Advertisment

VIDEO: ನಮ್ಮ ಮೆಟ್ರೋ ಗುಡ್‌ನ್ಯೂಸ್‌.. ನಾಗವಾರ ಸುರಂಗದಿಂದ ಹೊರಬಂದ ಭದ್ರ; ಏನಿದರ ವಿಶೇಷ?

author-image
admin
Updated On
VIDEO: ನಮ್ಮ ಮೆಟ್ರೋ ಗುಡ್‌ನ್ಯೂಸ್‌.. ನಾಗವಾರ ಸುರಂಗದಿಂದ ಹೊರಬಂದ ಭದ್ರ; ಏನಿದರ ವಿಶೇಷ?
Advertisment
  • 2020ರಲ್ಲಿ ಮೊದಲ TBM ಯಂತ್ರ ಸುರಂಗ ಕೊರೆಯಲು ಆರಂಭ
  • ನಮ್ಮ ಮೆಟ್ರೋದ ಶೇಕಡಾ 100 ರಷ್ಟು ಸುರಂಗ ಮಾರ್ಗ ಮುಗಿದಿದೆ
  • ಸುರಂಗ ಕಾರ್ಯ ಯಶಸ್ವಿಯಾಗುತ್ತಿದ್ದಂತೆ ಸಿಹಿ ಹಂಚಿ ಸಂಭ್ರಮ

ಬೆಂಗಳೂರು ಜನರ ಜೀವನಾಡಿಯಾಗಿರೋ ನಮ್ಮ ಮೆಟ್ರೋ ಮತ್ತೊಂದು ಸಾಹಸ ಯಶಸ್ಸು ಕಂಡಿದೆ. ಮತ್ತೊಂದು ನಮ್ಮ ಮೆಟ್ರೋ ಸುರಂಗ ಕಾರ್ಯ ಯಶಸ್ವಿಯಾಗಿದೆ. 937 ಮೀಟರ್ ಸುರಂಗ ಮಾರ್ಗ ಕೊರೆಯುವಲ್ಲಿ ಸುರಂಗ ಕೊರೆಯೋ ಯಂತ್ರ ಭದ್ರ ಯಶಸ್ವಿಯಾಗಿದೆ.

Advertisment

ಕೆ.ಜಿ ಹಳ್ಳಿಯಿಂದ ನಾಗವಾರದವರೆಗಿನ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದೆ. ಕಳೆದ ಏಪ್ರಿಲ್ 2ರಂದು ಕೆ.ಜಿ ಹಳ್ಳಿ ನಿಲ್ದಾಣದಲ್ಲಿ ಸುರಂಗ ಕೊರೆಯಲು ನಿಯೋಜಿಸಿತ್ತು. ಸರಿ ಸುಮಾರು 6 ತಿಂಗಳ ಬಳಿಕ ಸುರಂಗ ಯಂತ್ರ ಭದ್ರ ನಾಗವಾರ ಸುರಂಗದಿಂದ ಯಶಸ್ವಿಯಾಗಿ ಹೊರಬಂದಿದೆ. ಈ ಮೂಲಕ ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ ಸುರಂಗ ಕಾರ್ಯ ಪೂರ್ಣಗೊಂಡಿದೆ.

publive-image

ನಾಗವಾರದಲ್ಲಿ ಸುರಂಗ ಯಂತ್ರ ಭದ್ರ ಹೊರ ಬರುತ್ತಿದ್ದಂತೆ ಮೆಟ್ರೋ ಸಿಬ್ಬಂದಿ ಖುಷಿಯಲ್ಲಿ ತೇಲಾಡಿದ್ದಾರೆ. ಮೆಟ್ರೋ ಅಧಿಕಾರಿಗಳು ಸುರಂಗ ಕಾರ್ಯ ಯಶಸ್ವಿಯಾಗುತ್ತಿದ್ದಂತೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಸುರಂಗ ಯಂತ್ರ ಸುರಕ್ಷಿತವಾಗಿ ಹೊರ ಬರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

Advertisment


">October 30, 2024

ಇದನ್ನೂ ಓದಿ: ಮೆಟ್ರೋದಲ್ಲಿ ನುರಿತ ಅಭ್ಯರ್ಥಿಗಳಿಗೆ ಉದ್ಯೋಗ.. ಅರ್ಜಿ ಆಹ್ವಾನ ಮಾಡಿದ DMRCL 

ನಮ್ಮ ಮೆಟ್ರೋ 2020ರಲ್ಲಿ ಮೊದಲ TBM ಯಂತ್ರವೂ ಕಂಟೋನ್ಮೆಂಟ್‌ನಿಂದ ಶಿವಾಜಿನಗರದ ನಿಲ್ದಾಣ ನಡುವೆ ಸುರಂಗ ಕೊರೆಯಲು ಪ್ರಾರಂಭಿಸಿತ್ತು. 2022ರಲ್ಲಿ ಕಂಟೋನ್ಮೆಂಟ್ ಮತ್ತು ಪಾಟರಿ ಟೌನ್ ನಡುವೆ ಸುರಂಗ ಮಾರ್ಗ ಕೊರೆದಿತ್ತು. ರೀಚ್ 6ರ ಸುರಂಗ ಮಾರ್ಗಕ್ಕಾಗಿ ಒಟ್ಟಾರೆ 9 ಟಿಬಿಎಂಗಳನ್ನು ನಿಯೋಜಿಸಲಾಗಿದೆ. ಇಲ್ಲಿಯವರೆಗೂ ಒಟ್ಟು 20992 ಮೀಟರ್ ಸುರಂಗ ಮಾರ್ಗ ಮಾಡಲಾಗಿದೆ. ಈ ಕೊನೆ ಹಂತದ ಸುರಂಗ ಕೊರೆತದೊಂದಿಗೆ ನಮ್ಮ ಮೆಟ್ರೋ ಶೇಕಡಾ 100 ರಷ್ಟು ಸುರಂಗ ಮಾರ್ಗವನ್ನು ಮುಗಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment