newsfirstkannada.com

ಪ್ರಯಾಣಿಕರಿಗೆ ಮತ್ತೊಂದು ಗುಡ್​ನ್ಯೂಸ್​ ಕೊಟ್ಟ ನಮ್ಮ ಮೆಟ್ರೋ; ನೀವು ಓದಲೇಬೇಕಾದ ಸ್ಟೋರಿ!

Share :

11-08-2023

    ಬೆಂಗಳೂರಿನ ಜೀವನಾಡಿಯಾಗಿ ಬದಲಾಗಿರೋ ನಮ್ಮ ಮೆಟ್ರೋ

    ನಾಲ್ಕೂ ದಿಕ್ಕುಗಳಿಗೂ ಮೆಟ್ರೋ ಸೌಲಭ್ಯ ಕಲ್ಪಿಸೋಕೆ ನಿರ್ಧಾರ!

    2025ಕ್ಕೆ ಬೋಗಿಗಳು ನಮ್ಮ ಮೆಟ್ರೋಗೆ ಪೂರೈಕೆಯಾಗುವ ನಿರೀಕ್ಷೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಜೀವನಾಡಿಯಾಗಿ ಬದಲಾಗಿರೋ ನಮ್ಮ ಮೆಟ್ರೋ ದಿನೇ ದಿನೇ ವಿಸ್ತಾರಗೊಳ್ಳುತ್ತಿದೆ. ಜನರ ಅಗತ್ಯತೆಗೆ ತಕ್ಕಂತೆ ಬೆಂಗಳೂರಿನ ನಾಲ್ಕೂ ದಿಕ್ಕುಗಳಿಗೂ ಮೆಟ್ರೋ ಸೌಲಭ್ಯ ಕಲ್ಪಿಸೋಕೆ ಸರ್ಕಾರ ಅನುದಾನ ಬಿಡುಗಡೆ ಮಾಡ್ತಿದೆ. ಇದಕ್ಕೆ ಪೂರಕ ಎಂಬಂತೆ ಹೊಸದಾಗಿ 318 ಬೋಗಿಗಳನ್ನ ಪಡೆಯಲು ಮುಂದಾಗಿದೆ ನಮ್ಮ ಮೆಟ್ರೋ.

ನಮ್ಮ ಮೆಟ್ರೋದ ಎರಡನೇ ಹಂತದ ಯೋಜನೆಗಳಿಗೆ 3177 ಕೋಟಿ ಮೊತ್ತದಲ್ಲಿ 318 ಬೋಗಿಗಳನ್ನು ಪೂರೈಸುವ ಟೆಂಡರ್​ ಅನ್ನ ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ ಪಡೆದಿದೆ. ಬೋಗಿಗಳನ್ನು ಪೂರೈಸುವ ಜೊತೆಗೆ ಇದೇ ಮೊದಲ ಬಾರಿಗೆ ಹದಿನೈದು ವರ್ಷಗಳ ನಿರ್ವಹಣೆ ಹೊಣೆಯನ್ನೂ ಬಿಇಎಂಎಲ್‌ ನಿಭಾಯಿಸಲಿದೆಯಂತೆ. ಬೋಗಿ ಪೂರೈಕೆ ಸಂಬಂಧ ಬಿಡ್‌ ಸಲ್ಲಿಸಿದ್ದ ಕಂಪನಿಗಳ ಪೈಕಿ ಬಿಇಎಂಎಲ್‌ ಅತಿ ಕಡಿಮೆ ಮೊತ್ತ ಲಗತ್ತಿಸಿತ್ತು. ಸದ್ಯ ಬಿಎಂಎಂಎಲ್‌ 10 ವಂದೇ ಭಾರತ್‌ ರೈಲುಗಳ ಸ್ಲೀಪರ್‌ ಕೋಚ್‌ಗಳ ನಿರ್ಮಾಣದಲ್ಲಿ ಸಂಪೂರ್ಣವಾಗಿ ತೊಡಗಿದೆ. ಹೀಗಾಗಿ ಮುಂದಿನ ವರ್ಷಾರಂಭದಿಂದ ಈ ಬೋಗಿಗಳ ಪೂರ್ಣ ಪ್ರಮಾಣದ ನಿರ್ಮಾಣ ಕಾರ್ಯ ಆರಂಭವಾಗಲಿದೆ.

ಬೋಗಿಗಳ ಪೂರೈಕೆ

2025ಕ್ಕೆ ಈ ಬೋಗಿಗಳು ನಮ್ಮ ಮೆಟ್ರೋಗೆ ಪೂರೈಕೆಯಾಗುವ ನಿರೀಕ್ಷೆ ಇದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ತಿಳಿಸಿದ್ರು. ಮುಂಬರುವ ನೀಲಿ ಮಾರ್ಗದ 37 ಕಿಲೋ ಮೀಟರ್​ ಉದ್ದದ ಕೆ.ಆರ್‌.ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರಿಡಾರ್​ಗೆ 126 ಬೋಗಿಗಳು, 96 ಬೋಗಿಗಳನ್ನು 18.2 ಕಿಲೋ ಮೀಟರ್​ ಉದ್ದದ ರೇಷ್ಮೇ ಕೇಂದ್ರ-ಕೆ.ಆರ್‌.ಪುರಕ್ಕೆ ಪೂರೈಸಲಾಗುತ್ತಿದೆ. 21.3 ಕಿಲೋ ಮೀಟರ್​ ಉದ್ದದ ಕಾಳೇನ ಅಗ್ರಹಾರ-ನಾಗವಾರ ಮಾರ್ಗದ ಗುಲಾಬಿ ಕಾರಿಡಾರ್‌ಗೆ 96 ಬೋಗಿಗಳನ್ನು ಒದಗಿಸಲು ನಿರ್ಧರಿಸಲಾಗಿದೆ.

ಒಟ್ನಲ್ಲಿ ದಿನದಿಂದ ದಿನಕ್ಕೆ ಮೆಟ್ರೋ ಬಳಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಮೆಟ್ರೋ ವಿಸ್ತಿರ್ಣವೂ ಹೆಚ್ಚಾಗುತ್ತಿದೆ. ಇದೀಗ ಬೋಗಿಗಳ ಪೂರೈಕೆ ಟೆಂಡರ್​ ಪ್ರಕ್ರಿಯೆ ಕೂಡ ಮುಕ್ತಾಯವಾಗಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ಮತ್ತಷ್ಟು ವೇಗ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಯಾಣಿಕರಿಗೆ ಮತ್ತೊಂದು ಗುಡ್​ನ್ಯೂಸ್​ ಕೊಟ್ಟ ನಮ್ಮ ಮೆಟ್ರೋ; ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/06/namma-metro-11.jpg

Load More