ಕೇವಲ 47 ಸಂಚಿಕೆಗಳನ್ನು ಪೂರೈಸಿರೋ ನನ್ನ ದೇವ್ರು ಸೀರಿಯಲ್!
ಅಶ್ವಿನಿ ನಕ್ಷತ್ರ ನಂತರ ಸೀರಿಯಲ್ಗೆ ಮರಳಿದ್ರು ನಟಿ ಮಯೂರಿ
ನರಸಿಂಹ ರಾಜು ಅವರ ಮೊಮ್ಮಗ ಅವಿನಾಶ್ ದಿವಾಕರ್ ಅಭಿನಯ
ಕಿರುತೆರೆಯಲ್ಲಿ ಕೆಲವು ಧಾರಾವಾಹಿಗಳು ಕ್ಲಿಕ್ ಆದ್ರೆ ಮತ್ತೊಂದಿಷ್ಟು ಬಂದಷ್ಟೇ ವೇಗದಲ್ಲಿ ಮುಕ್ತಾಯವಾಗುತ್ತೆ. ಇತ್ತೀಚಿಗಷ್ಟೇ ಅದ್ಧೂರಿಯಾಗಿ ಲಾಂಚ್ ಆಗಿದ್ದ ಧಾರಾವಾಹಿ ಒಂದು ಬಂದಷ್ಟೇ ವೇಗದಲ್ಲಿ ಮುಕ್ತಾಯವಾಗ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ.
ಕೇವಲ 47 ಸಂಚಿಕೆಗಳನ್ನು ಪೂರೈಸಿರೋ ನನ್ನ ದೇವ್ರು ತನ್ನ ಕಥೆಗೆ ಶುಭಂ ಹೇಳ್ತಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಶ್ರುತಿ ನಾಯ್ಡು ಅವರ ನಿರ್ಮಾಣ ರಮೇಶ್ ಇಂದಿರಾ ಅವರ ನಿರ್ದೇಶನ ಹೊಂದಿದ್ದ ಕಥೆ ನನ್ನ ದೇವ್ರು. ಅಶ್ವಿನಿ ನಕ್ಷತ್ರ ನಂತರ ಲಾಂಗ್ ಗ್ಯಾಪ್ ಬಳಿಕ ನನ್ನ ದೇವ್ರು ಮೂಲಕ ಸೀರಿಯಲ್ಗೆ ಮರಳಿದ್ರು ನಟಿ ಮಯೂರಿ.
ಇದನ್ನೂ ಓದಿ: ಸೀರಿಯಲ್ ವೀಕ್ಷಕರಿಗೆ ಗುಡ್‌ನ್ಯೂಸ್.. ರಾಮಾಚಾರಿ, ಕರಿಮಣಿ, ಅಂತರಪಟ ಸ್ಲಾಟ್ ಚೇಂಜ್; ಕಾರಣ ಇದೇನಾ?
ನಾಯಕನ ಪಾತ್ರದಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಅವರ ಮೊಮ್ಮಗ ನಟ ಅವಿನಾಶ್ ದಿವಾಕರ್ ಅಭಿನಯಿಸಿದ್ದಾರೆ. ಮಯೂರಿ ಹಾಗೂ ಅವಿನಾಶ್ ಇಬ್ಬರೂ ಹೊಸ ಭರವಸೆ ಮೂಲಕ ಎಂಟ್ರಿ ಕೊಟ್ಟಿದ್ದರು.
ಇನ್ನೂ ನನ್ನ ದೇವ್ರು ಮುಕ್ತಾಯದ ಸುದ್ದಿ ಹರಡೋಕೆ ಮುಖ್ಯ ಕಾರಣ ಟಿಆರ್ಪಿ ಅಂತ ಹೇಳಲಾಗುತ್ತಿದೆ. ಸಂಜೆ 6.30ರ ಸ್ಲಾಟ್ನಲ್ಲಿ ಬರ್ತಿದ್ದ ನನ್ನ ದೇವ್ರು ಸದ್ಯ ಸಮಯ ಬದಲಾಯಿಸಿಕೊಂಡಿದೆ. ಧಾರಾವಾಹಿ ಇನ್ನು ಸ್ವಲ್ಪ ದಿನ ಮುಂದುವರೆಯಲಿದೆ.
ನನ್ನ ದೇವ್ರು ಸ್ಥಾನಕ್ಕೆ ಹೊಸ ಧಾರಾವಾಹಿ ದೃಷ್ಟಿ ಬೊಟ್ಟು ಬರ್ತಿದೆ. ವಿಜಯ್ ಸೂರ್ಯ, ಅರ್ಪಿತಾ ಮೊಹಿತೆ ಲೀಡ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಸೆಪ್ಟಂಬರ್ 9 ರಿಂದ ದೃಷ್ಟಿಬೊಟ್ಟು ಸಂಜೆ 6.30ಕ್ಕೆ ತೆರೆಗೆ ಬರುತ್ತಿದ್ದು, ನನ್ನ ದೇವ್ರು ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ