newsfirstkannada.com

ಪ್ರಯಾಣಿಕರಿಗೆ ಗುಡ್​ನ್ಯೂಸ್​ ಕೊಟ್ಟ ನಮ್ಮ ಮೆಟ್ರೋ; ಏನಿದು ಸ್ಟೋರಿ?

Share :

05-08-2023

    ನಮ್ಮ ಮೆಟ್ರೋದಿಂದ ಬೆಂಗಳೂರಿಗರಿಗೆ ಗುಡ್​ನ್ಯೂಸ್​​

    ಪ್ರಯಾಣಿಕರಿಗೆ ಗುಡ್​ನ್ಯೂಸ್​​ ಕೊಟ್ಟ ನಮ್ಮ ಮೆಟ್ರೋ

    ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಮಾಸ್ಟರ್​ ಪ್ಲಾನ್​​!

ಬೆಂಗಳೂರು: ನಮ್ಮ ಮೆಟ್ರೋ ದಿನ ಕಳೆದಂತೆ ಹೆಚ್ಚೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಈ ಬೆನ್ನಲ್ಲೇ ಪ್ರಯಾಣಿಕರ ಸಂಖ್ಯೆ ಕೂಡ ದುಪ್ಪಟ್ಟಾಗಿದೆ. ಹೀಗಿರುವಾಗಲೇ ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಗೆ ಭರ್ಜರಿ ಪ್ಲ್ಯಾನ್ ಮಾಡಿದೆ. ಇದೇ ಮೊದಲ ಬಾರಿಗೆ ಬಿಎಂಆರ್‌ಸಿಎಲ್‌ ಮೆಟ್ರೊ ನಿಲ್ದಾಣದಲ್ಲಿ ಪ್ಲಾಟ್‌ಫಾರಂ ಸ್ಕ್ರೀನ್‌ ಡೋರ್‌ ಅಳವಡಿಕೆಗೆ ಮುಂದಾಗಿದೆ.

ಇನ್ಫೋಸಿಸ್‌ ಫೌಂಡೇಶನ್‌ ಅನುದಾನದೊಂದಿಗೆ ನಿರ್ಮಾಣ ಮಾಡಲಾಗುತ್ತಿರುವ ಎಲೆಕ್ಟ್ರಾನಿಕ್ಸ್‌ ಸಿಟಿಯ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದಲ್ಲಿ ಈ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಈ ನಿಲ್ದಾಣ ಆರ್‌.ವಿ ರಸ್ತೆ – ಬೊಮ್ಮಸಂದ್ರ ಹಳದಿ ಮಾರ್ಗದ ಭಾಗವಾಗಿದ್ದು, ವರ್ಷಾಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ.

ಇನ್ನು, ಬೆಂಗಳೂರಿನಲ್ಲಿ 63‌ ಮೆಟ್ರೋ ನಿಲ್ದಾಣಗಳಿವೆ. ನಮ್ಮ ಮೆಟ್ರೋ 70 ಕಿಲೋ ಮೀಟರ್‌ಗಳಷ್ಟು ಕಾರ್ಯಾಚರಣೆ ಜಾಲವನ್ನು ಹೊಂದಿದೆ. ಅವುಗಳಲ್ಲಿ ಯಾವುದೇ ಪಿಎಸ್‌ಡಿ ವ್ಯವಸ್ಥೆ ಇಲ್ಲ. ಹೀಗಾಗಿ 135 ಕೋಟಿ ರೂಪಾಯಿ ವೆಚ್ಚದಲ್ಲಿ ವಾಕ್‌ವೇ ನಿಲ್ದಾಣ ಇನ್ಫೋಸಿಸ್‌ ಕ್ಯಾಂಪಸ್‌ನೊಂದಿಗೆ ಸಂಪರ್ಕಿಸುತ್ತದೆ. ಜತೆಗೆ ವಾಣಿಜ್ಯ ಚಟುವಟಿಕೆಗಳಿಗಾಗಿ 3 ಸಾವಿರ ಚದರ ಅಡಿ ಜಾಗ ನೀಡಲಾಗಿದೆ.

ಮೆಟ್ರೋ ಮತ್ತೂ ಸ್ಮಾರ್ಟ್

ಮೆಟ್ರೋದಲ್ಲಾಗುವ ಕೆಲವು ಅವಘಡಗಳಿಗೆ ಪಿಎಎಸ್‌ಡಿ ಬ್ರೇಕ್‌ ಹಾಕಲಿದೆ. ಅಲ್ಲದೆ ಎಸಿಯಿಂದ ಆಗುವ ಮೂವತ್ತು ಪರ್ಸೆಂಟ್ ವೆಚ್ಚ ಉಳಿತಾಯವಾಗುತ್ತೆ. ನಿಲ್ದಾಣಗಳಲ್ಲಿ ಫೋಟೊ ತೆಗೆಯುವುದು, ರೀಲ್ಸ್‌ ಮಾಡುವುದನ್ನು ತಪ್ಪಿಸಬಹುದು. ಸಣ್ಣ ಮಕ್ಕಳು ಮೆಟ್ರೋ ಹಳಿಗಳತ್ತ ಹೋಗಿ ಆಗುವ ಅನಾಹುತ ನಿಲ್ಲುತ್ತೆ. ಹೊಸದಾಗಿ ಆಗ್ತಿರುವ ಗುಲಾಬಿ ಹಾಗೂ ನೀಲಿ ಮಾರ್ಗದಲ್ಲಿ ಪಿಎಸ್​​ಡಿ ಅಳವಡಿಕೆಗೆ ಟೆಂಡರ್‌ ಕರೆಯಲಾಗಿದೆ. ಅಲ್ಲದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗುವ ಎರಡು ನಿಲ್ದಾಣಗಳಲ್ಲೂ ಕೂಡ ಪಿಎಸ್‌ಡಿ ವ್ಯವಸ್ಥೆಗೆ ಪ್ಲಾನ್‌ ಮಾಡಲಾಗಿದೆ.

ದೇಶದ ಇತರ ಮೆಟ್ರೋ ಸಿಟಿ ಚೆನ್ನೈ ಮತ್ತು ದಿಲ್ಲಿಯಲ್ಲಿ ಪಿಎಸ್‌ಡಿ ವ್ಯವಸ್ಥೆ ಅಳವಡಿಸಲಾಗಿದೆ. ಈಗ ಬೆಂಗಳೂರಿನಲ್ಲಿ ಈ‌ ಪ್ಲಾನ್ ಅಳವಡಿಕೆಗೆ ಮುಂದಾಗಿದ್ದು, ಒಳ್ಳೆಯ ನಡೆ ಅಂತ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಯಾಣಿಕರಿಗೆ ಗುಡ್​ನ್ಯೂಸ್​ ಕೊಟ್ಟ ನಮ್ಮ ಮೆಟ್ರೋ; ಏನಿದು ಸ್ಟೋರಿ?

https://newsfirstlive.com/wp-content/uploads/2023/06/Metro.jpg

Load More