿ ಡಿ.ಕೆ ಶಿವಕುಮಾರ್​​ಗೆ ಸಿಎಂ ಪಟ್ಟ ಸಿಗೋದು ಡೌಟ್​​​​. ಹೀಗೆ ಕಾಂಗ್ರೆಸ್​ ನಾಯಕರು ಕಚ್ಚಾಟ ನಡೆಸಿದರೆ ಡಿಸೆಂಬರ್​​ ಒಳಗೆ ಸಿದ್ದರಾಮಯ್ಯ ಸರ್ಕಾರ ಬೀಳಲಿದೆ ಎಂದರು.

ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಕೇಂದ್ರದ 5 ಕೆಜಿಗೆ ಇನ್ನೈದು ಕೆಜಿ ಸೇರಿ ಒಟ್ಟು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದಾರೆ. ಹಾಗಾದ್ರೆ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರ 10 ಕೆಜಿ ನೀಡಲಿದೆ ಎಂದು ಹೇಳಿದ್ದು ಸುಳ್ಳು ಎಂದು ವ್ಯಂಗ್ಯವಾಡಿದರು.

ಗೃಹಲಕ್ಷ್ಮೀ ಯೋಜನೆ ಹೆಸರಲ್ಲಿ ಕಾಂಗ್ರೆಸ್​ ಮೋಸ

ಇನ್ನು, ಗೃಹಲಕ್ಷ್ಮೀ ಯೋಜನೆ ಹೆಸರಲ್ಲಿ ಕಾಂಗ್ರೆಸ್​ ಜನರಿಗೆ ಮೋಸ ಮಾಡುತ್ತಿದೆ. ಸ್ಕೀಮ್​ ಜಾರಿಗೆ ಮುನ್ನವೇ ವಿದ್ಯುತ್​ ಬಿಲ್​ ಏರಿಕೆ ಮಾಡಲಾಗಿದೆ. ಇದರಿಂದ ಲೋಡ್​ ಶೆಡ್ಡಿಂಗ್​ ರೀತಿಯಲ್ಲೇ ವಿದ್ಯುತ್​​ ವ್ಯತ್ಯಯ ಆಗುತ್ತಿದೆ. ಕರೆಂಟ್​ ಬಿಲ್​ ಏರಿಕೆ ಖಂಡಿಸಿ ಕೈಗಾರಿಕಾ ವಾಣಿಜ್ಯ ಮಂಡಳಿ ಬಂದ್​ಗೆ ಕರೆ ನೀಡಿದೆ. ನಾವು ಕೈಗಾರಿಕಾ ವಾಣಿಜ್ಯ ಮಂಡಳಿ ಬಂದ್​ ಕರೆಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಡಿಸೆಂಬರ್​​​ ಒಳಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಪತನ’- ಭವಿಷ್ಯ ನುಡಿದ ಕಟೀಲ್​​!

https://newsfirstlive.com/wp-content/uploads/2023/06/Katil.jpg

Load More