/newsfirstlive-kannada/media/post_attachments/wp-content/uploads/2024/11/NANO-CAR-3.jpg)
ದೆಹಲಿಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಕೆಎಂಎಫ್​ ದೊಡ್ಡ ಖುಷಿಯ ಸುದ್ದಿಯೊಂದನ್ನ ಕೊಟ್ಟಿದೆ. ನಾಳೆಯಿಂದ ರಾಷ್ಟ್ರ ರಾಜಧಾನಿಯಲ್ಲಿ ನಂದಿನಿ ಹಾಲು ಸಿಗಲಿದೆ. ನಾಳೆಯಿಂದಲೇ ದೆಹಲಿಯಲ್ಲಿ ನಂದಿನಿ ಹಾಲು ತನ್ನ ವ್ಯಾಪಾರ ಶುರು ಮಾಡಲಿದೆ. ಅಮೂಲ್ ಹಾಗೂ ಮದರ್ ಡೈರಿಗಳಿಗೆ ಟಕ್ಕರ್ ಕೊಡಲು ಕೆಎಂಎಫ್​ ಸಜ್ಜಾಗಿದೆ.
ನಾಳೆಯಿಂದ ದೆಹಲಿಯಲ್ಲಿ ನಂದಿನಿ ಹಾಲಿಗೆ ಕೆಎಂಎಫ್​ ಚಾಲನೆ ನೀಡಲಿದೆ. ದೆಹಲಿಯ ಖಾಸಗಿ ಹೋಟೆಲ್​ನಲ್ಲಿ ಸಿಎಂ ಸಿದ್ದರಾಮಯ್ಯ ನಂದಿನಿ ಹಾಲು ಮಾರಾಟಕ್ಕೆ ಚಾಲನೆ ನೀಡಲಿದ್ದಾರೆ. ಹಲವು ತಿಂಗಳುಗಳಿಂದ ಹಸುವಿನ ಹಾಲು ಪೂರೈಕೆ ಬಗ್ಗೆ ದೆಹಲಿ ಸರ್ಕಾರ ಕೆಎಂಎಫ್​ಗೆ ಮನವಿ ಮಾಡುತ್ತಲೇ ಇತ್ತು. ಇದೇ ವಿಚಾರವಾಗಿ ದೆಹಲಿ ಸರ್ಕಾರದ ಜೊತೆ ಕೆಎಂಎಫ್​ ನಾಲ್ಕೈದು ತಿಂಗಳುಗಳಿಂದ ಮಾತುಕತೆ ನಡೆಸಿತ್ತು.
ಇದೀಗ ಮೊದಲ ಹಂತದಲ್ಲಿ 1 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಕಳುಹಿಸಲು ಕೆಎಂಎಫ್​ ಸಿದ್ಧತೆ ನಡೆಸಿದೆ. ಮುಂದಿನ ದಿನಗಳಲ್ಲಿ ದೆಹಲಿಗೆ ಒಟ್ಟು 5 ಲಕ್ಷ ಲೀಟರ್ ಹಾಲು ಪೂರೈಸುವ ಗುರಿಯಿಟ್ಟುಕೊಂಡಿದೆ. ಕೆಎಂಎಫ್​. ದೆಹಲಿಗೆ ಇದೇ ಮೊದಲ ಬಾರಿ ಏನು ಕೆಎಂಎಫ್ ಹಾಲು ಪೂರೈಸುತ್ತಿಲ್ಲ. 29 ವರ್ಷಗಳ ಹಿಂದೆಯೂ ಕೂಡ ದೆಹಲಿಗೆ ಹಸುವಿನ ಹಾಲು ಪೂರೈಕೆ ಮಾಡುತ್ತಿತ್ತು. ಬಳಿಕ ಕಾರಣಾಂತರಗಳಿಂದ ಹಾಲು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು.
ಇದನ್ನೂ ಓದಿ:ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸಜೀವ ಲಿವರ್ ಏರ್​ಲಿಫ್ಟ್.. ಸಾರ್ಥಕತೆ ಮೆರೆದ ಬಾಲಕ
ದೆಹಲಿ ಡೈರಿ ಮಾರುಕಟ್ಟೆಯಲ್ಲಿ ಅಮೂಲ್ ಹಾಗೂ ಮದರ್ ಡೈರಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿವೆ. ಈಗ ನಂದಿನಿ ಅವುಗಳೊಂದಿಗೆ ಸ್ಪರ್ಧೆಗೆ ಇಳಿಯಲಿದೆ.ಅಮೂಲ್ ಹಾಗೂ ಮದರ್ ಡೈರಿ ಇದ್ದರೂ ಕೂಡ ನಂದಿನಿ ಹಾಲು ಉತ್ಪನ್ನಗಳಿಗೆ ಭಾರೀ ಬೇಡಿಕೆ ದೆಹಲಿಯಿಂದ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ಹಾಲು ಪೂರೈಕೆ ಮಾಡಲು ಕೆಎಂಎಫ್ ಸಜ್ಜಾಗಿದೆ.
ಈಗಾಗಲೇ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕೇರಳಕ್ಕೆ ಕೆಎಂಎಫ್​ನಿಂದ ಹಾಲು ಪೂರೈಕೆ ಆಗುತ್ತಿದೆ. ಈಗ ನಾಳೆಯಿಂದ ರಾಷ್ಟ್ರ ರಾಜಧಾನಿಯನ್ನು ತಲುಪಿ ಹೊಸ ಇತಿಹಾಸ ಬರೆಯಲಿದೆ ನಂದಿನಿ ಹಾಲು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us