newsfirstkannada.com

ಬೆಂಗಳೂರಿಗರಿಗೆ ಬ್ಯಾಡ್​ ನ್ಯೂಸ್​ ಕೊಟ್ಟ ನಮ್ಮ ಮೆಟ್ರೋ.. ಎಲ್ಲರೂ ಓದಲೇಬೇಕಾದ ಸ್ಟೋರಿ!

Share :

15-09-2023

    ಐಟಿ ಉದ್ಯೋಗಿಗಳಿಗೆ ಬ್ಯಾಡ್​ ನ್ಯೂಸ್​ ಕೊಟ್ಟ ಮೆಟ್ರೋ

    ನೇರಳೆ ವಿಸ್ತೃತ ಮಾರ್ಗ ಉದ್ಘಾಟನೆ ಇನ್ನೂ ವಿಳಂಬ..!

    ಕೆಆರ್​​ ಪುರಂ-ಬೈಯಪ್ಪನಹಳ್ಳಿ ಮೆಟ್ರೋ ಸೇವೆ ಸದ್ಯಕ್ಕಿಲ್ಲ

ಬೆಂಗಳೂರು: ಸಿಲಿಕಾನ್​​​ ಸಿಟಿ ಬೆಂಗಳೂರಿಗರ ಟ್ರಾಫಿಕ್‌ ಕಿರಿಕಿರಿಗೆ ಸ್ವಲ್ಪನಾದ್ರೂ ಮದ್ದರೆದಿರೋದು ಅಂದ್ರೆ ಅದು ನಮ್ಮ ಮೆಟ್ರೋ. ಈ ಮೆಟ್ರೋ ಭಾಗ್ಯ ನಮ್ಗೂ ಸಿಗ್ಲಿ ಅಂತ ಕಾಯ್ತಿರೋರು ಕೆ.ಆರ್‌ ಪುರಂ ಮಂದಿ. ಆದ್ರೆ ಇನ್ನೇನು ಎರಡ್ಮೂರು ದಿನದಲ್ಲಿ ಆ ಭಾಗ್ಯ ಸಿಕ್ಕೇಬಿಡುತ್ತೆ ಅಂತ ಕಾಯ್ತಿದ್ದವ್ರಿಗೆ ಶಾಕ್‌ ಆಗಿದೆ.

ನೇರಳೆ ಮೆಟ್ರೋ ಹತ್ತಿ ಸುಯ್​ ಅಂತಾ ಸಂಚಾರ ಮಾಡಿ ಟ್ರಾಫಿಕ್‌ಗೆ ಗೋಲಿ ಹೊಡೀಬೇಕು ಅಂತ ಕಾಯ್ತಿರೋರು ಕೆ.ಆರ್‌ ಪುರಂ ಮಂದಿ. ಅದಾಗ್ಬೇಕು ಅಂದ್ರೆ ಕೆಂಗೇರಿ ಚಲ್ಲಘಟ್ಟ – ಕೆ.ಆರ್.ಪುರ – ಬೈಯ್ಯಪ್ಪನಹಳ್ಳಿ ವಿಸ್ತರಿತ ಮಾರ್ಗ ಉದ್ಘಾಟನೆ ಆಗ್ಬೇಕು. ಆಗ್ಬೇಕಿತ್ತು ಕೂಡ. ಆದ್ರೆ ಈ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರಿಗೆ ಮೆಟ್ರೋ ಸುರಕ್ಷತಾ ಅಧಿಕಾರಿಗಳು ಶಾಕ್​ ನೀಡಿದ್ದಾರೆ. ಪ್ರಯಾಣಿಕರ ಅಚ್ಚುಮೆಚ್ಚಿನ ನಮ್ಮ ಮೆಟ್ರೋ ನೇರಳೆ ಮಾರ್ಗಕ್ಕೆ ಉದ್ಘಾಟನೆ ಭಾಗ್ಯ ದೊರಕೋ ಹಾಗೆ ಕಾಣ್ತಿಲ್ಲ. ಇಂದು ಅಧಿಕಾರಿಗಳು ಕೆ.ಆರ್​.​ಪುರ-ಬೈಯಪ್ಪನಹಳ್ಳಿ ಎರಡು ಕಿಲೋಮೀಟರ್​ ತಪಾಸಣೆ ನಡೆಸಿ ನೇರಳೆ ಮಾರ್ಗಕ್ಕೆ ಅಧಿಕೃತ ಚಾಲನೆ ನೀಡ್ಬೇಕಿತ್ತು. ಆದ್ರೆ ಕೊನೇ ಘಳಿಗೆಯಲ್ಲಿ ಮೆಟ್ರೋ ಸುರಕ್ಷತಾ ಅಧಿಕಾರಿಗಳು ತಪಾಸಣೆ ಮುಂದೂಡಿದ್ದಾರೆ.

ಈ ಮೀನಾ ಮೇಷ ಕಳೆದೆರಡು ತಿಂಗಳಿನಿಂದಲೂ ನಡೀತಾನೇ ಇದೆ. ಟ್ರಾಫಿಕ್​ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬೇಕಾದ್ರೆ ಜನಸಾಮಾನ್ಯರಿಗೆ ಮೆಟ್ರೋ ಸಂಚಾರ ಉತ್ತಮ ಪರಿಹಾರವಾಗಿತ್ತು. ಇತ್ತ ಸೆಪ್ಟೆಂಬರ್​ 18 ರಂದು ಗಣಪತಿ ಹಬ್ಬ ಕೂಡ ಇದ್ದು, ಆ ದಿನ ಕೂಡ ಸಾರ್ವಜನಿಕರಿಗೆ ನೇರಳೆ ಮಾರ್ಗ ಭಾಗ್ಯ ದೊರಕುವಂತೆ ಕಾಣ್ತಿಲ್ಲ.

ಈಗಾಗಲೇ ಸಂಪೂರ್ಣ ಕಾಮಗಾರಿ ಮುಗಿದಿದ್ದು, ಬಿಎಂಆರ್​ಸಿಎಲ್​ ಟ್ರಯಲ್​ ನಡೆಸಿತ್ತು. ಆದ್ರೆ ಇದೀಗ ಸೆಪ್ಟೆಂಬರ್​ ಅಂತ್ಯದವರೆಗೂ ನೇರಳೆ ವಿಸ್ತೃತ ಸೇವೆ ಸಿಗೋದಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಸೆಪ್ಟೆಂಬರ್​​ ಅಂತ್ಯದೊಳಗೆ ಸಂಪೂರ್ಣ ತಪಾಸಣೆ ಮುಗಿಸಿ 43 ಕಿಲೋ ಮೀಟರ್​ ಉದ್ದದ ನೇರಳೆ ಮಾರ್ಗಕ್ಕೆ ಗ್ರೀನ್ ಸಿಗ್ನಲ್ ದೊರಕುವ ಸಾಧ್ಯತೆ ಇದೆ. ಒಟ್ನಲ್ಲಿ ಬೇಗ ಮೆಟ್ರೋ ಸೇವೆ ಸಿಗ್ಲಪ್ಪ, ಟ್ರಾಫಿಕ್‌ ಕಿರಿಕಿರಿಯಿಂದ ಮುಕ್ತಿ ದೊರಕ್ಲಪ್ಪ ಅನ್ನೋದು ಪ್ರಯಾಣಿಕರ ಬಯಕೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗರಿಗೆ ಬ್ಯಾಡ್​ ನ್ಯೂಸ್​ ಕೊಟ್ಟ ನಮ್ಮ ಮೆಟ್ರೋ.. ಎಲ್ಲರೂ ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/06/namma-metro-11.jpg

Load More