newsfirstkannada.com

ಬೆಂಗಳೂರಿಗರಿಗೆ ಮತ್ತೊಂದು ಗುಡ್​ನ್ಯೂಸ್​ ಕೊಟ್ಟ ನಮ್ಮ ಮೆಟ್ರೋ; ಏನದು?

Share :

25-07-2023

    ಮುಂದಿನ ತಿಂಗಳು ಏಕಕಾಲಕ್ಕೆ 2 ಮೆಟ್ರೋ ಸೇವೆ ಆರಂಭ!

    ಬೆಂಗಳೂರಿನ ಅತಿದೊಡ್ಡ ಮೆಟ್ರೊ ನಿಲ್ದಾಣ ಕಾರ್ಯಾರಂಭ

    ಆಗಸ್ಟ್ ಕೊನೆಯ ವಾರದಲ್ಲಿ ಹೊಸ ಮಾರ್ಗ ಲೋಕಾರ್ಪಣೆ

ಬೆಂಗಳೂರು: ಕೆಆರ್‌ಪುರಂ ಸುತ್ತಮುತ್ತಲಿನ ಟ್ರಾಫಿಕ್​ಗೆ ತಲೆ ಕೆಡಿಸಿಕೊಂಡಿದ್ದ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಕೊನೆಗೂ ಗುಡ್​ನ್ಯೂಸ್​ ಕೊಟ್ಟಿದೆ. ಯಾವಾಗಪ್ಪ ಈ ಮೆಟ್ರೋ ಕನೆಕ್ಟಿವಿಟಿ ಪೂರ್ಣಗೊಳ್ಳುತ್ತೆ ಅಂತಾ ಕಾದು ಕೂತ್ತಿದ್ದ ಜನರಿಗೆ ಬಿಎಂಆರ್‌ಸಿಎಲ್‌ ಸಿಹಿ ಸುದ್ದಿಯೊಂದನ್ನು ನೀಡಿದೆ. ಮುಂದಿನ ತಿಂಗಳು ಬಿಎಂಆರ್‌ಸಿಎಲ್ ಕೆ.ಆರ್‌.ಪುರಂ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಸಂಚಾರ ಆರಂಭಿಸಲಿದೆ. ಇದರಿಂದಾಗಿ ಆ ವಲಯದಲ್ಲಿರುವ ಅನೇಕ ಕಾರ್ಪೋರೇಟ್ ಕಂಪನಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ನಗರದ ಸುತ್ತಮುತ್ತಲಿನ ಊರುಗಳಿಂದ ವೈಟ್‌ಫೀಲ್ಡ್‌ಗೆ ಬಂದಿಳಿಯುವ ಜನರು ಕೆಲವೇ ನಿಮಿಷಗಳಲ್ಲಿ ನಿರಾಯಾಸವಾಗಿ ನಗರದ ಹೃದಯಭಾಗಕ್ಕೆ ಸಂಚರಿಸಲು ಸಹಕಾರಿಯಾಗಲಿದೆ.

ಬೈಯಪ್ಪನಹಳ್ಳಿ ಹಾಗೂ ಕೆ.ಆರ್.ಪುರಂ, ಕೆಂಗೇರಿ ಮತ್ತು ಚಲ್ಲಘಟ್ಟ ಮಾರ್ಗದಲ್ಲಿ ಮುಂದಿನ ತಿಂಗಳು ಏಕಕಾಲಕ್ಕೆ 2 ಮೆಟ್ರೋ ಸೇವೆ ಆರಂಭವಾಗಲಿದೆ. ಆಗಸ್ಟ್ ಕೊನೆ ವಾರದಲ್ಲಿ ಹೊಸ ಮಾರ್ಗ ಲೋಕಾರ್ಪಣೆಯಾಗಲಿದ್ದು, ಬೈಯಪ್ಪನಹಳ್ಳಿ ಹಾಗೂ ಕೆ.ಆರ್.ಪುರ ನಡುವಿನ 2.5 ಕಿಲೋಮೀಟರ್ ಮಾರ್ಗ ಶುರುವಾಗಲಿದೆ. 1.9 ಕಿಲೋಮೀಟರ್​ ಇರೋ ಕೆಂಗೇರಿ- ಚಲ್ಲಘಟ್ಟ ನಡುವಿನ ಮೆಟ್ರೋ ವಾಣಿಜ್ಯ ಸೇವೆ ಕೂಡ ಪ್ರಾರಂಭವಾಗಲಿದೆ. ಸದ್ಯ ಬೈಯಪ್ಪನಹಳ್ಳಿ ಕೆ.ಆರ್.ಪುರಂ ಮಾರ್ಗದ ಮೆಟ್ರೋ ಕಾಮಗಾರಿ ಕೊನೆ ಹಂತದಲ್ಲಿದೆ. ಇದೇ ಕಾರಣಕ್ಕೆ ನೇರಳೆ ಮಾರ್ಗಗಳಾದ ಬೈಯಪ್ಪನಹಳ್ಳಿ- ಎಸ್.ವಿ ರಸ್ತೆ , ಹಾಗೂ ಕೃಷ್ಣರಾಜಪುರ- ವೈಟ್ ಫೀಲ್ಡ್ ನಿಲ್ದಾಣಗಳ ನಡುವೆ ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಕಾಮಗಾರಿ ಪರಿಶೀಲನೆಗೆ ರೈಲ್ವೇ ಸುರಕ್ಷಿತ ಆಯುಕ್ತರಿಗೆ ಪತ್ರ ಬರೆದಿರುವ ಬಿಎಂಆರ್‌ಸಿಎಲ್‌, ಆಗಸ್ಟ್ 2ನೇ ವಾರದಲ್ಲಿ ರೈಲ್ವೇ ಸುರಕ್ಷಿತ ಆಯುಕ್ತರು ನಗರಕ್ಕೆ ಬರಲಿದ್ದಾರೆ.

ರೈಲ್ವೇ ಸುರಕ್ಷಿತ ಆಯುಕ್ತರ ಅನುಮತಿ ಬಳಿಕ ಆಗಸ್ಟ್ ಕೊನೆಯ ವಾರದಲ್ಲಿ ಮೆಟ್ರೋ ಸೇವೆ ಆರಂಭ ಮಾಡುವ ಚಿಂತನೆ ನಡೆಸಲಾಗಿದೆ ಅಂತಾ ಬಿಎಂಆರ್‌ಸಿಎಲ್‌ ಎಂಡಿ ಆಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ. ಈ ಎರೆಡು ಮಾರ್ಗ ಚಾಲನೆಯಾದರೆ, ಕೆ.ಆರ್​ಪುರಂನಿಂದ ಕೆಂಗೇರಿ ಮಾರ್ಗವಾಗಿ ಚಲಘಟ್ಟವರೆಗೂ ಪ್ರಯಾಣಿಕರು ಸಂಚರಿಸಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗರಿಗೆ ಮತ್ತೊಂದು ಗುಡ್​ನ್ಯೂಸ್​ ಕೊಟ್ಟ ನಮ್ಮ ಮೆಟ್ರೋ; ಏನದು?

https://newsfirstlive.com/wp-content/uploads/2023/06/Metro.jpg

Load More