newsfirstkannada.com

‘ಡಿ.ಕೆ ಶಿವಕುಮಾರ್ ಮತ್ತೊಬ್ಬ ನಾಡಪ್ರಭು ಕೆಂಪೇಗೌಡ ಆಗಬೇಕು’- ನಂಜಾವಧೂತ ಸ್ವಾಮೀಜಿ

Share :

27-06-2023

    ನಾಡಪ್ರಭು ಕೆಂಪೇಗೌಡರ ರಕ್ತ ಶಿವಕುಮಾರರಲ್ಲಿ ಹರಿಯುತ್ತಿದೆ

    ಎಸ್.ಎಂ ಕೃಷ್ಣ, ಹೆಚ್‌.ಡಿ ದೇವೇಗೌಡರ ಸಾಲಿಗೆ ಶಿವಕುಮಾರ್

    ಕೆಂಪೇಗೌಡರ 514ನೇ ಜಯಂತಿ ಆಚರಣೆ ವೇಳೆ ಶ್ರೀಗಳ ಹೇಳಿಕೆ

ಬೆಂಗಳೂರು: ನಾಡಿನೆಲ್ಲೆಡೆ ಇಂದು ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನ ಸಂಭ್ರಮದಿಂದ ಆಚರಿಸಲಾಗ್ತಿದೆ. ಜಯಂತೋತ್ಸವದಲ್ಲಿ ಮಾತನಾಡಿದ ನಂಜಾವಧೂತ ಶ್ರೀಗಳು ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನ ಹಾಡಿ ಹೊಗಳಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತೊಬ್ಬ ಕೆಂಪೇಗೌಡ ಆಗಬೇಕು. ಶಿವಕುಮಾರರ ಹೆಸರು ಶಿವಕುಮಾರ್ ಕೆಂಪೇಗೌಡ. ಅವರ ಪುತ್ರರ ಹೆಸರೂ ಕೂಡ ಆಕಾಶ್ ಕೆಂಪೇಗೌಡ. ಕೆಂಪೇಗೌಡರ ರಕ್ತ ಶಿವಕುಮಾರರಲ್ಲಿ ಹರಿಯುತ್ತಿದೆ ಎಂದು ಹೇಳಿದ್ದಾರೆ.

ಕೆಂಪೇಗೌಡ ಜಯಂತಿ ಆಚರಣೆ ವೇಳೆ ಆಶೀರ್ವಚನ ನೀಡಿದ ನಂಜಾವಧೂತ ಶ್ರೀಗಳು, ಕೆಂಪೇಗೌಡರು ಸದಾ ಪ್ರಸ್ತುತವಾಗಿ ಇರುವವರು. ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ದೊಡ್ಡ ಪುತ್ಥಳಿ ಅನಾವರಣ ಆಯಿತು. ಸರ್ಕಾರದ ವತಿಯಿಂದ ಕೆಂಪೇಗೌಡರ ಜಯಂತಿ ಆಗ್ತಿದೆ. ಪಠ್ಯ ಪುಸ್ತಕದಲ್ಲಿ ಕೆಂಪೇಗೌಡರ ಇತಿಹಾಸ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಬೆಂಗಳೂರಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

ಮಾಜಿ ಸಿಎಂಗಳಾದ ಎಸ್.ಎಂ ಕೃಷ್ಣ, ದೇವೇಗೌಡರು ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಿದವರು. ಅವರ ಸಾಲಿಗೆ ಡಿ.ಕೆ ಶಿವಕುಮಾರ್ ಸೇರ್ತಾರೆ. ಶಿವಕುಮಾರ್ ಮತ್ತೊಬ್ಬ ಕೆಂಪೇಗೌಡ ಆಗಬೇಕು. ಶಿವಕುಮಾರರ ಹೆಸರು ಶಿವಕುಮಾರ್ ಕೆಂಪೇಗೌಡ ಎಂದು. ಕೆಂಪೇಗೌಡರ ಹೆಸರಲ್ಲಿ ಬೆಂಗಳೂರು ಹಬ್ಬವಾಗಲಿ. ಕೆಂಪೇಗೌಡರ ಹೆಸರಲ್ಲಿ ವಿಶ್ವವಿದ್ಯಾಲಯ ಹಾಗೂ ಜಿಲ್ಲೆ ಆಗಲಿ ಎಂದು ಕರೆ ನೀಡಿದರು.

ಇದೇ ವೇಳೆ ವಿಶ್ವ ಒಕ್ಕಲಿಗ ಮಹಾಸಂಸ್ಥನದ ಚಂದ್ರಶೇಖರನಾಥ ಸ್ವಾಮೀಜಿ, ಶಿವಕುಮಾರ್ ಸಿಎಂ ಆಗಬೇಕು ಎಂಬುದು ನಮ್ಮ ಆಶಯ. ನೆಮ್ಮದಿಗಾಗಿ ಕುಲ ದೇವರನ್ನ ಆರಾಧಿಸಿ. ಈ ಸರ್ಕಾರ ಚೆನ್ನಾಗಿರಲಿ, ಶಿವಕುಮಾರ್ ಚೆನ್ನಾಗಿ ಅಭಿವೃದ್ಧಿ ಹೊಂದಲಿ ಎಂದು ಆಶೀರ್ವದಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ಡಿ.ಕೆ ಶಿವಕುಮಾರ್ ಮತ್ತೊಬ್ಬ ನಾಡಪ್ರಭು ಕೆಂಪೇಗೌಡ ಆಗಬೇಕು’- ನಂಜಾವಧೂತ ಸ್ವಾಮೀಜಿ

https://newsfirstlive.com/wp-content/uploads/2023/06/Najavadoota-Swamiji.jpg

Load More