newsfirstkannada.com

ಬೆಂಗಳೂರಿಗರಿಗೆ ಬಿಗ್​ ರಿಲೀಫ್​​; ಗುಡ್​​ನ್ಯೂಸ್​ ಕೊಟ್ಟ ನಮ್ಮ ಮೆಟ್ರೋ!

Share :

27-07-2023

    ಸಾರ್ವಜನಿಕರಿಗೆ ಬಿಗ್​​ ರಿಲೀಫ್ ನೀಡಲು ಮುಂದಾದ BMRCL

    ಆಗಸ್ಟ್ ಮೂರನೇ ವಾರದಲ್ಲಿ ಹೊಸ ಮಾರ್ಗ ಲೋಕಾರ್ಪಣೆ

    BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದ್ದೇನು?

ಬೆಂಗಳೂರು: ನಮ್ಮ ಮೆಟ್ರೋ ಕಡೆಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬೈಯಪ್ಪನಹಳ್ಳಿ ಟೂ ಕೆಆರ್ ಪುರಂ ನಡುವಿನ ಮಿಸ್ಸಿಂಗ್ ಲಿಂಕ್ ಟ್ರಯಲ್ ರನ್ ಆರಂಭ ಮಾಡಲಾಗಿದೆ. ಸುರಕ್ಷಾ ಪ್ರಾಧಿಕಾರ ಅಧಿಕಾರಿಗಳ ಸಮ್ಮುಖದಲ್ಲಿ ಟ್ರಯಲ್ ರನ್ ನಡೆದಿದ್ದು ಆಗಸ್ಟ್ ಮೂರನೇ ವಾರದಲ್ಲಿ ಮಿಸ್ಸಿಂಗ್ ಲಿಂಕ್ ಮೇಟ್ರೋ ಮಾರ್ಗ ಆರಂಭಿಸುವುದಾಗಿ ಈ ಹಿಂದೆಯೇ BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದರು.

ಈ‌ ಹಿನ್ನೆಲೆ ಅಂತಿಮ ಹಂತದ ತಯಾರಿ ಈಗ ಭರದಿಂದ ಸಾಗುತ್ತಿದೆ. ಸದ್ಯ ಬೈಯಪ್ಪನಹಳ್ಳಿ‌ ಟು ವೈಟ್ ಫೀಲ್ಡ್ ಮಾರ್ಗದಲ್ಲಿ ಸಂಚರಿಸೋ ಮಂದಿ ಕೆಆರ್ ಪುರಂ ನಲ್ಲಿ ಇಳಿದು, ಇತರ ಸಾರಿಗೆಯನ್ನ ಅವಲಂಬಿಸಬೇಕಿತ್ತು. ಆಗ ಕೆಆರ್ ಪುರಂ ಭಾಗದಲ್ಲಿ ಸಾಕಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿತ್ತು.

ಕೆಆರ್ ಪುರಂ ರೈಲ್ವೆ ಸ್ಟೇಷನ್ ಬಳಿ ಅಂತೂ ಜನ ತುಂಬಿ ಹೋಗಿ ಕಂಪ್ಲೀಟ್ ಟ್ರಾಫಿಕ್ ಜಾಮ್ ಆಗುತ್ತಿತ್ತು. ಜಾಮ್ ಕ್ಲಿಯರ್ ಮಾಡಲು ಸಂಚಾರಿ ಪೊಲೀಸರು ಹರಸಾಹಸ ಪಡುವಂತಹ ಸ್ಥಿತಿ ಎದುರಾಗಿತ್ತು. ಇದೀಗ ಹೊಸ ಮಾರ್ಗ ಆದಷ್ಟು ಬೇಗ ಸಂಚಾರಕ್ಕೆ ಮುಕ್ತ ಆಗುವುದರಿಂದ ಸಾರ್ವಜನಿಕರಿಗೆ ರಿಲೀಫ್ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗರಿಗೆ ಬಿಗ್​ ರಿಲೀಫ್​​; ಗುಡ್​​ನ್ಯೂಸ್​ ಕೊಟ್ಟ ನಮ್ಮ ಮೆಟ್ರೋ!

https://newsfirstlive.com/wp-content/uploads/2023/07/Metro.jpg

Load More