newsfirstkannada.com

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌.. ನಾಳೆಯಿಂದ ಈ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳು ಲಭ್ಯ; ಎಲ್ಲೆಲ್ಲಿ?

Share :

Published July 5, 2024 at 7:47pm

Update July 5, 2024 at 7:48pm

  ಸಿಲಿಕಾನ್​ ಸಿಟಿ ಮಂದಿಗೆ ಗುಡ್​​ನ್ಯೂಸ್​ ಕೊಟ್ಟ ನಮ್ಮ ಮೆಟ್ರೋ

  ನಿತ್ಯ ಲಕ್ಷಾಂತರ ಪ್ರಯಾಣಿಕರು ‘ನಮ್ಮ ಮೆಟ್ರೋ’ದಲ್ಲಿ ಪ್ರಯಾಣ

  ಇನ್ಮುಂದೆ ಈ ಮಾರ್ಗದಲ್ಲಿ 9 ರೈಲುಗಳ ಜೊತೆಗೆ 6 ರೈಲುಗಳ ಓಡಾಟ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮಾಡುವ ಸಲುವಾಗಿ ನಮ್ಮ ಮೆಟ್ರೋ ಜಾರಿಗೆ ಬಂದಿತು. ಸಿಲಿಕಾನ್ ಸಿಟಿಯಲ್ಲಿ ನಿತ್ಯ ಲಕ್ಷಾಂತರ ಮಂದಿಗೆ ವೇಗದ ಸಾರಿಗೆ ನೀಡುತ್ತಿರುವ ಒಂದೇ ಒಂದು ಸಂಸ್ಥೆ ಎಂದರೆ ಅದು ‘ನಮ್ಮ ಮೆಟ್ರೋ’ ಮಾತ್ರ. ನಗರದ ಜನಸಾಮಾನ್ಯರು ನಮ್ಮ ಮೆಟ್ರೋ ಸೇವೆಯನ್ನು ಸದುಪಯೋಗ ಮಾಡಿಕೊಳ್ತಾರೆ.

ಇದನ್ನೂ ಓದಿ: ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್.. ಅಸಲಿ ವಿಚಾರ ಬಯಲು..!

ಹೀಗಾಗಿ ಸಾಕಷ್ಟು ಜನ ತಮ್ಮ ಮನೆಯಲ್ಲಿದ್ದ ಸ್ವಂತ ವಾಹನಗಳನ್ನು ಬಿಟ್ಟು, ಕೆಲವೇ ಕೆಲವು ನಿಮಿಷಯಗಳಲ್ಲಿ ತಾವು ಹೋಗಬೇಕಾದ ಸ್ಥಳಕ್ಕೆ ತಲುಪುತ್ತಾರೆ. ಹೀಗಾಗಿ ನಮ್ಮ ಮೆಟ್ರೋ ಕಡೆ ಮುಖ ಮಾಡಿದ್ದಾರೆ ಸಿಲಿಕಾನ್​ ಸಿಟಿ ಜನ. ಆದರೆ ಪ್ರಯಾಣಿಕರು BMRCL ಸಂಸ್ಥೆಗೆ ಹೆಚ್ಚುವರಿ ಮೆಟ್ರೋ ಬಿಡುವಂತೆ ಒತ್ತಾಯದ ಮಾಡಿಕೊಂಡಿದ್ಕಾದರು. ಇದೀಗ ಪ್ರಯಾಣಿಕರ ಒತ್ತಾಯದ ಮೇರೆಗೆ ನಮ್ಮ ಮೆಟ್ರೋ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದೆ. ಇಷ್ಟು ದಿನ 9 ರೈಲುಗಳಷ್ಟೇ ಕಾರ್ಯಾಚರಣೆ ಮಾಡುತ್ತಿದ್ದವು. ಆದರೆ ಇದೀಗ 9 ರೈಲುಗಳ ಜೊತೆಗೆ ಇನ್ನೂ 6 ರೈಲುಗಳು ಸೇರ್ಪಡೆಗೊಳ್ಳುತ್ತಿವೆ.

ಇದನ್ನೂ ಓದಿ: ಇಂಗ್ಲೆಂಡ್‌ ನೂತನ ಪ್ರಧಾನಿ ಕೀರ್ ಸ್ಟಾರ್ಮರ್.. ಯಾರು ಈ ಕಾರ್ಮಿಕ ನಾಯಕ? ಇವರ ಹಿನ್ನೆಲೆ ಏನು?

ಹೌದು, ನಾಳೆಯಿಂದಲೇ ನೇರಳೆ ಮಾರ್ಗದಲ್ಲಿ ಹೆಚ್ಚುವರಿ ಮೆಟ್ರೋ ರೈಲು ಸೇವೆ ಆರಂಭಗೊಳ್ಳುತ್ತಿದೆ. ನೇರಳೆ ಮಾರ್ಗದಲ್ಲಿ ಪ್ರಸ್ತುತ 9 ರೈಲುಗಳಷ್ಟೇ ಕಾರ್ಯಾಚರಣೆ ಮಾಡುತ್ತಿದ್ದವು. ನಾಳೆಯಿಂದ ಒಟ್ಟು 15 ರೈಲುಗಳ ಮೂಲಕ ನೇರಳೆ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಎಲ್ಲಾ ಹೆಚ್ಚುವರಿ ಮೆಟ್ರೋ ಸೇವೆ ಆರಂಭಗೊಳ್ಳಲಿದೆ. ಈ ಮೂಲಕ ನೇರಳೆ ಮಾರ್ಗದಲ್ಲಿ ಪ್ರತಿ 3.5 ನಿಮಿಷಕ್ಕೊಂದು ರೈಲು ಸೇವೆ ಇರಲಿದೆ. ಇನ್ನುಳಿದಂತೆ ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಬಗ್ಗೆ BMRCL ಸಂಸ್ಥೆ ಪ್ರಕಟಣೆ ಹೊರಡಿಸಿದೆ.

ಪಟ್ಟಿಂದೂರು ಅಗ್ರಹಾರದ (ಐಟಿಪಿಎಲ್)ವರೆಗೆ, ನಾಲ್ಕು ರೈಲು ವೈಟ್ ಫೀಲ್ಡ್ ಮತ್ತು ಒಂದು ರೈಲು ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಚಲಿಸುತ್ತವೆ. ಪ್ರಸ್ತುತವಾಗಿ ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಕೊನೆಗೊಳ್ಳುವ 14 ರೈಲುಗಳಲ್ಲಿ, 6 ರೈಲುಗಳನ್ನು ಪಟ್ಟಂದೂರು ಅಗ್ರಹಾರ (ಐಟಿಪಿಎಲ್)/ ವೈಟ್‌ ಫೀಲ್ಡ್​ವರೆಗೆ ವಿಸ್ತರಿಸಲಾಗಿದೆ. ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ಯಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ಪಟ್ನಂದೂರು ಅಗ್ರಹಾರ (ಐಟಿಪಿಎಲ್) ಕಡೆಗೆ ಪ್ರಯಾಣಿಸಲು ಮುಂದಿನ ರೈಲು 3.5 ನಿಮಿಷಗಳ ನಮ್ಮ ಮೆಟ್ರೋ ಲಭ್ಯವಿರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌.. ನಾಳೆಯಿಂದ ಈ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳು ಲಭ್ಯ; ಎಲ್ಲೆಲ್ಲಿ?

https://newsfirstlive.com/wp-content/uploads/2023/11/namma-metro-2.jpg

Load More